ಮಂಡ್ಯ : ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಜೀವ ಕಳೆ ಬಂದಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂನ ಒಳ ಹರಿವಿನಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೆಆರ್ಎಸ್ನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 29,368 ಕ್ಯೂಸೆಕ್ಗೆ ಒಳ ಹರಿವು ಏರಿಕೆ ಆಗಿದೆ. ಸದ್ಯ ಕನ್ನಂಬಾಡಿ ಕಟ್ಟೆ 118.60 ಅಡಿಯಷ್ಟು ಭರ್ತಿ ಆಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಕೆಆರ್ಎಸ್ ಹೊಂದಿದೆ.
ಡ್ಯಾಂ ಭರ್ತಿಯತ್ತ ಸಾಗುತ್ತಿರೋದ್ರಿಂದ ರೈತರಲ್ಲಿ ಮೊಗದಲ್ಲಿ ಸಂತಸ ಮೂಡಿದೆ. ಇನ್ನು, ಜಲಾಶಯ ಸಂಪೂರ್ಣ ಭರ್ತಿಗೆ ಕೇವಲ 6 ಅಡಿ ಮಾತ್ರ ಬಾಕಿಯಿದೆ. 8 ಟಿಎಂಸಿ ನೀರು ಬಂದರೆ ಡ್ಯಾಂ ಭರ್ತಿಯಾಗಲಿದೆ.
ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ನಲ್ಲಿ ಭರ್ತಿಯಾಗುತ್ತಿದ್ದ KRS ಅಣೆಕಟ್ಟೆ, ಜೂನ್ ತಿಂಗಳಲ್ಲೇ ಸಂಪೂರ್ಣ ಭರ್ತಿಯಾಗುತ್ತಿದೆ. ಜಲಾಶಯದ ನಿರ್ಮಾಣವಾದಾಗಿನಿಂದ ಜೂನ್ನಲ್ಲಿ ಇಷ್ಟೊಂದು ನೀರು ಸಂಗ್ರಹವಾಗಿರೋದೇ ದೊಡ್ಡ ಇತಿಹಾಸ.
KRS ಡ್ಯಾಂನ ನೀರಿನ ಮಟ್ಟ
ಗರಿಷ್ಠ ಮಟ್ಟ : 124.80 ಅಡಿ
ಇಂದಿನ ಮಟ್ಟ : 118.30 ಅಡಿ
ಒಳ ಹರಿವು : 29,368 ಕ್ಯೂಸೆಕ್
ಹೊರ ಹರಿವು : 1024 ಕ್ಯೂಸೆಕ್














