ಮನೆ ಸುದ್ದಿ ಜಾಲ ಕೊಪ್ಪಳ: ಡಿವೈಡರ್‌ಗೆ ಲಾರಿ ಡಿಕ್ಕಿ ಹೊಡೆದು ಪಲ್ಟಿ : ಲಕ್ಷಾಂತರ ರೂ. ಮೌಲ್ಯದ ಔಷಧ ಚೆಲ್ಲಾಪಿಲ್ಲಿ

ಕೊಪ್ಪಳ: ಡಿವೈಡರ್‌ಗೆ ಲಾರಿ ಡಿಕ್ಕಿ ಹೊಡೆದು ಪಲ್ಟಿ : ಲಕ್ಷಾಂತರ ರೂ. ಮೌಲ್ಯದ ಔಷಧ ಚೆಲ್ಲಾಪಿಲ್ಲಿ

0

ಕೊಪ್ಪಳ: ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮ ಸಮೀಪದ 50ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಔಷಧಿ ತುಂಬಿದ ಲಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ, ಲಕ್ಷಾಂತರ ರೂಪಾಯಿಗಳ ಮೌಲ್ಯದ ಔಷಧಗಳು ನಾಶವಾಗಿವೆ. ಈ ದುರ್ಘಟನೆ ಮುಂಜಾನೆ ನಡೆದಿದ್ದು, ಚಾಲಕನ ನಿದ್ದೆ ಮಂಪರೇ ಅಪಘಾತಕ್ಕೆ ಕಾರಣವೆಂದು ತಿಳಿದು ಬಂದಿದೆ.

ಘಟನೆಯ ವಿವರಗಳ ಪ್ರಕಾರ, ಗುಜರಾತ್‌ನ ಅಹಮದಾಬಾದಿನಿಂದ ಬೆಂಗಳೂರು ಕಡೆಗೆ ಹೊರಟಿದ್ದ ಔಷಧಿಗಳ ಲಾರಿ, ಮಾಟಲದಿನ್ನಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಂಭೀರತೆಯಿಂದ ಡಿಕ್ಕಿ ಹೊಡೆದ ಪರಿಣಾಮ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಔಷಧಿ ಪ್ಯಾಕೆಟ್‌ಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಔಷಧಿ ಸಾಮಗ್ರಿಗಳು ಮಣ್ಣುಪಾಲಾಗಿವೆ.

ಅಪಘಾತದಲ್ಲಿ ಚಾಲಕರಾದ ಮೊಹಮ್ಮದ್ ಜಾಕಿರ್ ಹುಸೇನ್ ಹಾಗೂ ಮೊಹಮ್ಮದ್ ಪಾಷಾ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.