ಮನೆ ಜ್ಯೋತಿಷ್ಯ ಕೃತಿಕಾ

ಕೃತಿಕಾ

0

ಕ್ಷೇತ್ರ – 26°, 40 ಕಲೆಯಿಂದ 30 ಡಿಗ್ರಿ ಕಲಾ.  ಕಲೆ-ಮೇಷ, ರಾಶಿ- ಸ್ವಾಮಿ-ಮಂಗಳ, ನಕ್ಷತ್ರ ಸ್ವಾಮಿ – ಸೂರ್ಯ, ಯೋನಿ – ಮೇಷ, ನಾಡಿ- ಅಂತ್ಯ, ಗಣ-ರಾಕ್ಷಸ, ನಾಮಾಕ್ಷರ – ಅ, ಶರೀರಭಾಗ – ಮುಖ, ಕುತ್ತಿಗೆ, ಕಂಟನಾಳ, ನಾಲಿಗೆ, ಕೆನ್ನೆ, ಗಂಟಲು, ನಾಳ.     

ರೋಗಗಳು :- ಮೊಡವೆ, ಗಾಯ, ರಕ್ತದೋಷ, ದೃಷ್ಟಿ ದೋಷ, ಕಂಠಕೆರೆಯುವುದು, ಕಂಠದಲ್ಲಿಉರಿ, ಮೊಣಕಾಲು ನೋವು, ಕಣ್ಣು ಕತ್ತಲೆ ಉಂಟಾಗುವುದು.     

ಸಂರಚನೆ :- ಯಾವಾಗಲೂ ಮಿತ್ರರೊಂದಿಗಿರುವದು, ಸಾಮಾಜಿಕ ಕಾರ್ಯಾಗಳಿಂದ ಹಣ ಗಳಿಸುವುದು, ಅತಿಥಿಸತ್ಕಾರ ಮಾಡುವುದು, ಸುಖವನ್ನು ಬಯಸುವುದು, ವಿಳಾಸ ಪ್ರೇಮಿ ಆಗಿರುವುದು, ಉದಾರತೆ ಸ್ವಭಾವ ಹೊಂದಿದ್ದು, ಸಹೃದಯವನ್ನು ಪ್ರಸನ್ನನಾಗಿರುವುದು, ಪ್ರಭಾವಶಾಲಿ ವ್ಯಕ್ತಿಯಾಗುವುದು, ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು, ಶಾಂತಿಯಿಂದ ಕೆಲಸ ಮಾಡುವುದು, ಸಂಪನ್ನ ಜೀವನ ಹೊಂದುವುದು, ಸರ್ಕಾರದಿಂದ ಲಾಭ ಪಡೆಯುವುದು, ಅಥವಾ ಸರಕಾರಿ ಅಧಿಕಾರಿಗಳ ಮಿತ್ರನಾಗಿರುವುದು.        

ಉದ್ಯೋಗ ಮತ್ತು ವಿಶೇಷ ಗುಣಗಳು :- ಸರ್ಕಾರಿ ಅಥವಾ ಸರಕಾರದಿಂದ ಹಣ ಪಡೆಯುವ ಉದ್ಯೋಗ ಹೊಂದುವನು, ಶತ್ರುಗಳನ್ನು ಸೋಲಿಸಿ ವಿಜಯ ಪಡೆಯುವನು, ಸಾಲದಿದ್ದರೂ ವಿದೇಶ ಯಾತ್ರೆ ಕೈಗೊಳ್ಳುವನು, ಸಂಗೀತ, ನೃತ್ಯ, ನಾಟಕ, ಜಾತ್ರೆ, ಕವಿ ಸಮ್ಮೇಳನ, ಶಿಲ್ಪಕದ ಚಿತ್ರಗಳಲ್ಲಿ ಆಸಕ್ತಿ ಹೊಂದಿ ಅಧ್ಯಾಪಕನಾಗೋನು, ಇಂಜಿನಿಯರ್ ಆಗಿ ನೀರಾವರಿ ಮಾಡುವವರು, ಅಂತರಾಷ್ಟ್ರೀಯ ವ್ಯಾಪಾರ, ಉದ್ಯಾನ ನಿರ್ಮಾಣ, ಔಷಧ ಖರೀದಿ, ಮನೆ ಸುಂದರಗೊಳಿಸುವುದು, ನಟ, ತೆರಿಗೆ, ವಸಲಿಗಾರ, ಉಣ್ಣೆ ಮಾರಾಟ, ಕೇಶಲಂಕಾರಕ, ದಾರದ ವ್ಯಾಪಾರ, ರತಿ ರೋಗ ವಿಶೇಷ ತಜ್ಞನಾಗುವುದು ಮುಂತಾದವನ್ನು ಈ ನಕ್ಷತ್ರದಲ್ಲಿ ಹುಟ್ಟಿದವರು ನಡೆಸಬಹುದಾಗಿದೆ.      

ಈ ನಕ್ಷತ್ರದಲ್ಲಿ ಹುಟ್ಟಿರುವರು ವಿಶೇಷವಾಗಿ ಕಲಾವಿದರಾಗುವರು. ವಿಜ್ಞಾನಿ, ವ್ಯವಸಾಯ ಸಹ ಆಗಬಹುದಾಗಿದೆ. ಅಧಿಕಾರಗಳಿಸಿ ಸುಖ ಜೀವನ ನಡೆಸುವವರು, ಟಿವಿ, ನಾಟಕ ಮುಂತಾದ ಕ್ಷೇತ್ರಗಳಲ್ಲಿ ಎದ್ದು ಕಾಣುವರು, ಸೂರ್ಯನು ಪಾಪ ಸ್ಥಾನದಲ್ಲಿ ಇದ್ದರೆ ತಂದೆ ಅಥವಾ ರಾಜ್ಯದ ಕಡೆಯಿಂದ ತೊಂದರೆ ಆಗಬಹುದು. ಯಾವಾಗಲೂ ಚಿಂತನೆ ನಡೆಸುವವರು. ಸೂರ್ಯನ ಕೃತಿಕಾ ನಕ್ಷತ್ರದಲ್ಲಿ ಏಪ್ರಿಲ್ 13 ರಿಂದ ಮೇ 23 ಒಳಗೆ ದಿನಗಳು ಇರುತ್ತದೆ. ಶುಕ್ರ ಅಥವಾ ಸೂರ್ಯ ಈ ನಕ್ಷತ್ರದ ಮೂಲಕವಾಗಿ ಹೋದರೆ, ಈ ಫಲಗಳಾಗುವ ಚಂದ್ರನ ತನ್ನ ಚಲನೆಯ ಕೊನೆಯ ದಿನವನ್ನು ಇಲ್ಲಿ ಕಳೆಯುವನು. ಸುಮಾರು 20 ಗಂಟೆ ಈ ನಕ್ಷತ್ರಗಳಲ್ಲಿ ಇರುವನು.