ನವದೆಹಲಿ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ಗುರುವಾರ(ಆಗಸ್ಟ್ 1) ರಂದು ಮಹತ್ವದ ತೀರ್ಪು ನೀಡಿದೆ.
ಆದೇಶ 7ರ ನಿಯಮ 11ಕ್ಕೆ ಆಕ್ಷೇಪಿಸಿ ಮುಸ್ಲಿಂ ಪರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಪೀಠ ಈ ತೀರ್ಪು ನೀಡಿದೆ.
ಕತ್ರಾ ಕೇಶವ್ ದೇವ್ ದೇವಸ್ಥಾನದೊಂದಿಗೆ ಹಂಚಿಕೊಂಡಿರುವ 13.37 ಎಕರೆ ಸಂಕೀರ್ಣದಲ್ಲಿರುವ ಮಸೀದಿಯನ್ನು ತೆಗೆದುಹಾಕುವಂತೆ ಹಿಂದೂ ಪರ ಮುಖಂಡರು 18 ಅರ್ಜಿ ಸಲ್ಲಿಸಿದ್ದರು ಆದರೆ ಈ ಮೊಕದ್ದಮೆಯನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಅರ್ಜಿ ಸಲ್ಲಿಸಿದ್ದರು ಆದರೆ ಹೈಕೋರ್ಟ್ ಮುಸ್ಲಿಂ ಪರ ವಾದವನ್ನು ಸ್ವೀಕರಿಸದೆ ಅರ್ಜಿಗಳನ್ನು ತಿರಸ್ಕರಿಸಿತು.
ಹಿಂದೂ ಪರ ಅರ್ಜಿಗಳ ವಿಚಾರಣೆ ಮುಂದುವರಿಕೆ:
ನ್ಯಾಯಮೂರ್ತಿ ಮಯಾಂಕ್ ಕುಮಾರ್ ಜೈನ್ ಅವರಿದ್ದ ಏಕ ಸದಸ್ಯ ಪೀಠ ಈ ತೀರ್ಪು ನೀಡಿದೆ. ತಾಂತ್ರಿಕ ಪರಿಭಾಷೆಯಲ್ಲಿ, ಅಲಹಾಬಾದ್ ಹೈಕೋರ್ಟ್ ಆದೇಶ 7 ನಿಯಮ 11 ಅನ್ನು ಆಕ್ಷೇಪಿಸಿ ಮುಸ್ಲಿಂ ಕಡೆಯ ಅರ್ಜಿಯನ್ನು ತಿರಸ್ಕರಿಸಿದ್ದು ಹಿಂದೂಗಳ ಕಡೆಯ ಅರ್ಜಿಗಳ ವಿಚಾರಣೆ ಮುಂದುವರಿಯಲಿದೆ.
18 ಅರ್ಜಿಗಳ ವಿಚಾರಣೆ:
ಹಿಂದೂ ಕಡೆಯ ಅರ್ಜಿಯ ನಂತರ, ಮುಸ್ಲಿಂ ಕಡೆಯವರು ಪೂಜಾ ಸ್ಥಳಗಳ ಕಾಯಿದೆ, ವಕ್ಫ್ ಕಾಯಿದೆ, ಮಿತಿ ಕಾಯಿದೆ ಮತ್ತು ನಿರ್ದಿಷ್ಟ ಸ್ವಾಧೀನ ಪರಿಹಾರ ಕಾಯ್ದೆಯನ್ನು ಉಲ್ಲೇಖಿಸಿ ಹಿಂದೂ ಕಡೆಯ ಅರ್ಜಿಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿದರು. ಆದರೆ ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪರ ಅರ್ಜಿಯನ್ನು ತಿರಸ್ಕರಿಸಿದೆ. ಈಗ ಅಲಹಾಬಾದ್ ಹೈಕೋರ್ಟ್‌ನಲ್ಲಿ ಹಿಂದೂಗಳ 18 ಅರ್ಜಿಗಳು ಒಟ್ಟಾಗಿ ವಿಚಾರಣೆಗೆ ಬರಲಿವೆ.
ಮುಂದಿನ ಅರ್ಜಿ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 12 ಕ್ಕೆ ಮುಂದೂಡಿದೆ.