ಭಾನುವಾರ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನ ಫೈನಲ್ ಫೈಟ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ.
ವಿಶೇಷ ಎಂದರೆ ಈ ಪಂದ್ಯದಲ್ಲಿ ವಿಶೇಷ ದಾಖಲೆ ಬರೆಯುವ ಅತ್ಯುತ್ತಮ ಅವಕಾಶ ಕೆಎಲ್ ರಾಹುಲ್ ಮುಂದಿದೆ.
ಅಂದರೆ ಈ ಬಾರಿಯ ವಿಶ್ವಕಪ್ ನ 10 ಪಂದ್ಯಗಳಿಂದ ಕೆಎಲ್ ರಾಹುಲ್ 15 ಕ್ಯಾಚ್ ಗಳನ್ನು ಹಿಡಿದಿದ್ದಾರೆ. ಹಾಗೆಯೇ ಒಂದು ಸ್ಟಂಪಿಂಗ್ ಮಾಡಿದ್ದಾರೆ. ಈ ಮೂಲಕ 2015 ರ ಏಕದಿನ ವಿಶ್ವಕಪ್ನಲ್ಲಿ 15 ಕ್ಯಾಚ್ ಗಳನ್ನು ಹಿಡಿದು ದಾಖಲೆ ಬರೆದಿದ್ದ ಧೋನಿಯ ರೆಕಾರ್ಡ್ ಅನ್ನು ಕೆಎಲ್ ರಾಹುಲ್ ಮುರಿದಿದ್ದಾರೆ.
ಅಷ್ಟೇ ಅಲ್ಲದೆ ಏಕದಿನ ವಿಶ್ವಕಪ್ ನಲ್ಲಿ ವಿಕೆಟ್ ಹಿಂದೆ ಒಟ್ಟು 16 ಬಲಿ ಪಡೆದಿದ್ದ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. 2003 ರ ವಿಶ್ವಕಪ್ನಲ್ಲಿ ದ್ರಾವಿಡ್ 15 ಕ್ಯಾಚ್+1 ಸ್ಟಂಪಿಂಗ್ ಮೂಲಕ ಮಿಂಚಿದ್ದರು. ಈ ಮೂಲಕ ವಿಶ್ವಕಪ್ ಆವೃತ್ತಿಯಲ್ಲಿ ಅತೀ ಹೆಚ್ಚು ಯಶಸ್ಸು ಪಡೆದ ಭಾರತೀಯ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದರು.
ಇದೀಗ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಕೆಎಲ್ ರಾಹುಲ್ ಸರಿಗಟ್ಟಿದ್ದಾರೆ. ಒಂದು ವೇಳೆ ಫೈನಲ್ ಪಂದ್ಯದಲ್ಲಿ 1 ಕ್ಯಾಚ್ ಅಥವಾ 1 ಸ್ಟಂಪಿಂಗ್ ಮಾಡಿದರೆ, ಏಕದಿನ ವಿಶ್ವಕಪ್ ಆವೃತ್ತಿಯೊಂದರ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ದಾಖಲೆ ಕೆಎಲ್ ರಾಹುಲ್ ಪಾಲಾಗಲಿದೆ.
ಇನ್ನು ಈ ಬಾರಿಯ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಪರ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಕೆಎಲ್ ರಾಹುಲ್ 9 ಇನಿಂಗ್ಸ್ ಗಳಿಂದ 386 ರನ್ ಕಲೆಹಾಕಿದ್ದಾರೆ. ಈ ಮೂಲಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಜೊತೆಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಈ ಬಾರಿಯ ವಿಶ್ವಕಪ್ ನ ಅತ್ಯಂತ ಯಶಸ್ವಿ ವಿಕೆಟ್ ಕೀಪರ್ ಗಳು:
20 – ಕ್ವಿಂಟನ್ ಡಿ ಕಾಕ್ (19 ಕ್ಯಾಚ್ ಗಳು, 1 ಸ್ಟಂಪಿಂಗ್)
16 – ಕೆಎಲ್ ರಾಹುಲ್ (15 ಕ್ಯಾಚ್, 1 ಸ್ಟಂಪಿಂಗ್)
15 – ಸ್ಕಾಟ್ ಎಡ್ವರ್ಡ್ಸ್ (13 ಕ್ಯಾಚ್, 2 ಸ್ಟಂಪಿಂಗ್)
11 – ಜೋಸ್ ಬಟ್ಲರ್ (9 ಕ್ಯಾಚ್, 1 ಸ್ಟಂಪಿಂಗ್)
11 – ಜೋಶ್ ಇಂಗ್ಲಿಸ್ (9 ಕ್ಯಾಚ್, 2 ಸ್ಟಂಪಿಂಗ್).