ಮೈಸೂರು : ಮೈಸೂರು ನಗರ ಜಿಲ್ಲಾ ಅಬಕಾರಿ ಉಪ ಆಯುಕ್ತರ ಆದೇಶದ ಆದೇಶದ ಮೈಸೂರು ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಹೆಚ್ . ಕೆ . ರಮೇಶ್ ನೇತೃತ್ವದಲ್ಲಿ , ಕೆ . ಎಸ್ . ಬಿ . ಸಿ . ಎಲ್ . ಮೈಸೂರು -1 ಡಿಪೋ ಕೂರ್ಗಳ್ಳಿಯ ಅಬಕಾರಿ ಉಪ ಅಧೀಕ್ಷಕರಾದ ವಿಕ್ರಮ್ ಎಲ್ . ಬಿ ., ಮತ್ತು ಅಬಕಾರಿ ನಿರೀಕ್ಷಕರು ಹಾಗೂ ಡಿಪೋನ ವ್ಯವಸ್ಥಾಪಕರು , ಮತ್ತು ಇಲಾಖಾ ಸಿಬ್ಬಂದಿಗಳು ಒ ದಿಗೆ ಮಾರಾಟವಾಗದೇ ಉಳಿದಿದ್ದ ಒಟ್ಟು 3185.070 ಲೀಟರ್ ಬಿಯರ್ ನ್ನು ಹಾಗೂ ಕೆ . ಎಸ್ . ಬಿ . ಸಿ . ಎಲ್ . ಮೈಸೂರು -2 ಡಿಪೋ ಅಬಕಾರಿ ನಿರೀಕ್ಷಕರು ಹಾಗೂ ಡಿಪೋನ ವ್ಯವಸ್ಥಾಪಕರು , ಮತ್ತು ಇಲಾಖಾ ಸಿಬ್ಬಂದಿಗಳೊಡಿಗೆ ಮಾರಾಟವಾಗದೆ ಉಳಿದಿದ್ದ ಒಟ್ಟು 2103.040 ಲೀಟರ್ ಬಿಯರ್ ನ್ನು ಒಟ್ಟು 5288.110 ಲೀಟರ್ ಬಿಯರ್ ಅನ್ನು ನಾಶಪಡಿಸಲಾಗಿದೆ ಎಂದು ಅಬಕಾರಿ ಉಪ ಅಧೀಕ್ಷಕರು ಪ್ರಕಟಣೆಯಲ್ಲಿ ಪ್ರಕಟಿಸಿದರು .















