ಮಂಡ್ಯ: ವರ್ಗಾವಣೆಗೆ ಬೇಸತ್ತು ನಾಗಮಂಗಲದ ಕೆಎಸ್ ಆರ್ ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನಲೆಯಲ್ಲಿ ನಾಗಮಂಗಲದ ಡಿಪೋದ ಸಾರಿಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ ಸಚಿವ ಚಲುವರಾಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ನಾಗಮಂಗಲದ ಡಿಪೋದಲ್ಲಿ 60ಕ್ಕೂ ಹೆಚ್ಚು ಬಸ್ ಗಳು ನಿಂತಲ್ಲೇ ನಿಂತಿವೆ.
ಇನ್ನು ಚಾಲಕ ಜಗದೀಶ್ ಹುಟ್ಟೂರು ಹಂದೇನಹಳ್ಳಿ ಗ್ರಾಮಸ್ಥರು ಕೂಡ ಪ್ರತಿಭಟನೆ ಮಾಡುತ್ತಿದ್ದು, ಸಚಿವ ಚಲುವರಾಯಸ್ವಾಮಿ ದ್ವೇಷ ರಾಜಕಾರಣವೇ ನನ್ನ ಮಗನ ಈ ಸ್ಥಿತಿಗೆ ಕಾರಣ. ನಾವು ಮೊದಲಿನಿಂದಲೂ ಜೆಡಿಎಸ್ ಮತ್ತು ಕುಮಾರಸ್ವಾಮಿ ಅಭಿಮಾನಿಗಳು. ನನ್ನ ಸೊಸೆ ಗ್ರಾಮ ಪಂಚಾಯತಿ ಸದಸ್ಯೆಯಾದ್ದರಿಂದ ಈ ರೀತಿ ಕಿರುಕುಳ ನೀಡುತ್ತಿದ್ದಾರೆ ಎಂದು ಜಗದೀಶ್ ತಂದೆ ರಾಜೇಗೌಡ ಆರೋಪಿಸಿದ್ದಾರೆ.