ಕೊಳ್ಳೇಗಾಲ: ತಾಲೂಕಿನ ಕುಂತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಗಂಗಾಮಣಿ ಹಾಗೂ ಉಪಾಧ್ಯಕ್ಷರಾಗಿ ನಾಗರತ್ನ ಅವರು ಜಯಗಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಗಂಗಾಮಣಿ 12 ಮತ ಪಡೆದು ಜಯಗಳಿಸಿದ್ದಾರೆ ಇವರ ವಿರುದ್ಧ ಸ್ಪರ್ಧಿಸಿದ್ದ ಉಷಾ 9 ಮತ ಪಡೆದು ಸೋರು ಅನುಭವಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರತ್ನ 12 ಮತ ಪಡೆದು ಜಯಗಳಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ರವಿ ಒಂಬತ್ತು ಮತ ಗಳಿಸುವ ಮೂಲಕ ಸೋಲು ಅನುಭವಿಸಿದರು ಎಂದು ಚುನಾವಣೆ ಅಧಿಕಾರಿ ರಾಮಕೃಷ್ಣ ಅವರು ಘೋಷಿಸಿದ್ದಾರೆ.
ಬಳಿಕ ನೂತನ ಅಧ್ಯಕ್ಷರು ಮಾತನಾಡಿ, ಎಲ್ಲಾ ಸದಸ್ಯರನ್ನು ಒಗ್ಗೂಡಿಸಿಕೊಂಡು ನಾನು ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದೇನೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಹೆಚ್ಚು ಒತ್ತು ನೀಡಿ, ಗ್ರಾಮಗಳಲ್ಲಿ ಏನೇ ಸಮಸ್ಯೆ ಬಂದರೂ ತ್ವರಿತವಾಗಿ ಕ್ರಮವಹಿಸಿ ಬಗೆಹರಿಸುತ್ತೇನೆ. ಗ್ರಾಮ ಪಂಚಾಯಿತಿಗೆ ಬರುವ ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದರು.
ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಕುಮಾರ್, ರಾಧಾ, ಷಣ್ಮುಖ ಸ್ವಾಮಿ, ಬಿ ಎಂ ಲಿಂಗರಾಜು, ರೋಜಾ, ಪುಣ್ಯವತಿ, ಲತಾ, ನಾಗರತ್ನ, ಪಲ್ಲವಿ, ಪುರುಷೋತ್ತಮ್, ಮಹಾಲಕ್ಷ್ಮಿ, ಉಷಾ, ರತ್ನಮ್ಮ, ಶಿವಣ್ಣ, ಮಲ್ಲಯ್ಯ, ಮೂರ್ತಿ, ರೂಪ, ರಾಜೇಶ್ ಹಾಗೂ ಚುನಾವಣಾಧಿಕಾರಿ ರಾಮಕೃಷ್ಣ ಉಪಸ್ಥಿತರಿದ್ದರು.