ಶ್ರೀರಂಗಪಟ್ಟಣ: ಕೆ ಆರ್ ಎಸ್ ನ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರದಲಿ ನದಿ ನೀರಿಗೆ ಪ್ರಾಣ ಕಳೆದುಕೊಂಡ ಘಟನೆ ಬುಧವಾರ ನಡೆದಿದೆ. ನಂಜಗೂಡು ತಾಲೂಕಿನ ಕೌಲಂದೆ ಹೋಬಳಿ ಮರಳಿಪುರದ ಚೇತನಾಕುಮಾರಿ.ಡಿ.ಪಿ(೪೦) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಬೃಂದಾವನದಲ್ಲಿನ ದೋಣಿ ವಿಹಾರದಲ್ಲಿ ಯುವತಿ ಶವ ತೆಲುತ್ತಿರುವ ಬಗ್ಗೆ ಕೆಲಸಗಾರರು ಕೆಆರ್‌ಎಸ್ ಅಣೆಕಟ್ಟೆ ಮತ್ತು ಬೃಂದಾವನದ ಭದ್ರತೆಗೆ ನಿಯೋಜನೆಗೊಂಡಿರುವ ಕೆ.ಎಸ್.ಐ.ಎಸ್.ಎ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಮೇರೆಗೆ ಕೆ ಆರ್ ಎಸ್ ಪೊಲೀಸ್ ಠಾಣೆ ಪಿ.ಎಸೈ ಬಸವರಾಜು ಭೇಟಿ ನೀಡಿ ತನಿಖೆ ನಡೆಸಿ ಮೃತರ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಶವ ಪರಿಕ್ಷೇಗೆ ಮೈಸೂರು ಕೆ.ಆರ್.ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದೆ.















