ಚಾಮರಾಜನಗರ: ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ತಾಲೂಕಿನ ಕೋಡಿಮೋಳೆ ಗ್ರಾಮದ ಶಿವನಂಜಶೆಟ್ಟಿ ಅವರು ಕಂಚಿನ ಪದಕ ಪಡೆದು ಭಾರತ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇನ್ ಪೆಕ್ಟರ್ ಶಿವನಂಜಶೆಟ್ಟಿ ಅವರು ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದವರಾಗಿದ್ದು, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್ ಪೆಕ್ಟರ್ ಸೇವೆ ಸಲ್ಲಿಸುತ್ತಿದ್ದು, ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಾವೆಲಿನ ವಿಭಾಗದಲ್ಲಿ ಕಂಚಿನ ಪದಕ ಪಡೆದು ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅವರು ಕಂಚಿನ ಪದಕ ಪಡೆದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಬರುತ್ತಿದ್ದ ಇನ್ ಸ್ಪೆಕ್ಟರ್ ಶಿವನಂಜಶೆಟ್ಟಿ ಅವರನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಕೋಡಿಮೋಳೆ ಗೋವಿಂದಶೆಟ್ಟಿ ಆಲೂರುಮಲ್ಲು, ಉಡಿಗಾಲ ಲೋಕೇಶ್, ಹರದನಹಳ್ಳಿ ರಮೇಶ್ ಭೇಟಿ ಮಾಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಲೂರುಮಲ್ಲು ಮಾತನಾಡಿ, ಕೋಡಿಮೋಳೆ ಗ್ರಾಮದ ಗೋವಿಂದಶೆಟ್ಟಿ ಅವರ ಸಹೋದರಾದ ಶಿವನಂಜಶೆಟ್ಟಿ ಅವರು ಇನ್ ಪೆಕ್ಟರ್ ಶಿವನಂಜಶೆಟ್ಟಿ ಅವರು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇನ್ ಪೆಕ್ಟರ್ ರಾಗಿ ಸೇವೆ ಸಲ್ಲಿಸುತ್ತಿದ್ದು, ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಂಚಿನಪದಕ ಪಡೆಯುವ ಮೂಲಕ ಭಾರತ, ಕರ್ನಾಟಕ ರಾಜ್ಯ, ಚಾಮರಾಜನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಅವರಿಗೆ ಜಿಲ್ಲೆಯ ಜನತೆ ಪರವಾಗಿ ಅಭಿನಂದಿಸಲಾಗಿದೆ ಅವರು. ಪೊಲೀಸ್ ಇಲಾಖೆ, ಕ್ರೀಡಾಕೂಟದಲ್ಲಿ ಹೆಚ್ಚು ಸಾಧನೆ ಮಾಡಲಿ ಎಂದು ಆಶಿಸಿದರು