ಬೆಂಗಳೂರು : ನಂದಿನಿ ತುಪ್ಪಕ್ಕೆ ಎಲ್ಲೆಲ್ಲಿದ ಬೇಡಿಕೆ ಇದೆ. ಅದರಲ್ಲೂ ತಿರುಪತಿ ತಿಮ್ಮಪ್ಪನಿಗೂ ನಮ್ಮ ಕೆಂಎಫ್ ನಂದಿನಿ ತುಪ್ಪ ಬೇಕು. ಇದನ್ನೇ ಬಂಡವಾಳ ಮಾಡಿಕೊಂಡ ನಕಲಿ ತುಪ್ಪ ಮಾರಾಟ ಮಾಡುವ ಜಾಲ ಪತ್ತೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಕೆಎಂಎಫ್ ಭರ್ಜರಿ ಪ್ಲಾನ್ ಮಾಡಿದೆ.
ಕೆಎಂಎಫ್‌ಗೂ ನಕಲಿ ಉತ್ಪನ್ನಗಳ ಹಾವಳಿ ಜೋರಾಗಿ ತಟ್ಟಿದೆ. ಅದೂ ಪದೇ ಪದೇ ನಕಲಿ ಹಾವಳಿಗೆ ಸಿಲುಕಿ ನಲುಗುತ್ತಿರೋ ಕೆಎಂಎಫ್ ಈಗ ನಕಲಿ ಶೂರರಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಪ್ಲಾನ್ ರೂಪಿಸಿದೆ. ಇಡೀ ದೇಶದಲ್ಲಿ ತನ್ನದೇ ಆದ ವಿಶಿಷ್ಟ ರುಚಿ ಹೊಂದಿರೋ ಕೆಎಂಎಫ್ ತುಪ್ಪವನ್ನು ನಕಲಿ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಈ ನಕಲಿ ತುಪ್ಪ ಜಾಲವನ್ನ ಪತ್ತೆ ಹಚ್ಚಿದ್ದ ಕೆಎಂಎಫ್ ಈಗ ರಾಜ್ಯಾದ್ಯಂತ ನಕಲಿ ತುಪ್ಪ ಹಾವಳಿ ತಡೆಗಟ್ಟೋಕೆ ನೇರ ಹೆಡ್ ಶಾಟ್ ಕೊಡಲು ಪ್ಲಾನ್ ರೂಪಿಸುತ್ತಿದೆ.
ಕೆಟ್ಟ ಮೇಲೆ ಕೊನೆಗೂ ಬುದ್ದಿ ಕಲಿತ ಕೆಎಂಎಫ್ ನಂದಿನಿ ಬ್ರ‍್ಯಾಂಡ್‌ಗೆ ಹೊಡೆತ ಬೀಳಬಾರದು ಅಂತ ಆಹಾರ ಇಲಾಖೆ ತಜ್ಞರ ಜೊತೆ ಚರ್ಚಿಸಿ ಮಾಸ್ಟರ್ ಪ್ಲಾನ್ ಮಾಡಿದೆ. ಅದೇನು ಅಂದ್ರೆ ಇನ್ಮುಂದೆ ನಂದಿನಿ ತುಪ್ಪದ ಪ್ಯಾಕೇಜ್ ಅಥವಾ ಡಬ್ಬಿಯಲ್ಲಿ ಕ್ಯೂಆರ್ ಕೋಡ್ ಈಗ ಇರೋದನ್ನ ಮತ್ತಷ್ಟು ಸ್ಟ್ರಾಂಗ್ ಮಾಡುತ್ತಿದೆ. ಈ ಕ್ಯೂಆರ್ ಕೋಡ್ ಇದ್ದರೆ ನಕಲು ಮಾಡಲು ಆಗೋದಿಲ್ಲ.
ಕ್ಯೂಆರ್ ಕೋಡ್ ಮೂಲಕ ಗ್ರಾಹಕರು ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದರಿಂದ ಗ್ರಾಹಕರು ಖರೀದಿ ಮಾಡಿರೋದು ಅಸಲಿಯೋ ನಕಲಿಯೋ ಅನ್ನೋದು ಗ್ರಾಹಕರೇ ತಿಳಿಯಬಹುದು.














