ಮನೆ ಯೋಗಾಸನ ಕುಂಭಕಗಳು

ಕುಂಭಕಗಳು

0

೩೬. ಕುಂಭಕ ಪ್ರಾಣಾಯಾಮಗಳಲ್ಲಿ ಕುಂಭಕವೆಂದರೆ ಮೊದಲು ಉಸಿರನ್ನು ಒಳಕೆಳೆದು ಅಲ್ಲಿಯೇ ತಡೆದಿಡುವುದು (ಅಂತರ ಕುಂಭಕ). ಇಲ್ಲವೇ ಉಸಿರನ್ನು ಪೂರ್ಣವಾಗಿ ಹೊರಬಿಟ್ಟು, ಅಲ್ಲಿಯೇ ತಡೆದಿಡುವುದು (ಬಾಹ್ಯಕುಂಭಕ)) ಈ ಮುಂದೆ ವಿವರಿಸಲ್ಪಡುವ ‘ಜಾಲಾಂಧರ’, ಉಡ್ಡಿಯಾನ, ‘ಮೂಲಾ’ ಎಂಬ ಹೆಸರಿನ ಈ ಮೂರು ಬಗೆಯ ಬಂಧಗಳನ್ನು ಅಭ್ಯಸಿಸಬೇಕು. ಈ ಬಂಧಗಳು ಉಸಿರನ್ನು ಒಳಕ್ಕೆಳೆಯುವ ಮತ್ತು ಹೊರಕ್ಕೆ ಬಿಡುವುದಾಗಿ ಏರ್ಪಟ್ಟ ವಾಯುದ್ಧಾರಗಳನ್ನು ಪ್ರಾಣಾಯಾಮಾಭ್ಯಾಸದಲ್ಲಿ ಮುಚ್ಚಿ, ಉಸಿರನ್ನು ತಡೆದಿಡುವಂಥವು.

Join Our Whatsapp Group

೩೭ ಈ ಅಂತರಕುಂಭಕವನ್ನು (ಒಳಕ್ಕೆಳೆದು ಉಸಿರನ್ನು ಅಲ್ಲಿಯೇ ತಡೆದಿಡುವ ಕ್ರಮ) ಅಭ್ಯಸಿಸುವ ಮುನ್ನ, ಶ್ವಾಸಕೋಶದೊಳಕ್ಕೆ ಉಸಿರನ್ನು ಪೂರ್ಣವಾಗಿ ತುಂಬುವ ‘ಪೂರಕ’ದ ಅಭ್ಯಾಸದಲ್ಲಿಯೂ ಮತ್ತು ಅದನ್ನು ಶ್ವಾಸಕೋಶಗಳಿಂದಾಚೆಗೆ ಸಂಪೂರ್ಣವಾಗಿ ಹೊರಬಿಡುವ ‘ರೇಚಕ’ದ ಅಭ್ಯಾಸದಲ್ಲಿಯೂ ಪೂರ್ಣ ಸ್ವಾಮ್ಯವನ್ನು ಗಳಿಸಬೇಕಾದುದು ಅತ್ಯಗತ್ಯ.

೩೮ ಅಂತರಕುಂಭಕವು ದೇಹಕ್ಕೆ ಚೆನ್ನಾಗಿ ಒಲಿದ ವಿನಾ ‘ಬಾಹ್ಯಕುಂಭಕ’ದ ಅಭ್ಯಾಸಕ್ಕೆ ತೊಡಗಬಾರದು.

೩೯.ಕುಂಭಕಪ್ರಾಣಾಯಾಮವನ್ನು ಅಭ್ಯಸಿಸುವ ಕಾಲದಲ್ಲಿ ವಾಯುವನ್ನು ಒಳಗಡೆಯೇ ಹೆಚ್ಚು ಕಾಲ ನಿಲ್ಲಿಸುವ ಸಲುವಾಗಿ, ವಾಯುವನ್ನು ಒಳಕ್ಕೆಳೆಯುವ ಮತ್ತು ವಪೆಯನ್ನೂ ಕಿಬ್ಬೊಟ್ಟೆಯಲ್ಲಿಯ ಅಂಗಗಳನ್ನೂ ಬಿಗಿ ಮಾಡುವ ಮತ್ತು ಅವನ್ನು ಸಡಿಲಿಸುವ ಪ್ರವೃತ್ತಿ ತಾನಾಗಿಉಂಟಾಗುತ್ತದೆ. ಈ ಪ್ರವೃತ್ತಿಯು ಅರಿವಿಲ್ಲದೆಯೇ ಯತ್ನಿಸದೆಯೇ ಬರುವಂಥದು. ಈ ಪ್ರವೃತ್ತಿಯನ್ನು ತಡೆದಿಡಲು ಎಚ್ಚರದಿಂದಿರಬೇಕು.

40.. ಉಸಿರನ್ನು ಒಳಗಾಗಲಿ, ಇಲ್ಲವೆ ಹೊರಗಾಗಲಿ ತಡೆದಿಡಲು ಅಂದರೆ, ಅಂತರ ಕುಂಭಕ ಮತ್ತು ಬಾಹ್ಯ ಕುಂಭಕಗಳನ್ನು ಅಭ್ಯಾಸಮಾಡುವುದು ಕಷ್ಟವಾಗಿ ತೋರಿದಲ್ಲಿ ಈ ಕುಂಭಕಾಭ್ಯಾಸ ಗಳನ್ನು ಅಭ್ಯಸಿಸುವ ಮುನ್ನ, ಆಳವಾಗಿ ಉಸಿರಾಟಚಕ್ರ ನಡೆಸುವುದನ್ನು ಅಭ್ಯಸಿಸಬೇಕು. ಉದಾಹರಣೆಗೆ, ಮೂರು ಸಲ ಆಳವಾದ ಉಸಿರಾಟ ನಡೆಸಿ, ಬಳಿಕ ಕುಂಭಕವನ್ನುದಬೇಕು. ಆನಂತರವೂ ಕುಂಭಕವನ್ನು ಆಚರಿಸುವ ಮುನ್ನ ಮತ್ತೆ ಮೂರು ಸಲ ಆಳವಾದ ಉಸಿರಾಟ ನಡೆಸಿರಬೇಕು.

೪೧. ವಾಯುವನ್ನು ತಡೆದಿಟ್ಟಾಗ, ಒಳಕ್ಕೆಳೆಯುವ ಮತ್ತು ಹೊರಕ್ಕೆ ಬಿಡುವ ಉಸಿರಾಟದಲ್ಲಿ ಸರಿಯಾದ ಸ್ಥಾಯಿ ದೊರಕದಿದ್ದಲ್ಲಿ, ಆಗ ವಾಯುವನ್ನು ತಡೆದಿಡುವ ಕಾಲವನ್ನು ತಗ್ಗಿಸಬೇಕು.

೪೨. ಕಣ್ಣು, ಕಿವಿಗಳ ಬೇನೆಗಳಿಂದ ನರಳುವವರು ಉಸಿರನ್ನು ತಡೆದಿಡುವ ಅಭ್ಯಾಸಕ್ಕೆ ತೊಡಗಬಾರದು

೪೩.ಕುಂಭಕಪ್ರಾಣಾಯಾಮವನ್ನು ಅಭ್ಯಸಿಸುವ ಮೊದಮೊದಲು ಕೆಲವು ವೇಳೆ ಮಲಬದ್ಧತೆಯು ತಲೆದೋರಬಹುದು. ಆದರೆ ಅದು ತಾತ್ಕಾಲಿಕ, ಅದು ಬರಬರುತ್ತ ಕಣ್ಮರೆಯಾಗುವುದು.

೪೪. ಸಾಮಾನ್ಯವಾಗಿ ಉಸಿರಾಟದ ವೇಗವು ಪ್ರತಿನಿಮಿಷಕ್ಕೆ ಹದಿನೈದು ಸಲ, ಆದರೆ ದೇಹದಲ್ಲಿ ಅಜೀರ್ಣ, ಜ್ವರ, ನೆಗಡಿ, ಕೆಮ್ಮುಗಳು ತಲೆದೋರಿದಾಗ ಮತ್ತು ಮನಸ್ಸಿನಲ್ಲಿ ಭಯ, ಕೋಪ, ಕಾಮಲಾಲಸೆಗಳಿಂದ ಉಸಿರಾಡದ ವೇಗವು ತಾನಾಗಿಯೇ ಹೆಚ್ಚುತ್ತದೆ ನಿಮಿಷಕ್ಕೆ 15ರ ಲೆಕ್ಕದಂತೆ 24 ಘಂಟೆಗಳಿಂದ ಕೂಡಿದ ಒಂದು ದಿನದಲ್ಲಿ ಈ ಉಸಿರಾಟವು (24 x 60 x 15 =) 21.600 ಆಗುತ್ತದೆ ಯೋಗಿಯು ತನ್ನ ಜೀವಮಾನವನ್ನು ಈ ಉಸಿರಾಟಗಳ ಲೆಕ್ಕಾಚಾರದಿಂದಳೆ ಯುವನೇ ವಿನಾ, ದಿನ ತಿಂಗಳು ವರ್ಷಗಳ ಲೆಕ್ಕದಿಂದಲ್ಲ ಪ್ರಾಣಾಯಾಮದಿಂದ ಪ್ರತಿ ಉಸಿರಾಟದ ಕಾಲವು ಲಂಬಿಸುವುದರಿಂದ, ಅಂದರೆ ಸಾಮಾನ್ಯ ಉಸಿರಾಟದ

45. ಲೆಕ್ಕಕ್ಕಿಂತ ತೀರ ತಗ್ಗಿರುವುದರಿಂದ ಅಭ್ಯಾಸಕನ ಜೀವಿತದ ಕಾಲವು ಈ ಮೂಲಕ ಹೆಚ್ಚುತ್ತದೆ.

೪೫. ಪ್ರಾಣಾಯಾಡುವನ್ನು ಎಡಬಿಡದೆ ಅಭ್ಯಸಿಸುವುದರಿಂದ ಅಭ್ಯಾಸಿಯು ಮನೋ ಭಾವದಲ್ಲಿ ವ್ಯತ್ಯಾಸವುಂಟಾಗಿ ಪ್ರಾಪಂಚಿಕವಾದ ಇಂದ್ರಿಯ ಚಾಪಲ್ಯಸುಖದ ಕಡೆಗೆ ಅಂದರೆ ಧೂಮಪಾನ, ಮದ್ಯಪಾನ ಮತ್ತು ಮೈಥನದ ಬಯಕೆಗಳ ಕಡೆಗೆ ಒಲವು ತುಂಬಾ ಕಡಿಮೆ ಯಾಗುತ್ತದೆ.

೪೬ ಪ್ರಾಣಾಯಾಮಾಭ್ಯಾಸದಲ್ಲಿ ಇಂದ್ರಿಯಗಳು ಇಂದ್ರಿಯಾರ್ಥಗಳಿಂದ ಬೇರ್ಪಟ್ಟು ಒಳಕ್ಕೆಳೆಯನ್ನುಡುವುದು ಚಿಲ್ಲದ ಕುಂಭಕ ಪ್ರಾಣಾಯಾಮದಲ್ಲಿರಬೇಕಾದ ಮೌನದಲ್ಲಿ ಅಭ್ಯಾಸಿಯು ఈ ಮುಂದಿನಂತಿರುವ  ಶಬ್ದದನ್ನು ಕೇಳುತ್ತಿರುತ್ತಾನೆ. ‘ಒಳಗೇ ನೋಡುತ್ತಿರು (a) end wand matada ನಿಜವಾದ ಸುಖದ ಮೂಲ ಒಳಗೆ ಅಡಗಿದೆ ಈ ಪ್ರಾಣಾಯಾಮಾಭ್ಯಾಸದಲ್ಲಿ ಪಂಣತಿಯುಂಟಾದರೆ ಅದು ಅಭ್ಯಾಸಿಯನ್ನು ಅದರ ಮುಂದಿನ ಪ್ರತ್ಯಾಹಾರವೆಂಬ ಮೆಟ್ಟಿಲಿಗೆ ಏರಿಸುತ್ತದೆ ಹಿಂದೆ ವಿವರಿಸಿದಂತೆ, ಈ ಪ್ರತ್ಯಾಹಾರ ಸ್ಥಿತಿಯಲ್ಲಿ ಅಭ್ಯಾಸಿಯು ಇಂದ್ರಿಯಗಳ ಕ್ರೂರವಾದ ಆಳ್ವಿಕೆಯಿಂದ ಬಿಡುಗಡೆ ಹೊಂದುತ್ತಾನೆ. ಅಂದರೆ ಇಂದ್ರಿಯಗಳ ತನ್ನನ್ನು ವಶಪಡಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಅವು ತನ್ನ ವಶವಾಗುತ್ತವೆ. ‘ವಶೇ ಹಿ ಯತ್ಯೇಂದ್ರಿ ಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ’ – ಅಂದರೆ ಯಾವಾತನಿಗೆ ಇಂದ್ರಿಯಗಳು ಅಧೀನವಾಗುತ್ತವೋ ಅವನೇ ‘ಸ್ಥಿತಪ್ರಜ್ಞ’ ಅಂಥವನೇ ‘ಜೀವನುಕ್ತ’ ಎಂದು ಶ್ರೀಕೃಷ್ಣನು ಶ್ರೀಮದ್ಭಗವದ್ಗೀತೆಯಲ್ಲಿ ಅಧಿಕಾರವಾಣಿಯಿಂದ ನುಡಿದಿದ್ದಾನೆ.

೪೭. ಪ್ರಾಣಾಯಾಮವನ್ನು ಅಭ್ಯಸಿಸುವ ಕಾಲದುದ್ದಕ್ಕೂ ಕಣ್ಣು ಮುಚ್ಚಿಕೊಂಡೇ ಇರಬೇಕಾಗಿರುವುದರಿಂದ ಯಾವುದಾದರೊಂದು ಪವಿತ್ರವಾದ ನಾಮ ಅಥವಾ ಮಂತ್ರ – ಜಪದ ಎಣಿಕೆಯಿಂದಲೇ ಕಾಲವನ್ನು ಕಳೆಯಬೇಕು ಮತ್ತೆ ಮತ್ತೆ ಮನಸ್ಸಿನಲ್ಲುಚ್ಚರಿಸುವಂಥ ಈ ಪವಿತ್ರ ನಾಮ, ಮಂತ್ರಗಳೆ ಯೋಗಿಯ ಮನೋಭೂಮಿಯಲ್ಲಿ ಬಿತ್ತಿದ ಈ ಬೀಜಗಳು ಕಾಲಕ್ರಮೇಣ ಮೊಳೆತು ಬೆಳೆದರೆ ಅವೇ ಅವನನ್ನು ‘ಧ್ಯಾನ’ದ ಅಥವಾ ‘ಚಿತ್ತೆ ಕಾಗ್ರತೆ’ಯ ಸ್ಥಿತಿಗೆ ಒಯ್ಯುತ್ತವೆ. ಇದು ಅಷ್ಟಾಂಗಯೋಗಗಳಲ್ಲಿ ಆರನೆಯ ಹಂತ ಕಟ್ಟಕಡೆಗೆ ಇದು ‘ಸಮಾಧಿ’ಯೆಂಬ ಫಲವನ್ನು ಅವನಿಗೆ ದೊರಕಿಸಿಕೊಡುತ್ತದೆ. ಈ ಸ್ಥಿತಿಯಲ್ಲಿ ಸಂಪೂರ್ಣ ಜ್ಞಾನ ‘ಚಿತ್’ ಮತ್ತು ‘ಆನಂದ’ ಇವುಗಳ ಅನುಭವವುಂಟಾಗುತ್ತದೆ. ಈ ಸ್ಥಿತಿಯಲ್ಲಿ ಯೋಗಿ ‘ವಿಶ್ವಸೃಜ’ನೆನಿಸಿದ ಪರಮಾತ್ಮನೊಡನೆ ಐಕ್ಯಸ್ಥಿತಿಯನ್ನು ಹೊಂದಿ ಆ ಮೂಲಕ ಅಂಚಿತ್ಯವಾದ ಮತ್ತು ಅವರ್ಣನೀಯವಾದ ಆನಂದಸುಖವನ್ನನುಭವಿಸುತ್ತಾನೆ. ತನ್ನ ಈ ಅನುಭವವವನ್ನು ಹೇಳಲಾಗದಿದ್ದರೂ, ಆನಂದಾನುಭವವನ್ನು ಹೊರತೋರದಿರಲಾರ ‘ಯತೋವಾಚೋ ನಿವರ್ತಂತೇ ಅಪ್ರಾಪ್ತ ಮನಸಾ ಸಹ’ ಎಂಬ ಶ್ರುತಿವಾಕ್ಯದಂತೆ ಆತ್ಮೈಕ ಸುಖಾನಂದವನ್ನು ಬಣ್ಣಿಸಲು ಮಾತು ಮನಗಳಿಗೆ ಅಳವಡಸದಿದ್ದರೂ ಸಹ ನಿತ್ಯಶಾಂತಿ – ಸುಖಾನುಭವ ಸ್ಥಿತಿಯನ್ನು ಮನದಲ್ಲಿ ಅನುಭವಿಸುತ್ತಿರುತ್ತಾನೆ.