ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು, ನೀರಿನ ಮಟ್ಟ 110.82 ಅಡಿಗೆ ತಲುಪಿದೆ.
ಇಂದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಒಳಹರಿವು ಪ್ರಮಾಣದಲ್ಲಿ ಇಳಿಕೆಯಾಗಿದೆ.
ನಿನ್ನೆ 40 ಸಾವಿರ ದಾಟಿದ್ದ ಒಳಹರಿವು, ಇಂದು 33,554 ಕ್ಕೆ ಒಳಹರಿವಿನ ಪ್ರಮಾಣಕ್ಕೆ ಇಳಿಕೆ ಕಂಡಿದೆ.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 110.82 ಅಡಿ ನೀರು ಸಂಗ್ರಹವಾಗಿದೆ.
49.452 ಟಿಎಂಸಿ ಸಾಮರ್ಥ್ಯದ ಜಲಾಶಯ ಇದಾಗಿದ್ದು, ಸದ್ಯ 32.554 ಟಿಎಂಸಿ ನೀರು ಸಂಗ್ರಹವಿದೆ.
ಡ್ಯಾಂನಿಂದ ಹೊರ ಹರಿವು 3,106 ಕ್ಯೂಸೆಕ್ ಆಗಿದೆ.