ಮನೆ ದೇವಸ್ಥಾನ ಕುರುಡುಮಲೆ

ಕುರುಡುಮಲೆ

0

ಮುಳಬಾಗಿಲು: ತಾಲೂಕು ಕೇಂದ್ರ ಮುಳಬಾಗಿಲುವಿಗೆ ಹಿಂದೆ ಮೂಡ್ಲಬಾಗಿಲು ಎಂದು ಹೆಸರಿತ್ತು. ಕಾರಣ ತಿರುಪತಿಗೆ ಹೋಗುವ ಮಾರ್ಗದಲ್ಲಿ ಪೂರ್ವ ದಿಕ್ಕಿನಲ್ಲಿ ಇದು ಇದೆ. ಇಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನದ ದೊಡ್ಡ ಕಟ್ಟಡ. ಮೂರ್ತಿ ಬೃಹನ್ಮೂರ್ತಿ. ಸೋಮೇಶ್ವರ ಇನ್ನೊಂದು ದೇವಸ್ಥಾನ. ಇಲ್ಲಿರುವ ಸುಬ್ರಮಣ್ಯ ಸ್ವಾಮಿ ದೊಡ್ಡ ಮೂರ್ತಿ. 6 ಮುಖ, 12 ಕೈಗಳು, ನವಿಲಿನ ಮೇಲೆ ಕುಳಿತ ಭಂಗಿ.

ಮುಳಬಾಗಿಲುನಲ್ಲಿ ಶ್ರೀಪಾದರಾಯರ ಬೃಂದಾವನ ಹಾಗೂ ಮಠ ಇವೆ. ದಾಸಕೂಟದಲ್ಲಿ ಪ್ರಸಿದ್ಧರಾದ ಹಾಗೂ ವ್ಯಾಸರಾಯರ ಗುರುಗಳು ಆದವರು ಶ್ರೀ ಪಾದರಾಯರು. ಇದೊOದು ಪುಣ್ಯ ಸ್ಥಳ.

ಮುಳಬಾಗಿಲಿಗೆ ವಾಯುವ್ಯದಲ್ಲಿ 64 ಕಿಲೋಮೀಟರ್ ದೂರದಲ್ಲಿ ಕುರುಡುಮಲೆ ಕ್ಷೇತ್ರವಿದೆ. ಇಲ್ಲಿ ಮಹಾಗಣಪತಿಯ ದೇವಾಲಯವಿದೆ. ಇಲ್ಲಿ ದೇವತೆಗಳು ಕೂಡಿದುದರಿಂದ ಬೆಟ್ಟಕ್ಕೆ ಕೂಡುಮಲೆ ಎಂಬ ಹೆಸರು ಬಂದಿತು.  ಇಂದು ಜನರ ಬಾಯಲ್ಲಿ ಅದು ಕುರುಡು ಮಲೆಯಾಗಿದೆ. ಗಣಪತಿ ವಿಗ್ರಹ 10 ಅಡಿ ಇದೆ. ಬೃಹದಾಕಾರ. ಎದುರಿಗೆ ದೊಡ್ಡ ಮೂಷಿಕ. ತ್ರಿಪುರಾಸುರ ಸಂಹಾರಕ್ಕಾಗಿ ಇಲ್ಲಿ ದೇವತೆಗಳು ಮಹಾಗಣಪತಿಯನ್ನು ಪೂಜಿಸಿದರೆಂದು ಹೇಳುತ್ತಾರೆ.

ಹಿಂದಿನ ಲೇಖನದೆಹಲಿ-ಎನ್​ ಸಿಆರ್ ​ನಲ್ಲಿ 4.6 ತೀವ್ರತೆಯ ಭೂಕಂಪ
ಮುಂದಿನ ಲೇಖನಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಆನೆ ಸಾವು