ಕೋಲಾರ(Kolar): ಗಡಿ ಜಿಲ್ಲೆಯ ಮೂಡಣಬಾಗಿಲು ಕುರುಡುಮಲೆಯ ಗಣಪತಿಗೆ ಮಂಗಳವಾರ ಪೂಜೆ ಸಲ್ಲಿಸಿ ಜೆಡಿಎಸ್’ನ ‘ಪಂಚರತ್ನ’ ರಥಯಾತ್ರೆ ಹಾಗೂ ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಅಧಿಕೃತ ಚಾಲನೆ ನೀಡಿದರು.
ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೇರದಂತೆ ಪಕ್ಷದ ಶಾಸಕರು, ಟಿಕೆಟ್ ಆಕಾಂಕ್ಷಿಗಳು ಭಾಗಿಯಾಗಿದ್ದರು.
10.15ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ 12.30ಕ್ಕೆ ಆರಂಭವಾಯಿತು. ಸಂಜೆ ಸಮಾವೇಶ ನಡೆಯಲಿದ್ದು, ಪಕ್ಷದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.
ಮೊದಲ ಹಂತದಲ್ಲಿ ನ.1ರಿಂದ ಡಿ.6ರವರೆಗೆ 6 ಜಿಲ್ಲೆಯ 35 ಕ್ಷೇತ್ರಗಳಲ್ಲಿ ಈ ಯಾತ್ರೆ ಸಾಗಲಿದೆ. ಯಾತ್ರೆ ಜೊತೆ ನಿತ್ಯ ಆಯಾ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಇರಲಿದೆ. ಪಂಚರತ್ನ ಯೋಜನೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಅದಕ್ಕಾಗಿ ಸುಸಜ್ಜಿತ ವಾಹನ ಸಿದ್ಧಪಡಿಸಲಾಗಿದೆ.
ಯಾತ್ರೆಯ ಉಸ್ತುವಾರಿಯನ್ನು ಆಯಾಯ ಕ್ಷೇತ್ರಗಳ ಅಭ್ಯರ್ಥಿಗಳಿಗೆ ವಹಿಸಲಾಗಿದೆ. ಮಂಗಳವಾರ ರಾತ್ರಿ ಮುಳಬಾಗಿಲು ತಾಲ್ಲೂಕಿನ ಬಟ್ಲಬಾವನಹಳ್ಳಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧತೆ ನಡೆಸಲಾಗಿದೆ.