ಮನೆ ರಾಜ್ಯ ಕೆ.ಆರ್.ನಗರ: ಬಿರುಕು ಬಿಟ್ಟ ಗೋಡೆ, ಭೂಮಿ ಕಂಪಿಸಿದ ಅನುಭವ

ಕೆ.ಆರ್.ನಗರ: ಬಿರುಕು ಬಿಟ್ಟ ಗೋಡೆ, ಭೂಮಿ ಕಂಪಿಸಿದ ಅನುಭವ

0

ಕೆ.ಆರ್.ನಗರ: ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆದ ಹಿನ್ನಲೆಯಲ್ಲಿ ಜನರು ಬೆಚ್ಚಿ ಬಿದ್ದ ಘಟನೆ ಸಾಲಿಗ್ರಾಮ ತಾಲೂಕಿನಲ್ಲಿ ಗುರುವಾರ ನಡೆದಿದೆ.

ತಾಲೂಕಿನ ಚುಂಚನಕಟ್ಟೆ, ಹೋಬಳಿಯ ಹೊಸೂರು,ದಿಡ್ಡಹಳ್ಳಿ, ಹಳಿಯೂರು,ಸಾಲೇಕೊಪ್ಪಲು ದೊಡ್ಡಕೊಪ್ಪಲು, ಚಿಕ್ಕಕೊಪ್ಪಲು, ಕುಪ್ಪೆ,ವಡ್ಡರಕೊಪ್ಪಲು,ಗುಡುಗನಹಳ್ಳಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಘಟನೆ ವರದಿಯಾಗಿದೆ.ಮಧ್ಯಾಹ್ನ 12.30ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಭಾರಿ ಶಬ್ದದೊಂದಿಗೆ ಭೂಮಿ ಒಂದೆರಡು ಸೆಕೆಂಡ್ ಗಳ ಕಾಲ ಕಂಪಿಸಿದಾಗ ಮನೆಗಳು ನಡುಗಿದ್ದು ಮನೆಯಲ್ಲಿದ್ದವರು ಭಯಬೀತರಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.
ಸಾಲೆಕೊಪ್ಪಲು ಭಾಗದಲ್ಲಿ ಯಾವುದೋ ದೊಡ್ಡ ವಿಮಾನ ಒಂದು ಆಕಾಶದಿಂದ ಬಂದು ಅಪ್ಪಳಿಸಿದ ರೀತಿಯಲ್ಲಿ ಶಬ್ದ ಬಂದಿದ್ದು ಜೋರು ಶಬ್ದದೊಂದಿಗೆ ಒಂದು ಬಾರಿ ಕೇಳಿಸಿದ ನಂತರ ವಿಮಾನ ಹಾರಿಹೋಗುವಂತಹ ಶಬ್ದವು ಕೆಲ ಹೊತ್ತು ಕೇಳಿದ್ದು ಇದರಿಂದ ಯಾವುದೋ ವಿಮಾನ ಪತನವಾಗಿದೆ ಎಂಬ ಅನುಮಾನಗಳು ಕೆಲಕಾಲ ಹರಿದಾಡಿದವು. ಈ ಹಿಂದೆಯೂ 2021 ರ ಸಮಯದಲ್ಲಿ ಒಂದು ಬಾರಿ ಇದೇ ಇದೇ ರೀತಿ ಭೂಮಿ ಕಂಪಿಸಿದ ಅನುಭವ ಉಂಟಾಗಿತ್ತು.
ಘಟನೆಯಲ್ಲಿ ಕುಪ್ಪೆ ಗ್ರಾಮದ ದೊರೆಸ್ವಾಮಿ ಮತ್ತು ಚುಂಚನಕಟ್ಟೆ ಗ್ರಾಮದ ಪೂರ್ಣಿಮಾ ಎಂಬುವರ ಮನೆಯ ಗೋಡೆ ಬಿರುಕು ಬಿಟ್ಟಿದ್ದು ಮತ್ತೆ ಬೇರೆ ಯಾವ ಹಾನಿ ಸಂಭವಿಸಿರುವ ಘಟನೆಗಳು ವರದಿಯಾಗಿಲ್ಲ.
ಚುಂಚನಕಟ್ಟೆಯಲ್ಲಿ ಮನೆ ಗೋಡೆ ಬಿರುಕು ಬಿಟ್ಟ ಸ್ಥಳಕ್ಕೆ ಸಾಲಿಗ್ರಾಮ ತಹಸೀಲ್ದಾರ್ ಪೂರ್ಣಿಮಾ, ಉಪತಹಸೀಲ್ದಾರ್ ಕೆ.ಜೆ.ಶರತ್, ಆರ್.ಐ.ಚಿದನಂದಬಾಬು, ಗ್ರಾಮಲೆಕ್ಕಿಗ ಮೌನೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ನಡೆದಾಗ ಕೆಲವರು ಸಾಲೇಕೊಪ್ಪಲು‌ ಗ್ರಾಮದ ಅದಿರು ಬೆಟ್ಟದ ಬಳಿ ಮಿನಿ ವಿಮಾನ ಒಂದು ಪತನವಾಗಿ ಬ್ಲಾಸ್ಟ್ ಆಗಿ ಬಿದ್ದ ವೇಗಕ್ಕೆ ಭೂಮಿ ನಡುಗಿದೆ ಎಂದು ಅಂತೆ -ಕಂತೆ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಕೆಲವರು ಬೆಟ್ಟದ ಸುತ್ತ ಹೋಗಿ ಬಂದರು ಅಂತ ಕುರುಹು ಪತ್ತೆಯಾಗಲಿಲ್ಲ