ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳ ಭರ್ತಿಗೆ ಅಧಿಸೂಚಿಸಿ, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ತಮ್ಮ ಅಪ್ಲಿಕೇಶನ್ ಸಲ್ಲಿಸಬಹುದು. ಅರ್ಜಿಗೆ ಮಾರ್ಚ್ 02 ರಿಂದ ಅವಕಾಶ ನೀಡಿದ್ದು, ಮಾರ್ಚ್ 16 ರವರೆಗೂ ಅರ್ಜಿ ಹಾಕಬಹುದಾಗಿದೆ. ಪದವಿ, ಎಸ್ಎಸ್ಎಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ಕುರಿತ ಕಂಪ್ಲೀಟ್ ಡೀಟೇಲ್ಸ್ ಕೆಳಗಿನಂತಿದೆ.
ಹುದ್ದೆಗಳ ವಿವರ
ಅಕೌಂಟಂಟ್ : 09
ಹಿರಿಯ ಸಹಾಯಕರು : 14
ಡ್ರೈವರ್ : 03
ಜವಾನ : 10
ಹುದ್ದೆವಾರು ವಿದ್ಯಾರ್ಹತೆ
ಅಕೌಂಟಂಟ್ : ಪದವಿ ಪಾಸ್ ಮಾಡಿರಬೇಕು. ಕಂಪ್ಯೂಟರ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್ ಪಾಸ್ ಮಾಡಿರಬೇಕು.
ಹಿರಿಯ ಸಹಾಯಕರು : ಪದವಿ ಪಾಸ್ ಮಾಡಿರಬೇಕು. ಕಂಪ್ಯೂಟರ್ ಜ್ಞಾನದ ಜತೆಗೆ ಟ್ಯಾಲಿ ಕೋರ್ಸ್ ಪಾಸ್ ಮಾಡಿರಬೇಕು.
ಡ್ರೈವರ್ : ಹತ್ತನೇ ತರಗತಿ ಪಾಸ್ ಮಾಡಿರಬೇಕು. ಲಘು ವಾಹನ ಚಾಲನೆ (ಡ್ರೈವಿಂಗ್ ಲೈಸನ್ಸ್) ಪರವಾನಗಿ ಪಡೆದಿರಬೇಕು.
ಜವಾನ : 10ನೇ ತರಗತಿ ಪಾಸ್ ಮಾಡಿರಬೇಕು.
ಹುದ್ದೆವಾರು ವೇತನ ಶ್ರೇಣಿ
ಅಕೌಂಟಂಟ್ : Rs.36000-67550.
ಅಸಿಸ್ಟಂಟ್ ಮ್ಯಾನೇಜರ್ : Rs.33450-62600.
ಡ್ರೈವರ್ : Rs.27650-52650.
ಜವಾನ : Rs.23500-47650.
ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು.
ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ 35 ವರ್ಷ ಮೀರಿರಬಾರದು.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ ವಯಸ್ಸು ಮೀರಿರಬಾರದು.
ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ 40 ವರ್ಷ ಮೀರಿರಬಾರದು.
ಪ್ರಮುಖ ದಿನಾಂಕಗಳು
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 02-03-2023
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 16-03-2023
ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆ ದಿನಾಂಕ: 16-03-2023
ಅಪ್ಲಿಕೇಶನ್ ಶುಲ್ಕ ರೂ.1000.
ಎಸ್ ಸಿ / ಎಸ್ ಟಿ ಅಭ್ಯರ್ಥಿಗಳಿಗೆ ಶುಲ್ಕ ರೂ.500.
ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಬಳಸಿ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದು.
ಆಯ್ಕೆ ವಿಧಾನ
– ಲೆಕ್ಕಿಗರು ಮತ್ತು ಹಿರಿಯ ಸಹಾಯಕರು ಹುದ್ದೆಗಳಿಗೆ 200 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
– ವಾಹನ ಚಾಲಕರ ಹುದ್ದೆಗೆ 1:5 ಅನುಪಾತದ ಅಭ್ಯರ್ಥಿಗಳಿಗೆ ಮಾತ್ರ ವಾಹನ ಚಾಲನೆ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
– ಜವಾನ ಹುದ್ದೆಗಳಿಗೂ ಸಹ 1:5 ಅನುಪಾತದ ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
– ವೆಬ್ ಸೈಟ್ ವಿಳಾಸ https://virtualofficeerp.com/kcdccb_2023 ಕ್ಕೆ ಭೇಟಿ ನೀಡಿ.
– ಓಪನ್ ಅದ ವೆಬ್ಪುಟದಲ್ಲಿ ‘K & C DCC Bank Recruitment 2023’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ಮತ್ತೊಂದು ವೆಬ್ಪುಟ ತೆರೆಯುತ್ತದೆ. ಇಲ್ಲಿ ‘New Registration’ ಆಯ್ಕೆ ಮಾಡಿ.
– ಮೊದಲಿಗೆ ರಿಜಿಸ್ಟ್ರೇಷನ್ ಪಡೆದು, ನಂತರ ಅರ್ಜಿ ಸಲ್ಲಿಸಿ.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ಅಧಿಸೂಚನೆ ಲಿಂಕ್ ಕ್ಲಿಕ್ ಮಾಡಿ ಓದಿರಿ.