ಮೈಸೂರು: ಇಲ್ಲಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ(ಜೆಡಿಎಸ್)ದ ಅಭ್ಯರ್ಥಿಯಾಗಿ ಕೆ.ವಿ. ಮಲ್ಲೇಶ್ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.
ಅವರಿಗೆ ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಮುಖಂಡರಾದ ಸಿ.ಜೆ.ದ್ವಾರಕೀಶ್, ಅಮ್ಮ ಸಂತೋಷ್, ವಕೀಲ ಮಹದೇವ ಪ್ರಸಾದ್ ಸಾಥ್ ನೀಡಿದರು.
ಇದಕ್ಕೂ ಮುನ್ನ, 101 ಗಣಪತಿ ದೇವಸ್ಥಾನದಿಂದ ನಗರಪಾಲಿಕೆವರೆಗೆ ನಡೆದ ಮೆರವಣಿಗೆಯಲ್ಲಿ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಪಕ್ಷದ ಮುಖಂಡ ಎಚ್.ಕೆ. ರಾಮು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಾನ್ಯ ಶಿವಮೂರ್ತಿ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಲೋಕೇಶ್ ತುಂಬಲ, ಜಯಾಗೌಡ, ಆಯರಹಳ್ಳಿ ಪಿ. ವಿರೂಪಾಕ್ಷ, ಕೆ. ಕಿರಣ್‌ಕುಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಉಪಾಧ್ಯಕ್ಷ ಮಂಜುನಾಥ್ ಮೊದಲಾದವರು ಪಾಲ್ಗೊಂಡಿದ್ದರು.
ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.














