ಮನೆ ಕ್ರೀಡೆ ಕೊಹ್ಲಿ ಶತಕದ ಟೆಸ್ಟ್ ಪಂದ್ಯ: ವಿಶೇಷ ಟೆಸ್ಟ್ ಕ್ಯಾಪ್ ನೀಡಿ ಗೌರವ

ಕೊಹ್ಲಿ ಶತಕದ ಟೆಸ್ಟ್ ಪಂದ್ಯ: ವಿಶೇಷ ಟೆಸ್ಟ್ ಕ್ಯಾಪ್ ನೀಡಿ ಗೌರವ

0

ಮೊಹಾಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 100ನೇ ಪಂದ್ಯವನ್ನಾಡುತ್ತಿದ್ದು ಪಂದ್ಯಕ್ಕೂ ಮೊದಲು ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಕೊಹ್ಲಿಗೆ ನೂರನೇ ಟೆಸ್ಟ್ ನ ವಿಶೇಷ ಕ್ಯಾಪ್ ನೀಡಿ ಗೌರವಿಸಿದರು. 

ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ತಂಡದ ನಾಯಕ ರೋಹಿತ್ ಶರ್ಮಾ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. 

ನೂರನೇ ಪಂದ್ಯದ ಖುಷಿಯಲ್ಲಿರುವ ಕೊಹ್ಲಿಗೆ ವಿಶೇಷ ಕ್ಯಾಪ್ ನೀಡುವ ವೇಳೆ ಪತ್ನಿ ಅನುಷ್ಕಾ ಶರ್ಮಾ ಕೂಡ ಮೈದಾದನಲ್ಲಿದ್ದರು. ಇನ್ನು ಕ್ಯಾಪ್ ಪಡೆದ ಕೊಹ್ಲಿ ನನ್ನ ಬಾಲ್ಯದ ಹೀರೋಗಳಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಅವರಿಂದ 100ನೇ ಟೆಸ್ಟ್ ಕ್ಯಾಪ್ ಪಡೆದಿದ್ದು ತುಂಬಾ ಖುಷಿ ತಂದಿದೆ ಎಂದರು. 

ಇದೇ ವೇಳೆ ದ್ರಾವಿಡ್ ಸಹ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದು ಕೊಹ್ಲಿಗೆ ಸಿಕ್ಕ ಅತ್ಯಂತ ಅರ್ಹ ಗೌರವ. ಇದನ್ನು ಅರ್ಹತೆಯಿಂದ ಸಂಪಾದಿಸಿದ್ದೀರಾ. ಈ ಸಂಭ್ರಮವನ್ನು ಗೆಲುವಿನ ಮೂಲಕ ದ್ವಿಗುಣಗೊಳಿಸೋಣ ಎಂದು ಹೇಳಿದ್ದಾರೆ.

ಟೆಸ್ಟ್ ನಲ್ಲಿ 99 ಪಂದ್ಯಗಳನ್ನಾಡಿರುವ ಕೊಹ್ಲಿ 50.39ರ ಸರಾಸರಿಯಲ್ಲಿ 7,962 ರನ್ ಬಾರಿಸಿದ್ದಾರೆ. ಇನ್ನು 28 ಅರ್ಧ ಶತಕ ಸಿಡಿಸಿರುವ ಅವರು 27 ಶತಕ ಬಾರಿಸಿದ್ದಾರೆ. ಅಜೇಯ 254 ರನ್ ಅವರ ಟೆಸ್ಟ್ ವೃತ್ತಿ ಬದುಕಿನ ಅತೀ ಹೆಚ್ಚು ರನ್ ಆಗಿದೆ.