ಮನೆ ರಾಜಕೀಯ ಮಗನ ಹೆಸರಲ್ಲಿ ಕುಮಾರಸ್ವಾಮಿ ಸಾವಿರಾರು ಕೋಟಿ ಕಲೆಕ್ಟ್‌ ಮಾಡವ್ರೆ: ಚಲುವರಾಯಸ್ವಾಮಿ ಆರೋಪ

ಮಗನ ಹೆಸರಲ್ಲಿ ಕುಮಾರಸ್ವಾಮಿ ಸಾವಿರಾರು ಕೋಟಿ ಕಲೆಕ್ಟ್‌ ಮಾಡವ್ರೆ: ಚಲುವರಾಯಸ್ವಾಮಿ ಆರೋಪ

0

ಮಂಡ್ಯ:ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿ ಮಗನ ಚುನಾವಣೆ ಹೆಸರು ಹೇಳಿ ಅನೇಕ ಖಾಸಗಿ ಕಂಪನಿ ಗಳಿಂದ ಸಾವಿರಾರು ಕೋಟಿ ಕಲೆಕ್ಟ್‌ ಮಾಡಿದ್ದಾರೆ ಎಂದು ಸಚಿವ ಎನ್‌.ಚಲುರಾಯಸ್ವಾಮಿ ಆರೋಪಿಸಿದ್ದಾರೆ.

Join Our Whatsapp Group


ನಗರದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಬಂದಿರುವ ಪ್ರಕಾರ, ಮಗನ ಚುನಾವಣೆಯೆಂದು ಹೇಳಿ ಹಲವು ಖಾಸಗಿ ಕಂಪನಿಗಳಿಂದ ಸಾವಿರಾರು ಕೋಟಿ ರೂಪಾಯಿ ಗಳಷ್ಟು ಹಣ ಪಡೆದಿರುವುದು ಸತ್ಯ ಎಂದು ಹೇಳಿದ್ದಾರೆ.


ಕುಮಾರಸ್ವಾಮಿ ಅವರಿಗೆ ಬೇರೆ ಸಮಯದಲ್ಲಿ ಹಣ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಗನ ಚುನಾವಣೆಗೆ ಸಮಯದಲ್ಲಿ ಸಿಗುತ್ತದೆ ಬಿಡ್ರಿ..ಚನ್ನಪಟ್ಟಣ ಉಪ ಚುನಾವಣೆಯಲ್ಲಿ ದುಡ್ಡು ಖರ್ಚು ಮಾಡಿದ ತಕ್ಷಣ ಚುನಾವಣೆ ಗೆಲ್ಲುತ್ತೇವೆ ಎಂದರ್ಥವಲ್ಲ. ಏನೇ ಆಗಲಿ, ಹಣ ಹಂಚಿಕೆ ಮಾಡಿದಾಕ್ಷಣ ಚುನಾವಣೆ ಗೆಲ್ಲುತ್ತಾರೆ ಎಂಬನಿರೀಕ್ಷೆ ಅಸಾಧ್ಯ ಎಂದು ಕುಮಾರಸ್ವಾಮಿಗೆ ಟಾಂಗ್‌ ನೀಡಿದರು.


ನಾವು ಮತದಾರರ ಬಳಿ ಹೋಗಿದ್ದೇವೆ. ದಯವಿಟ್ಟು ಮತ ನೀಡಿ, ನಾವು ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ದುಡಿಯುತ್ತೇವೆ ಎಂದು ಮನವಿ ಮಾಡಿ ಮತ ಕೇಳಿದ್ದೇವೆ ಎಂದು ತಿಳಿಸಿದರು.


ಇನ್ನೂ ಕಾಂಗ್ರೆಸ್ ಶಾಸಕರಿಗೆ 100 ಕೋಟಿ ಆಫರ್ ವಿಚಾರ‌ಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಇದೂ ಕೂಡ ಪ್ರೂವ್ ಆಗಿದೆ. ಇದು ಮೊದಲ ಬಾರಿ ಅಲ್ಲ ಇವ್ರು ಆಪರೇಶನ್ ಕಮಲ‌ ಮಾಡ್ತಿರೋದು.ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾಗ ಇದೇ ಬಿಎಸ್‌ ಯಡಿಯೂರಪ್ಪನ ಸಿಎಂ ಮಾಡ್ಲಿಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರನ್ನು ಆಪರೇಶನ್ ಮಾಡಿದ್ರು, ಏನ್ ದುಡ್ ಕೊಟ್ರೋ ಚುನಾವಣೆಗೆ ಎಷ್ಟು ಹಾಕಿದ್ರೋ ಅದು ನನಗೆ ಗೊತ್ತಿಲ್ಲ.ಆಗ ಆಪರೇಶನ್ ಕಮಲಕ್ಕೆ ಒಳಗಾದವರು,ಹಣ ಖರ್ಚು ಅವರು ಮಾಡ್ದೆ ಚುನಾವಣೆ ಮಾಡಿಲ್ಲ. ಹಣ ಕೊಡದೆ ಅವರು ಕಾಂಗ್ರೇಸ್-ಜೆಡಿಎಸ್ ನಿಂದ ಬಿಜೆಪಿಗೆ ಹೋಗಿಲ್ಲ. ಈಗ ಈ ಬಹುಮತದ ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿ-ಜೆಡಿಎಸ್ ನವರು ಈ ಸರ್ಕಾರ ಉಳಿಯಲ್ಲ ಅಂತಿದ್ದಾರೆ ಹಾಗಿದ್ರೆ ಆಪರೇಶನ್ ಕಮಲದ ಉದ್ದೇಶದಿಂದಲೇ ಈ ರೀತಿ ಹೇಳಿರೋದು ಅನಿಸುತ್ತೆ ಎಂದರು.


ಈ ಮಾತನ್ನ ಕುಮಾರಸ್ವಾಮಿ 20 ಬಾರಿ ಹೇಳಿದ್ದಾರೆ ಬಿಜೆಪಿಯವರು ಹೇಳಿದ್ದಾರೆ.


ಈ ಉಪಚುನಾವಣೆಲ್ಲೂ ಹಲವರು ಸರ್ಕಾರ ಉಳಿಯಲ್ಲ ಅಂದಿದ್ದಾರೆ. ಅಂದ್ಮೇಲೆ ಆಪರೇಶನ್ ಕಮಲಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?. ಅವ್ರು ಪ್ರಯತ್ನ ಮಾಡ್ತಿದ್ದಾರೆ ಅನ್ನೋದ್ಕೇ ಇದೇ ಸಾಕ್ಷಿ ಸಾಕಲ್ವ. ಅವ್ರು ಎಷ್ಡು ದುಡ್ಡು ಕೊಡ್ತೀನಿ ಅಂದಿದ್ದಾರೆ ಬಿಡ್ತಾರೋ ಅದು ಈಗ ಬೇಡ. ಒಂದಲ್ಲ ಒಂದ್ ದಿನ ಆ ಸತ್ಯ ಹೊರಗೆ ಬಂದೆ ಬರುತ್ತೆ. ಸದ್ಯ ಆ ಸತ್ಯ ಅಂತೂ ಅವರ ಬಾಯಲ್ಲೆ ಬಂದಿದೆ. ನೂರು ಕೋಟಿ ಆಫರ್ ವಿಚಾರ, ಈ ಮೊದಲು ಆಪರೇಶನ್ ನಲ್ಲಿ ಎಷ್ಟು ಕೊಟ್ಟಿದ್ರೋ ಗೊತ್ತಿಲ್ಲ ಈಗ ಅದು ಡಬಲ್ ಆಗಿರಬಹುದು ಎಂದರು.


ನಮ್ಮ ಶಾಸಕರು ಆಪರೇಷನ್‌ಗೆ ಮನ್ನಣೆ ಕೊಡ್ತಾ ಇಲ್ಲ
ಈಗ ಚುನಾವಣೆಗಳು ಮೊದಲ ರೀತಿ ನಡೆದಂತೆ ನಡೀತಿಲ್ಲ.ಹಾಗಾಗಿ ಜಾಸ್ತಿ ಆಫರ್ ಕೊಟ್ಟಿರಬಹುದೇನೋ. ಹಗರಣಗಳು ಇದ್ರೆ ಸರ್ಕಾರ ಉಳಿಯಲ್ಲ. ನಾವು ಹಗರಣ ಮಾಡಿಲ್ಲ. ನಮ್ಮದನ್ನು ಯಾವುದಾದರೂ ಪ್ರೂವ್ ಮಾಡಿದ್ದಾರಾ? ಸಿಎಂ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾರೆ. ಅವರು ಒಂದನ್ನೂ ನಿರೂಪಿಸಿಲ್ಲ, ಆಪರೇಷನ್ ಕಮಲದ ಮೂಲಕ ನಮ್ಮ ಸರ್ಕಾರ ತೆಗೆಯಲು ಮುಂದಾಗಿದ್ದಾರೆ. ನಮ್ಮ ಶಾಸಕರಲ್ಲಿ ಹಲವರನ್ನು ಬಿಜೆಪಿ ಅವರು ಸಂಪರ್ಕ ಮಾಡಿದ್ದಾರೆ. ಒಂದು ವರ್ಷದಿಂದಲೂ ಈ ಪ್ರಯತ್ನ ಮಾಡ್ತಾ ಇದ್ದಾರೆ. ನಮ್ಮವರು ಅವರಿಗೆ ಮನ್ನಣೆ ಕೊಡ್ತಾ ಇಲ್ಲ, ನಾನು ಇಂತವರನ್ನು ಭೇಟಿ ಮಾಡಿದ್ದಾರೆ, ಇಷ್ಟು ಆಮಿಷ ಮಾಡಿದ್ದಾರೆ ಎನ್ನಲ್ಲ. ನಮ್ಮ ಶಾಸಕರನ್ನು ಸಂಪರ್ಕ ಮಾಡಿರೋದು ಸತ್ಯ. ಆಡಿಯೋ ವಿಡಿಯೋ ಯಾರ ಹತ್ತಿರ ಇದೆ ಅವರು ಬಿಡುಗಡೆ ಮಾಡ್ತಾರೆ ಎಂದರು.