ಮನೆ ಉದ್ಯೋಗ ಕೆಪಿಎಸ್’ಸಿ ಇಂದ ಲೆಕ್ಕ ಸಹಾಯಕರ ನೇಮಕ: ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ  ಎಂಬ ಮಾಹಿತಿ ಇಲ್ಲಿದೆ

ಕೆಪಿಎಸ್’ಸಿ ಇಂದ ಲೆಕ್ಕ ಸಹಾಯಕರ ನೇಮಕ: ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ  ಎಂಬ ಮಾಹಿತಿ ಇಲ್ಲಿದೆ

0

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಕೌಂಟ್ ಅಸಿಸ್ಟಂಟ್ (ಲೆಕ್ಕ ಸಹಾಯಕರು) ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ನೇಮಕ ಪ್ರಕ್ರಿಯೆಯ ಪರೀಕ್ಷೆ ವಿಧಾನ ಹೇಗಿರುತ್ತದೆ ಎಂದು ಈ ಕೆಳಗಿನಂತೆ ತಿಳಿಯಬಹುದು. ಅಂದಹಾಗೆ ಈ ಹುದ್ದೆಗೆ ಮಾರ್ಚ್ 23 ರಿಂದ ಏಪ್ರಿಲ್ 23 ರವರೆಗೆ ಅರ್ಜಿ ಸಲ್ಲಿಸಬಹುದು.

ಲೆಕ್ಕ ಸಹಾಯಕರು ಹುದ್ದೆಗೆ ಪರೀಕ್ಷೆ ವಿಧಾನ

ಕೆಪಿಎಸ್ಸಿ ವಿವಿಧ ಗ್ರೂಪ್ ‘ಸಿ’ ವೃಂದದ ತಾಂತ್ರಿಕೇತರ ಹುದ್ದೆಗಳಲ್ಲಿ ಒಂದಾದ ಲೆಕ್ಕ ಸಹಾಯಕ ಹುದ್ದೆಗೆ ನೇರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಈ ಹುದ್ದೆಗಳಿಗೆ ಪ್ರಮುಖವಾಗಿ ಎರಡು ಪ್ರಮುಖ ಪತ್ರಿಕೆಗಳು ಹಾಗೂ ಒಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುತ್ತದೆ.

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ

ಮೊದಲು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಿದ್ದು, 150 ಅಂಕಗಳಿಗೆ ನಡೆಸುವ ಪರೀಕ್ಷೆಯಲ್ಲಿ ಕನಿಷ್ಠ 50 ಅಂಕಗಳನ್ನು ಗಳಿಸಿ ಪಾಸ್ ಆಗಬೇಕು. ಈ ಪರೀಕ್ಷೆ ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ಇದೊಂದು ಅರ್ಹತಾ ಪರೀಕ್ಷೆ ಆಗಿರುತ್ತದೆ. ಎಸ್ಎಸ್ಎಲ್ಸಿ ಹಂತದ ಕನ್ನಡ ಪ್ರಶ್ನೆಗಳು ಇರಲಿವೆ.

ಎಸ್ಎಸ್ಎಲ್ ಸಿ ಅಥವಾ ತತ್ಸಮಾನವೆಂದು ರಾಜ್ಯ ಸರ್ಕಾರದಿಂದ ಘೋಷಿಸಲ್ಪಟ್ಟ ಇತರೆ ಯಾವುದೇ ಪರೀಕ್ಷೆಯಲ್ಲಿ ಅಥವಾ ಎಸ್ಎಸ್ಎಲ್ ಸಿ ಪರೀಕ್ಷೆಗಿಂತ ಮೇಲ್ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಕನ್ನಡವನ್ನು ಮುಖ್ಯ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಥವಾ ಐಚ್ಛಿಕ ವಿಷಯವಾಗಿ ಅಥವಾ ಮೇಲಿನ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ತೇರ್ಗಡೆಯಾಗಿರುವ ಅಥವಾ ಕೆಪಿಎಸ್ ಸಿ ಈ ಹಿಂದೆ ನಡೆಸಲ್ಪಟ್ಟ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಲ್ಲಿ ಅಂತಹವರಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ.

ಪ್ರಮುಖ ಎರಡು ಪತ್ರಿಕೆಗಳ ಪರೀಕ್ಷೆ ಮಾದರಿ

ಲೆಕ್ಕ ಸಹಾಯಕ ಹುದ್ದೆಗೆ ಎರಡು ಪತ್ರಿಕೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ.

ಪತ್ರಿಕೆ -1 : ಸಾಮಾನ್ಯ ಜ್ಞಾನ ಪತ್ರಿಕೆ (ಪರೀಕ್ಷಾ ಸಮಯ 01:30 ಗಂಟೆ)

ಪತ್ರಿಕೆ -2 : ಸಂವಹನ ಪತ್ರಿಕೆ (ಪರೀಕ್ಷಾ ಸಮಯ 02 ಗಂಟೆ)

ಪ್ರತಿ ಪ್ರಶ್ನೆ ಪತ್ರಿಕೆಗಳು 100 ಅಂಕಗಳಿಗೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಸಂವಹನ ಪತ್ರಿಕೆಯು ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಗಣಕಯಂತ್ರ ಜ್ಞಾನ ಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿದ್ದು, ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳು

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ / ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಗವು ನಿಗದಿಪಡಿಸುವ ಇತರೆ ಯಾವುದೇ ಕೇಂದ್ರ ಸ್ಥಳದಲ್ಲಿ ನಡೆಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಇರುತ್ತದೆ.

ಸಾಮಾನ್ಯ ಜ್ಞಾನ ಪತ್ರಿಕೆಯ ಪಠ್ಯಕ್ರಮ

ಸಾಮಾನ್ಯ ಜ್ಞಾನ: ಪತ್ರಿಕೆ- 1 ಪಠ್ಯಕ್ರಮ

– ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಷಯಗಳ ಸಾಮಾನ್ಯ ಜ್ಞಾನ

– ಸಾಮಾನ್ಯ ವಿಜ್ಞಾನ ವಿಷಯಗಳು

– ಭೂಗೋಳ ಶಾಸ್ತ್ರ ವಿಷಯಗಳು

– ಸಮಾಜ ವಿಜ್ಞಾನ ವಿಷಯಗಳು

– ಭಾರತೀಯ ಸಮಾಜ ಮತ್ತು ಅದರ ಬೆಳವಣಿಗೆಗಳ ಇತಿಹಾಸದ ವಿಷಯಗಳು

– ಭಾರತದ ಮತ್ತು ಕರ್ನಾಟಕದ ಇತಿಹಾಸ

– ಸ್ವಾತಂತ್ರ್ಯ ನಂತರದಲ್ಲಿ ಕರ್ನಾಟಕದ ಭೂ ಸುಧಾರಣೆಗಳು ಮತ್ತು ಸಾಮಾಜಿಕ ಬದಲಾವಣೆಗಳ ವಿಷಯಗಳು

– ಕರ್ನಾಟಕದ ಅರ್ಥವ್ಯವಸ್ಥೆ : ಅದರ ಸಾಮರ್ಥ್ಯ ಮತ್ತು ದೌರ್ಬಲ್ಯತೆ ಪ್ರಸ್ತುತ ಸ್ಥಿತಿಗತಿ ಕುರಿತ ವಿಷಯಗಳು

– ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳ ವಿಷಯಗಳು

– ಕರ್ನಾಟಕ ಪರಿಣಾಮಕಾರಿ ಆಡಳಿತಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಕುರಿತ ವಿಷಯಗಳು

– ಭಾರತದ ಸಂವಿಧಾನದ ಮತ್ತು ಸಾರ್ವಜನಿಕ ಆಡಳಿತ

– ಪ್ರಾಯೋಗಿಕ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯದ ವಿಷಯಗಳು (ಎಸ್’ಎಸ್’ಎಲ್’ಸಿ ಮಟ್ಟದ)

– ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದ ವಿಷಯಗಳು

– ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು

– ಬೌದ್ಧಿಕ ಸಾಮರ್ಥ್ಯದ ವಿಷಯಗಳು

ಹಿಂದಿನ ಲೇಖನಮೀನ ರಾಶಿಗೆ ಬುಧ ಸಂಚಾರ: ಮಾರ್ಚ್ 16 ರಿಂದ ಈ ರಾಶಿಯವರಿಗೆ ಒಳ್ಳೆಯ ದಿನ
ಮುಂದಿನ ಲೇಖನಬೆಂಗಳೂರು ರೇಸ್‌ ಕೋರ್ಸ್‌ ರಸ್ತೆಗೆ ನಟ ಅಂಬರೀಶ್‌ ಹೆಸರಿಡಲು ಬಿಬಿಎಂಪಿ ಅಸ್ತು