ಬೆಂಗಳೂರು(Bengaluru): ಕೆ.ಎಸ್.ಆರ್.ಟಿ.ಸಿ ಬಸ್’ನಲ್ಲಿ ಸಾಕು ಪ್ರಾಣಿಗಳಿಗೆ ವಿಧಿಸಲಾಗುತ್ತಿದ್ದ ಟಿಕೆಟ್ ದರವನ್ನು ಕಡಿತಗೊಳಿಸಿ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಈ ಹಿಂದೆ ಸಾಕು ಪ್ರಾಣಿಯು ಮರಿಯಾಗಿದ್ದರೂ ಕೂಡ ಫುಲ್ ಟಿಕೆಟ್ ವಿಧಿಸಲಾಗುತ್ತಿತ್ತು. ಆದರೆ ಪರಿಷ್ಕೃತ ಸುತ್ತೋಲೆ ಪ್ರಕಾರ ಬಸ್ನಲ್ಲಿ ಕೊಂಡೊಯ್ಯುವ ಎಲ್ಲ ಸಾಕು ಪ್ರಾಣಿಗೂ ತಲಾ ಅರ್ಧ ಟಿಕೆಟ್ ದರ ವಿಧಿಸಲಾಗುತ್ತದೆ.
ನಾನ್ ಎಸಿ ಬಸ್ಗಳಲ್ಲಿ ಸಾಕು ಪ್ರಾಣಿ ಜೊತೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಕರ್ನಾಟಕ ವೈಭವ, ರಾಜಹಂಸ, ನಾನ್ ಎಸಿ ಸ್ಲೀಪರ್ ಮತ್ತು ಎಸಿ ಬಸ್ಗಳಲ್ಲಿ ಕೊಂಡೊಯ್ಯುವ ಹಾಗಿಲ್ಲ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ನಿಯಮದ ಪ್ರಕಾರ, ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರು ತಮ್ಮ ಸಾಕು ಪ್ರಾಣಿಗಳಾದ ಮೊಲ, ಶ್ವಾನ, ಬೆಕ್ಕು, ಪಕ್ಷಿಗಳನ್ನು ಕೊಂಡೊಯ್ಯಬಹುದು. ಈ ಮುಂಚೆ ಫುಲ್ ಟಿಕೆಟ್ ದರ ವಿಧಿಸಲಾಗುತ್ತಿತ್ತು. ಇದಕ್ಕೆ ಪ್ರಯಾಣಿಕರಿಂದ ಟೀಕೆ ವ್ಯಕ್ತವಾಗಿದ್ದು ಟಿಕೆಟ್ ದರ ಕಡಿತಗೊಳಿಸಲು ಸಂಸ್ಥೆ ನಿರ್ಧರಿಸಿತ್ತು.
ಪರಿಷ್ಕೃತ ಸುತ್ತೋಲೆಯಲ್ಲಿ 30 ಕೆ.ಜಿವರೆಗಿನ ಲಗೇಜ್ ಅನ್ನು ಬಸ್ನಲ್ಲಿ ಸಾಗಿಸಲು ಅವಕಾಶವಿದೆ. 30 ಕೆ.ಜಿವರೆಗಿನ ತೆಂಗಿನ ಕಾಯಿ, ಹೂ, ದಿನಸಿ ಸಾಮಗ್ರಿ, ತರಕಾರಿಗಳನ್ನು ಕೊಂಡೊಯ್ಯಬಹುದಾಗಿದೆ.