ಬೆಳಗಾವಿ(Belagavi): ಕೆಪಿಟಿಸಿಎಲ್ ಕಿರಿಯ ಸಹಾಯಕ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಬಸವರಾಜ ದುಂದನಟಿ, ಅಕ್ಷಯ ಭಂಡಾರಿ ಮತ್ತು ಶ್ರೀಧರ್ ಲಕ್ಕಪ್ಪ ಕಟ್ಟಿಕಾರ್ ಬಂಧಿತ ಆರೋಪಿಗಳು.
ಬಂಧಿತರಿಂದ ಮೊಬೈಲ್ಗಳು, 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್ಗಳು, 18 ಮಾಡಿಫಾಯ್ಡ್ ಡಿವೈಸ್, ಬೈಕ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಅಕ್ಷಯ್ ಬಂಡಾರಿ ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ತಂದು ಪ್ರಕರಣದ ಕಿಂಗ್‌ಪಿನ್ ಸಂಜು ಭಂಡಾರಿಗೆ ನೀಡಿದ್ದ. ಮತ್ತೋರ್ವ ಬಂಧಿತ ಆರೋಪಿ ಬಸವರಾಜ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿ ಅಕ್ರಮದಲ್ಲಿ ಭಾಗಿಯಾಗಿದ್ದನು. ಇನ್ನೊಬ್ಬ ಆರೋಪಿ ಶ್ರೀಧರ್ ಲಕ್ಕಪ್ಪ, ಅಭ್ಯರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟಿದ್ದನು ಎಂಬ ಆರೋಪವಿದೆ.