ಮನೆ ಜ್ಯೋತಿಷ್ಯ ಕೃತಿಕಾ ನಕ್ಷತ್ರ ಮತ್ತು ಜಾತಕ

ಕೃತಿಕಾ ನಕ್ಷತ್ರ ಮತ್ತು ಜಾತಕ

0

 ಚರಣದ ಸ್ವಾಮಿ ಫಲ :

Join Our Whatsapp Group

      ಪ್ರಥಮ ಚರಣದ ಸ್ವಾಮಿ ಸೂರ್ಯ ಗುರು ಜಾತಕದಲ್ಲಿ ಉದಾತ್ತತೆ  ಮತ್ತು ಶಾಲಿನತೆಯನ್ನು ಉಂಟುಮಾಡುತ್ತಾರೆ.

    ದ್ವಿತೀಯ ಚರಣದ ಸ್ವಾಮಿ ಸೂರ್ಯ ಶನಿ ಜಾತಕವನ್ನು ಗಂಭೀರ ಪ್ರವೃತ್ತಿಯನ್ನಾಗಿ ಮಾಡುವರು.

      ತೃತೀಯ ಚರಣದ ಸ್ವಾಮಿ ಚಂದ್ರ ಶನಿ ಜಾತಕರಿಗೆ ಸಂವೇದನಶೀಲತೆಯನ್ನು ಪ್ರಧಾನಿಸುವುದು.

      ಚತುರ್ಧ ಚರಣದ ಸ್ವಾಮಿ ಸೂರ್ಯ ಗುರು ಜಾರಕನಲ್ಲಿ ಆಶಾವಾದದ ಸಂಚಾರ ಮೂಡಿಸುವರು.

 ಕೃತಿಕಾ ನಕ್ಷತ್ರದಲ್ಲಿ ಕಾರ್ಯ ಮತ್ತು ಅನ್ಯ ಅಂಶಗಳು :

     ಈ ನಕ್ಷತ್ರಕ್ಕೆ ಚಂದ್ರನು ಪ್ರವೇಶಿಸಿದ 30 ಗಳಿಗೆ ಮೇಲೆ, 4 ಗಳಿಗೆಗಳವರೆಗೆ ವಿಷಕಾಲವಿರುತ್ತದೆ. ಪ್ರಮಾಣ ಮಾಡಬಾರದು. ಪ್ರಮಾಣ ಅನಿವಾರ್ಯವಾಗಿದ್ದರೆ 20 ಗಳಿಗೆ ಕಳೆದ ನಂತರ,ಮೊಸರನ್ನ ಸೇವಿಸಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಪ್ರಯಾಣ ಮಾಡಬಾರದು. ಈ ನಕ್ಷತ್ರದಲ್ಲಿ ಕಳೆದುಹೋದ ಆಭರಣಪುನಃ ಪ್ರಾಪ್ತಿಯಾಗುವುದಿಲ್ಲ,ಜ್ವರ ಬಂದರೆ ಉಷ್ಣಪಿತ್ತ ಭಯ, ಒಂಬತ್ತು ದಿನ ಗಂಡಕಾಲ   ವಿರುತ್ತದೆ. ಅಗ್ನಿ ಪ್ರತಿಮೆಯನ್ನು ರಕ್ತಚಂದನ  ತುಪ್ಪದೋಗರಗಳಿಂದ ಪೂಜಿಸಿ,ಮೊಸರನ್ನ ಬಲಿ ನೀಡಿ,ಕೆಂಪುವರ್ಣದ ಹಸುವನ್ನುಬ್ರಾಹ್ಮಣನಿಗೆ ದಾನ ಮಾಡುವುದರಿಂದ ಗಂಡ ಪರಿಹಾರವಾಗಿ ಹೋಗುತ್ತದೆ.

     ಈ ನಕ್ಷತ್ರದಲ್ಲಿ ಹೆಣ್ಣು ಋತುಮತಿಯಾದರೆ ದರಿದ್ರಳಾಗುತ್ತಾಳೆ. ಕುಂಬಾರ ಅವಿಗೆ,ಇಟ್ಟಿಗೆ ಕೂಡು, ಲೋಹಗಳನ್ನು ಕರಗಿಸುವುದು, ಸುಣ್ಣದ ಗೂಡು,ಸಾಲ ತೀರಿಸುವುದು ಪಶುಗಳ ಮಾರಾಟ, ಮುಳ್ಳು ಗಿಡಗಳನ್ನು ನೆಡುವುದು, ಔಷಧಕ್ಕೆ ಪುಟ್ಟಪಾಕ,ಕ್ರೂರಮಂತ್ರ ಜಪ ಇಂಥ ಕಾರ್ಯಗಳನ್ನು ಮಾಡಬಹುದು.

      ಕೃತಿಕಾದ ಒಂದನೇ ಚರಣದಲ್ಲಿ ಜನಿಸಿದವರು ಸ್ತ್ರೀಯರಲ್ಲಿ ಪ್ರೀತಿಯುಳ್ಳವರು,ಶೂರರು,ಸ್ವಯಂ ಸಂಪಾದಿಸಿದ ಧನದಿಂದ ಜೀವನ ನಿರ್ವಹಣೆ ಮಾಡುತ್ತಾರೆ.ಎರಡನೇ ಚರಣದಲ್ಲಿ ಬಲಿಷ್ಠ ಪುಷ್ಟಿಯುಳ್ಳವರು, ನಿಧಾನ ಮಾತಿನವರು ;ಮೂರನೇ ಚರಣದಲ್ಲಿ ಶೌರ್ಯಯುಕ್ತ, ಕೋಪಿಷ್ಟ ದುರ್ಬುದ್ಧಿ, ಅಲಸಿ ; ನಾಲ್ಕನೇ ಚರಣದಲ್ಲಿ ವಿದ್ಯೆ, ಬುದ್ಧಿ, ತೇಜಸ್ಸು ಸಂಪತ್ತು ಯುಕ್ತಿಯುಳ್ಳವರಾಗಿರುತ್ತಾರೆ.

      ಈ ನಕ್ಷತ್ರದಲ್ಲಿ ಜನಿಸಿದ ಜಾತಕರಿಗೆ ಮೂರನೇ ತಿಂಗಳಿನಲ್ಲಿ ಜ್ವರ,ಒಂದು ವರ್ಷ ತುಂಬುವಾಗ ಶೀತರೋಗ, ಎರಡು ವರ್ಷ ತುಂಬುವಾಗ ನಂಜು 5/7/ 12ನೇ ವರ್ಷಗಳಲ್ಲಿ ಪಿತ್ತರೋಗ,12ನೇ ವರ್ಷದಲ್ಲಿ ಅಪವೃತ್ಯುಗಂಡ, 60ನೇ ವರ್ಷದಲ್ಲಿ ಶತ್ರುವಯ  70ನೇ ವರ್ಷದಲ್ಲಿ ಆಯುಧ ಗಂಡ, ಕುರುಡತನ ಇವು ಘಟಿಸಬಹುದು .ಪುಣ್ಯವಂತರಾಗಿ ಸತ್ಕರ್ಮ, ಸತ್ಯ, ದಾಯಾದಿಪ್ರವೃತ್ತಿಗಳನ್ನು ರೂಡಿಸಿಕೊಂಡರೆ,ಈ ದೋಷಗಳಲ್ಲದೆ ಸಹಜವಾಗಿ 80 ವರ್ಷ ಜೀವಿಸಬಹುದು. ಪಾಪ ಕಾರ್ಯಗಳನ್ನು ಮಾಡುತ್ತ ಬಂದರೆ, ಮೇಲೆ ಹೇಳಿದ ಅನಿಷ್ಟ ಫಲಗಳಾಗುತ್ತವೆ,ಆಯಸ್ಸು ಕ್ಷೀಣಿಸುತ್ತದೆ ಉಷ್ಣ ದ್ರವ್ಯ ಸಾಧನದಿಂದ ಶಿವಯೋಗವನ್ನು ಅಭ್ಯಾಸ ಮಾಡಿದರೆ ಅಮಿತವಾಗಿ ಆಯಸ್ಸು ವೃದ್ಧಿ ಆಗಬಹುದು.

 ಕೃತಿಕಾ ನಕ್ಷತ್ರದ ಜಾತಕರ ವಿವಾಹಕ್ಕೆ ಒಂದು ನಕ್ಷತ್ರಗಳು :

 ಕೃತಿಕಾ 1ನೇ ಚರಣದಲ್ಲಿ ಕನ್ಯೆಗೆ — ಅಶ್ವಿನಿ,ಪುಷ್ಯ, ಆಶ್ಲೇಷಾ, ಮಘಾ, ಪೂರ್ವಾ ಪಾಲ್ಗುಣಿ, ಹಸ್ತ, ಚಿತ್ತಾ, ಸ್ವಾತಿ,ಅನುರಾಧಾ, ಜೇಷ್ಠಾ, ಮೂಲಾ, ಪೂರ್ವಾಷಾಢಾ, ಧನಿಷ್ಠ 3, ನಾಲ್ಕನೇ ಚರಣ, ಶತಭಿಷಾ.

 ಕೃತಿಕಾ 2,3,4, ಚರಣದಲ್ಲಿ ಕನ್ಯೆಗೆ — ಅಶ್ವಿನಿ,ಭರಣಿ,ಮೃಗಶಿರಾ, ಆರ್ದ್ರಾ, ಚಿತ್ತಾ,ಸ್ವಾತಿ,ಅನುರಾಧಾ, ಜೇಷ್ಠಾ, ಮೂಲಾ, ಶ್ರವಣ, ಧನಿಷ್ಠ,ಶತಭಿಷಾ.

 *ಕೃತಿಕಾ 1ನೇ ಚರಣದ ವರನಿಗೆ —ಅಶ್ವಿನಿ, ಮೃಗಶಿರಾ, ಆಶ್ಲೇಷಾ, ಮಘಾ, ಪೂರ್ವಾಫಲ್ಗುಣಿ, ಪುಷ್ಪ, ಚಿತ್ತಾ, ಸ್ವಾತಿ,ಅನುರಾಧಾ, ಜೇಷ್ಠಾ, ಮೂಲಾ, ಪೂರ್ವಾಷಾಢಾ, ಧನಿಷ್ಠಾ, ಶತಭಿಷಾ, ಉತ್ತರಾ ಭಾದ್ರಪದಾ,  ರೇವತಿ,

 ಕೃತಿಕಾ 2’3’4′ ಚರಣದಲ್ಲಿ ವರನಿಗೆ — ರೋಹಿಣಿ,ಮೃಗಶಿರಾ, ಆರ್ದ್ರಾ,ಮಗಘಾ, ಹಸ್ತ, ಚಿತ್ತಾ, ಸ್ವಾತಿ,ಅನುರಾಧಾ, ಜೇಷ್ಠಾ, ಮೂಲಾ, ಪೂರ್ವಾಷಾಡ ,ಶ್ರಾವಣ,

 ಕೃತಿಕಾ ನಕ್ಷತ್ರದವರ ಜನನಕ್ಕೆ ಶಾಂತಿ :

ಅಯಮಗ್ನಿಃ ಸಹಸ್ರಾಣ್ರೋವ್ವಾಜಸ್ಯ ಶತನಸ್ಪತಿ|

 ಮೂರ್ಧಾಕಂ ವೀರಯೀಣಾಂ||

    ತಾಯಿತಂದೆಯರು ತಮಗೆ ಕೃತಿಕಾ ನಕ್ಷತ್ರದಲ್ಲಿ ಸಂತಾನ ಪ್ರಾಪ್ತಿಯಾದಾಗ,ಈ ಮಂತ್ರವನ್ನು ಒಂದು ಮಾಲೆಯಷ್ಟು ಪಠಿಸಿ,ಅಕ್ಕಿ,ಬೆಲ್ಲ,ಕೃತಿಕಾ,ಒಂದನೇ ಚರಣಕ್ಕೆ ತೊಗರಿಬೇಳೆ ಮತ್ತು ಎರಡು ಮೂರು ನಾಲ್ಕು ನೇ ಚರಣಗಳಿಗೆ ಅವರೆಕಾಳು ದಾನ ನೀಡುವುದರಿಂದ ನಕ್ಷತ್ರ ದೋಷ ದೂರವಾಗುವುದು.

 ಯಂತ್ರ :

     ಈ ಯಂತ್ರವನ್ನು ಸುವರ್ಣ ಪತ್ರದ ಮೇಲೆ ಉತ್ಕೀರ್ಣಗೊಳಿಸಿ,ಶರೀರದಲ್ಲಿ ಧಾರಣೆ ಮಾಡಬೇಕು. ಇದರ ಫಲವಾಗಿ ನ್ಯಾಯಾಲಯ, ಮಾಟ ಮಂತ್ರ ಪ್ರಭಾವ,ಅತಿ ಭಯಂಕರ ವ್ಯಾಧಿ, ಭೂತ ಪಿಶಾಚ ಬಾಧೆ ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತವೆ.

—————————

ರಂ           ರಂ

 ಅಗ್ನಿಯೇ ನಮಃ

ರಂ            ರಂ

ರಂ             ರಂ

—————————

 ಈ ಮಂತ್ರವನ್ನು ಪಠಸಿ