ಮನೆ ಅಪರಾಧ ಯಶವಂತಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಬ್ರೇಕ್ ಫೇಲ್ ಆಗಿ ರಸ್ತೆ ವಿಭಜಕಕ್ಕೆ ಢಿಕ್ಕಿ, ಓರ್ವ ಮಹಿಳೆಗೆ...

ಯಶವಂತಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಬ್ರೇಕ್ ಫೇಲ್ ಆಗಿ ರಸ್ತೆ ವಿಭಜಕಕ್ಕೆ ಢಿಕ್ಕಿ, ಓರ್ವ ಮಹಿಳೆಗೆ ಗಾಯ

0

ಬೆಂಗಳೂರು: ಶನಿವಾರ ಮುಂಜಾನೆ ಯಶವಂತಪುರದ ತುಮಕೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ವೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಬಸ್‌ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದಾಗ, ಎಸ್‌ಆರ್‌ಎಸ್‌ ಸಿಗ್ನಲ್ ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿದೆ. ಬಸ್‌ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ.

ಕೆಎ 06 F 1205 ನಂಬರ್‌ನ ಬಸ್ಸು ಸಿಗ್ನಲ್ ಬಳಿ ಟೆಂಪೋವೊಂದು ಅಡ್ಡ ಬಂದ ವೇಳೆ ತಕ್ಷಣ ಬ್ರೇಕ್ ಹಾಕಲು ಪ್ರಯತ್ನಿಸಿದ ಚಾಲಕನಿಗೆ ನಿಯಂತ್ರಣ ಕಳೆದುಬಿದ್ದಿದ್ದು, ಬಸ್‌ ಡಿವೈಡರ್ ಮೇಲೆ ಏರಿ ನಿಂತಿದೆ. ಈ ವೇಳೆ ಬಸ್ಸಿನಲ್ಲಿ 42 ಪ್ರಯಾಣಿಕರು ಇದ್ದರು. ಸುದೈವವಶಾತ್ ಭಾರಿ ಅನಾಹುತ ತಪ್ಪಿದ್ದು, ಓರ್ವ ಮಹಿಳೆಗೆ ಮಾತ್ರ ಕಾಲಿಗೆ ಸ್ವಲ್ಪ ಗಾಯವಾಗಿದೆ.

ಸ್ಥಳೀಯರು ಕೂಡಲೇ ಸಹಾಯಕ್ಕೆ ಧಾವಿಸಿ ಗಾಯಾಳುವಿಗೆ ಸಹಾಯ ಮಾಡಿದ್ದಾರೆ. ಪೀಣ್ಯ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ, ಸಂಚಾರವನ್ನು ಸಹಜಗೊಳಿಸಿದ್ದಾರೆ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಅಪಘಾತದ ಕುರಿತು ಪರಿಶೀಲನೆ ನಡೆಸಿದ್ದು, ಬಸ್‌ನ ತಾಂತ್ರಿಕ ದೋಷಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ.