ಮನೆ ರಾಜಕೀಯ ಕೆಪಿಎಸ್‌ಸಿ ನೇಮಕಾತಿ ಹಗರಣ ಮತ್ತೆ ಮುನ್ನೆಲೆಗೆ: ಕೆಪಿಎಸ್‌ಸಿ ಶುದ್ಧವಾಯಿತಾ; ಸಿದ್ದುಗೆ ಹೆಚ್ಡಿಕೆ ಪ್ರಶ್ನೆ  

ಕೆಪಿಎಸ್‌ಸಿ ನೇಮಕಾತಿ ಹಗರಣ ಮತ್ತೆ ಮುನ್ನೆಲೆಗೆ: ಕೆಪಿಎಸ್‌ಸಿ ಶುದ್ಧವಾಯಿತಾ; ಸಿದ್ದುಗೆ ಹೆಚ್ಡಿಕೆ ಪ್ರಶ್ನೆ  

0

ಹುಬ್ಬಳ್ಳಿ (Hubballi)-ಪಿಎಸ್‌ಐ ನೇಮಕಾತಿ ಪರೀಕ್ಷೆ ಹಗರಣದ ಬಳಿಕ ಇದೀಗ ಕೆಪಿಎಸ್‌ಸಿ ನೇಮಕಾತಿ ಹಗರಣ (KPSC Recruitment Scam )ಮುನ್ನೆಲೆಗೆ ಬಂದಿದೆ.

ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರು, ಕೆಪಿಎಸ್‌ ಸಿ ಹಗರಣದಲ್ಲಿ ಅನ್ಯಾಯವಾದವರಿಗೆ ಇನ್ನು ನ್ಯಾಯ ಸಿಕ್ಕಿಲ್ಲ. ಆಗಲೂ ಆ ನೇಮಕಾತಿಯನ್ನು ಅಂದಿನ ಸರ್ಕಾರ ರದ್ದು ಮಾಡಿತ್ತು. ಈಗ ಪಿಎಸ್‌ಐ. ಇದರಿಂದ ಪ್ರಾಮಾಣಿಕರಿಗೆ ಅನ್ಯಾಯವಾಗುತ್ತದೆ ಎಂದರು.

2011ರಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಸಂದರ್ಶನದಲ್ಲಿ ಪಾಸಾಗಿದ್ದ 300ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯವನ್ನು ಹೇಗೆ ಹಾಳು ಮಾಡಿದರು ಎನ್ನುವುದು ನಮ್ಮ ಮುಂದೆಯೇ ಇದೆ. ಇಷ್ಟು ವರ್ಷಗಳಾದರೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಯಾರೋ ಒಬ್ಬರು ಕೊಟ್ಟ ದೂರಿನ ಕಾರಣಕ್ಕೆ ನ್ಯಾಯಯುತವಾಗಿ ಪರೀಕ್ಷೆ ಬರೆದು ಪಾಸಾದವರೆಲ್ಲ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಅವರಲ್ಲಿ ಒಬ್ಬೊಬ್ಬರದ್ದೂ ನೋವಿನ ಕಥೆ ಇದೆ. ಆಗಲೂ ಆ ನೇಮಕಾತಿಯನ್ನು ಅಂದಿನ ಸರ್ಕಾರ ರದ್ದು ಮಾಡಿತ್ತು. ರದ್ದು ಮಾಡಬೇಡಿ ಎಂದು ನಾವು ಕೇಳಿದರೂ ಆ ಸರ್ಕಾರ ಕೇಳಿಲಿಲ್ಲ. ಪಿಎಸ್ಐ ನೇಮಕಾತಿಯೂ ಅದೇ ರೀತಿ ಆಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ಸಿದ್ದರಾಮಯ್ಯ ಅವರು ಕೆಪಿಎಸ್ಸಿಯನ್ನು ಶುದ್ಧ ಮಾಡುವೆ ಎಂದು ಶ್ಯಾಂಭಟ್ಟರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಅಧ್ಯಕ್ಷರಾಗಿದ್ದೇ ತಡ ಮುಕ್ತ ಮಾರುಕಟ್ಟೆಯಲ್ಲಿ ರೇಟು ಫಿಕ್ಸ್ ಆಗುವಂತೆ ಪ್ರತಿ ಉದ್ಯೋಗಕ್ಕೆ ಕೋಟಿ ಲೆಕ್ಕದಲ್ಲಿ ರೇಟು ನಿಗದಿ ಆಯಿತು. ಬಿಡಿಎದಲ್ಲಿ ಕೂತು ಅರ್ಕಾವತಿ ಬಡಾವಣೆ ರೀಡೂ ವ್ಯವಹಾರದಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆದು ಕೊಟ್ಟಿದ್ದರಲ್ಲ, ಅದಕ್ಕೆ ಕೆಪಿಎಸ್ಸಿಯನ್ನು ಶ್ಯಾಂಭಟ್ಟರಿಗೆ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಇದು ಬಹಿರಂಗ ಸತ್ಯ. ಯಾರು ಏನೂ ಮಾಡಲಾಗಲಿಲ್ಲ. ನೀವು ಹೇಳಿದಂತೆ ಕೆಪಿಎಸ್ಸಿ ಶುದ್ಧ ಆಯಿತಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಶ್ಯಾಂಭಟ್ಟರನ್ನು ಕೆಪಿಎಸ್ಸಿಗೆ ತಂದು ಕೂರಿಸಿದ್ದು ನೀವೇ ಅಲ್ಲವೇ? ಅಲ್ಲಿ ಏನೆಲ್ಲಾ ಆಯಿತು ಎನ್ನುವುದು ನಿಮಗೆ ಗೊತ್ತಿಲ್ಲವೇ? ಈ ವ್ಯವಸ್ಥೆ ಉಳ್ಳವರಿಗಷ್ಟೇ ಎನ್ನುವಂತೆ ಆಗಿದೆ. ದುಡ್ಡಿದ್ದವರಿಗೆ ಕೆಲಸ ಸಿಗುತ್ತದೆ. ಪ್ರತಿಭಾವಂತ ಬಡವರಿಗೆ ಅನ್ಯಾಯ ಆಗುತ್ತದೆ. ಕೆಲವರಂತೂ ಇದ್ದ ಆಸ್ತಿಯನ್ನು ತಂದು ಇಂಥ ಭ್ರಷ್ಟರಿಗೆ ಕೊಡುತ್ತಾರೆ. ಅನೇಕರಿಗೆ ದುಡ್ಡು ಇಲ್ಲ, ಕೆಲಸವೂ ಇಲ್ಲ. ಈ ರೀತಿ ನೇಮಕ ಆದವರು ಎಷ್ಟು ಪ್ರಾಮಾಣಿಕರಾಗಿ ಜನರ ಕೆಲಸ ಮಾಡುತ್ತಾರೆ? ಎಂದು ಪ್ರಶ್ನೆಗಳ ಸುರಿಮಳೆಗೈದರು.