ಕೆ.ಆರ್.ನಗರ: ಟ್ರ್ಯಾಕ್ಟರ್ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಸಾಲಿಗ್ರಾಮ ತಾಲೂಕಿನ ಹಳೆ ಮಿರ್ಲೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಘಟನೆಯಲ್ಲಿ ಗ್ರಾಮದ ಕುಮಾರ್ ಎಂಬುವರ ಪುತ್ರ ಮನೋಜ್ (23) ಎಂಬಾತನೇ ಮೃತಪಟ್ಟವನಾಗಿದ್ದಾನೆ.
ಮೃತ ಮನೋಜ್ ಜಮೀನು ಒಂದನ್ನು ಉಳುಮೆ ಮಾಡಲು ಚಾಮರಾಜ ನಾಲೆಯ ಏರಿಯ ಮೇಲೆ ಹೋಗುತ್ತಿದ್ದಾಗ ಆಕ್ಮಸಿಕವಾಗಿ ಟ್ಯಾಕ್ಟರ್ ಜಮೀನಿಗೆ ಉರುಳಿ, ಈ ಅವಘಡ ಸಂಭವಿಸಿದೆ.
ಘಟನೆ ನಡೆದ ತಕ್ಷಣವೇ ಮಗುಚಿ ಬಿದ್ದ ಟ್ಯಾಕ್ಟರ್ ನ ಅಡಿಯಲ್ಲಿ ಸಿಲುಕಿದ್ದ ಮನೋಜ್ ನನ್ನ ಮೇಲಕ್ಕೆ ಎತ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆ.ಆರ್.ನಗರ ಆಸ್ವತ್ರೆಗೆ ಕರೆತಂದರು ಯಾವುದೇ ಪ್ರಯೋಜನವಾಗಲಿಲ್ಲ.
ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Saval TV on YouTube