ಕುಣಿಗಲ್(Kunigal): ಲಾರಿ ಹಾಗೂ ಬೊಲೆರೋ ನಡುವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ. ರಸ್ತೆ ಅರಮನೆ ಹೊನ್ನಾಮಾಚನಹಳ್ಳಿ ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಹುಲಿಯೂರು ದುರ್ಗ ಹಳೇಪೇಟೆ ನಿವಾಸಿ ಸಲೀಂ (30) ಮೃತ ಯುವಕ.
ನಾಸೀರ್ ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲಸದ ನಿಮಿತ್ತ ಸಲೀಂ ಹಾಗೂ ನಾಸೀರ್ ಮದ್ದೂರು ಕಡೆಗೆ ಹೋಗುತ್ತಿದ್ದ ಸಂದರ್ಭ ಮದ್ದೂರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
Saval TV on YouTube