ಮನೆ ರಾಜ್ಯ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬಗೆಹರಿಯದ ಕೊಡಗು ಜಿಲ್ಲೆಯ ಸಮಸ್ಯೆ : ಎಎಪಿ

10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಬಗೆಹರಿಯದ ಕೊಡಗು ಜಿಲ್ಲೆಯ ಸಮಸ್ಯೆ : ಎಎಪಿ

0

ಕೊಡಗು: ಕರ್ನಾಟಕ ರಾಜ್ಯದಲ್ಲಿ ಇರುವ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಮೂರು ರೀತಿಯ ಸಮಸ್ಯೆಗಳು ಇದೆ.  ಎಂದು ಎಎಪಿ ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ

ಮೊದಲನೆಯದಾಗಿ ಪ್ರಾಕೃತಿಕ ಸಮಸ್ಯೆ : ಇದು ಗುಡ್ಡ ಬೆಟ್ಟ ಪ್ರದೇಶ ಎಲ್ಲಾ ಕಾಲದಲ್ಲೂ ನೈಸರ್ಗಿಕ ಆಪತ್ತು ಸಮಸ್ಯೆ ಇತ್ತು ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಇದರ ತೀವ್ರತೆ ಮತ್ತು ಪರಿಣಾಮ ಬಹಳಷ್ಟು ಇದೆ. ಬರೆಕುಸಿತ, ಪ್ರವಾಹ, ನೆರೆ ಸಮಸ್ಯೆ, ಭೂಕುಸಿತ, ಅತಿವೃಷ್ಟಿ ಇದು ಎಲ್ಲಾದಕ್ಕೂ ಸರ್ಕಾರದ ನೀತಿ ನಿಯಮಗಳಿಂದ ಕಾಡು ಮರ ಕಡಿಯುವ ಉಲ್ಬಣಗೊಂಡು ಭಾರೀ ಸುದ್ದಿ ಆಗಿದೆ.

ಹಿಂದೆ ಸಣ್ಣ ಪುಟ್ಟ ಬರೆಕುಸಿತ ಭೂಕುಸಿತ ಆಗುತ್ತಿತ್ತು ಆದರೆ ಕೆಲವು ವರ್ಷಗಳಿಂದ ಮಳೆಗಾಲ ಬಂತೆಂದರೆ ಜನ ಭಯದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರಮಟ್ಟದ ಸುದ್ದಿ ಆಗುತ್ತಿರುವ ಇದು ಸರ್ಕಾರದ ನೀತಿಗಳು ಕಾರಣ.

ಅರಣ್ಯ ಪ್ರದೇಶ ಆಗಿರುವುದರಿಂದ ಇಲ್ಲಿ ಆನೆ, ಹುಲಿ, ಹಾವು, ಕೋತಿಗಳ ಹಾವಳಿ ಇದೆ ಇದರ ತೀವ್ರತೆ ಇತ್ತೀಚೆಗೆ ಬಹಳಷ್ಟು ಆಗಿದೆ. ಮಾನವ ಪ್ರಾಣಿ ಸಂಘರ್ಷ ಮಿತಿಮೀರಿದೆ.

ಎರಡನೆಯದು ಆಡಳಿತ ಸಮಸ್ಯೆಗಳು: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಇದರ ಪರಿಣಾಮ ಎದ್ದು ಕಾಣುತ್ತದೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ,ಲೈನ್ ಮೆನ್ ಗಳ ಕೊರತೆ, ಪಿಡಿಯೋ ಗಳ ಕೊರತೆ  ಅಧಿಕಾರಿಗಳು ನೇಮಕಾತಿ, ಸರ್ಕಾರಿ ಬಸ್ಸು ಇಲ್ಲದೆ ಇರುವುದು, ಮೂಲಭೂತ ಸೌಕರ್ಯ ಇಲ್ಲದೆ ಇರುವುದು. ಕಂದಾಯ ಇಲಾಖೆ ಸರಿಯಾಗಿ ದಾಖಲೆ ಇಲ್ಲ. ಕುಶಾಲನಗರದ ವರೆಗೆ ರೈಲು ಯೋಜನೆ ಮಾಡಲು ಸಾಧ್ಯ ಆಗಲಿಲ್ಲ. ಸೇನೆ ನೇಮಕಾತಿ ಕೇಂದ್ರ ಇಲ್ಲ, ಪಾಸ್ಪೋರ್ಟ್ ಕೇಂದ್ರ ಇಲ್ಲ. ಸಂಪತ್ತು ಭರಿತ ಇದೆ, ಯುವಕರು ಬೇರೆ ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಬಹಳಷ್ಟು ಜಿಲ್ಲೆಯಿಂದ ಸೇವೆ ಸಲ್ಲಿಸಿರುವ ಮಾಜಿ ಸೈನಿಕರಿಗೆ ಭೂಮಿ ಮಂಜೂರಾತಿ ಆಗಿಲ್ಲ. ಜಿಲ್ಲೆಯ ಮೂಲ ಆರ್ಥಿಕತೆ ಕೃಷಿ ಅವಲಂಬಿತವಾಗಿದೆ, ಹೆಚ್ಚು ಉದ್ಯೋಗ ಇರುವುದು ಕೃಷಿಯಲ್ಲಿ ಜನರಿಗೆ ಬೇರೆ ಆದಾಯ ಮಾರ್ಗ ಇಲ್ಲ.

ಕೊನೆಯದು ರಾಜಕೀಯ ಸಮಸ್ಯೆ: ಈ ಕೊಡಗು ಪ್ರದೇಶದ ಒಂದು ಗುರುತು ಇದೆ, ಆ (ಐಡೆಂಟಿಟಿ) ಸ್ವಾತಂತ್ರ್ಯ ನಂತರ ನಿರಂತರವಾಗಿ ಮಾಯವಾಗುತ್ತಿದೆ.ಸ್ವಾತಂತ್ರ್ಯ ನಂತರ ಒಂದು ಲೋಕಸಭೆ ಒಂದು ರಾಜ್ಯಸಭಾ ಸದಸ್ಯ ಇತ್ತು ಅದು ಹೋಯಿತು. ಜನ ಸಾಮಾನ್ಯರ ಕೂಗು ದೆಹಲಿಗೆ ತಲುಪಲು ಜಿಲ್ಲೆಯ ಪ್ರತಿನಿಧಿ ಇಲ್ಲ. ಈ‌ ರಾಜಕೀಯ ಸಮಸ್ಯೆ ಸ್ವಾತಂತ್ರ್ಯ ಪೂರ್ವದಲ್ಲಿ  ಶುರುವಾಗಿದೆ.

ತುಂಬಾ ಹಳೆಯ ವರ್ಷದ ಹಿಂದೆ ಕೊಡಗು ಒಂದು ಪ್ರಾಂತ್ಯ ಆಗಿತ್ತು ಅದು ಪುತ್ತೂರು ನಿಂದು ವಯನಾಡು-ಗುಡಲೂರು ವರೆಗೆ ಇತ್ತು ಬ್ರಿಟಿಷ್ ವಿರುದ್ಧ ಅಂದು ಎಲ್ಲಾ ಸಮುದಾಯಗಳು ಒಟ್ಟಿಗೆ ಹೊರಟ ನಡೆಸಿದ್ದಾರೆ. ಆವಾಗ ಪಕ್ಕದ ಮೈಸೂರು ಪ್ರಾಂತ್ಯ ಬ್ರಿಟಿಷ್ ವಶದಲ್ಲಿ ಇತ್ತು, ಕೊಡಗು ಪ್ರಾಂತ್ಯ ಬ್ರಿಟಿಷ್ ವಶಕ್ಕೆ ತೆಗೆದುಕೊಂಡಲ್ಲಿಂದ ಇಂದಿನವರೆಗೆ  ರಾಜಕೀಯ ಐಡೆಂಟಿಟಿ ಕಳೆದುಕೊಳ್ಳುತ್ತ ಇದ್ದೇವೆ. 1834 ನಂತರ ಇಡೀ ಪ್ರಾಂತ್ಯ ಮೂರು ಭಾಗ ಆಯಿತು, ನಂತರ ಸಿ ರಾಜ್ಯ ಆಗಿ ಸ್ವಾತಂತ್ರ್ಯ ನಂತರ ಜಿಲ್ಲೆಗೆ ಇಳಿಯಿತು,ಒಂದು ಲೋಕಸಭೆ ಒಂದು ರಾಜ್ಯ ಸಭೆ ಸೀಟು ಇತ್ತು ಅದು ಕೂಡ ಹೋಯಿತು ನಂತರ ಮೂರು ವಿಧಾನಸಭೆ ಇತ್ತು ಈಗ ಒಂದು ಹೋಗಿ ಎರಡು ಇದೆ. ಇತ್ತೀಚಿನ ವರ್ಷಗಳಲ್ಲಿ ಗೆದ್ದು ಬಂದ ಶಾಸಕರಿಗೆ ತಮ್ಮದೇ ಪಕ್ಷದ ರಾಜ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ದೊರಕದೆ ಇನ್ನಷ್ಟು ಕೊಡಗಿಗೆ ರಾಜಕೀಯ ಇನ್ನಡೆ ಆಗುತ್ತಿದೆ. ಕಳೆದ 10 ವರ್ಷಗಳಲ್ಲಿ ಮೈಸೂರು ಕೊಡಗು ಸಂಸದರು ಆಗಿರುವವರು ಜಿಲ್ಲೆಯ ಹೊರಗಿನವರು ಅಥವಾ ಕ್ಷೇತ್ರಕ್ಕೆ ಸೇರಿದವರು ಆಗಿದ್ದಾರೆ.

 ಪ್ರವಾಸಿಗರು ಸಂಸದರು ಆಗಿರುವುದು ವಿಶೇಷ.ಇವುಗಳಿಂದ ಕೊಡಗು ಜಿಲ್ಲೆಯ ಸಾಮಾನ್ಯ ಜನರ ಜೀವನ ದುಸ್ತರ ಆಗಿದೆ.

ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯ, ನದಿ ಅರಣ್ಯ, ಕಾಫಿ ಸೈನಿಕರ ನಾಡು ಜೊತೆಗೆ ಸರ್ಕಾರಗಳ ನೀತಿಯಿಂದ ಇದು ಸಮಸ್ಯೆಗಳ‌ ನಾಡು ಕೂಡ ಆಗಿದೆ. ಕೇಂದ್ರದ ಮೋದಿ ಸರ್ಕಾರಕ್ಕೆ 10 ವರ್ಷಗಳಲ್ಲಿ ಕೊಡಗು ಜಿಲ್ಲೆಯ ಒಂದು ಸಮಸ್ಯೆ ಬಗೆಹರಿಸಲು ಆಗಿಲ್ಲ.