ಮನೆ ರಾಜ್ಯ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ; ಸಂದರ್ಶನದ ದಿನಾಂಕ ಮುಂದೂಡಿದ ಕೆಪಿಎಸ್‌ಸಿ

ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ; ಸಂದರ್ಶನದ ದಿನಾಂಕ ಮುಂದೂಡಿದ ಕೆಪಿಎಸ್‌ಸಿ

0

ಬೆಂಗಳೂರು : ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ಅರೋಪ ಕೇಳಿದ ಬಂದ ಹಿನ್ನೆಲೆ ಸಂದರ್ಶನ ದಿನಾಂಕವನ್ನ ಕರ್ನಾಟಕ ಲೋಕಸೇವಾ ಆಯೋಗ ಮುಂದೂಡಿಕೆ ಮಾಡಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಸಂಬಂಧ 1:3 ಸಂದರ್ಶನಕ್ಕೆ ಕೆಪಿಎಸ್‌ಸಿ ಪಟ್ಟಿ ಬಿಡುಗಡೆ ಮಾಡಿತ್ತು.

ಮಾ.23ರಿಂದ ಸಂದರ್ಶನಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು. ಅಕ್ರಮದ ಆರೋಪ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸಂದರ್ಶನವನ್ನ ಮುಂದೂಡಿಕೆ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಸಂದರ್ಶನ ಮುಂದೂಡಿಕೆ ಮಾಡಿದ್ದು, ಸಂದರ್ಶನದ ದಿನಾಂಕ ಕೆಪಿಎಸ್‌ಸಿಯಿಂದ ಮುಂದೆ ತಿಳಿಸಲಾಗುವುದು ಅಂತ ಮಾಹಿತಿ ನೀಡಲಾಗಿದೆ.