ಮನೆ ರಾಷ್ಟ್ರೀಯ ಲ್ಯಾಂಡಿಂಗ್ ಗೇರ್ ಸಮಸ್ಯೆ, ಟೈರ್‌ ಸ್ಫೋಟ – ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ಲ್ಯಾಂಡಿಂಗ್ ಗೇರ್ ಸಮಸ್ಯೆ, ಟೈರ್‌ ಸ್ಫೋಟ – ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

0

ಕೊಚ್ಚಿ : ಜೆಡ್ಡಾದಿಂದ ಕೋಝಿಕ್ಕೋಡ್‌ಗೆ 160 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಲ್ಯಾಂಡಿಂಗ್ ಗೇರ್ ಮತ್ತು ಟೈರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 398 ಅನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ವಿಮಾನದ ಬಲಭಾಗದ ಮುಖ್ಯ ಲ್ಯಾಂಡಿಂಗ್ ಗೇರ್ ಮತ್ತು ಟೈರ್ ವೈಫಲ್ಯಕ್ಕೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಕೊಚ್ಚಿಗೆ ತಿರುಗಿಸಲಾಯಿತು. ತುರ್ತು ಪರಿಸ್ಥಿತಿಯಲ್ಲಿ ಬೆಳಿಗ್ಗೆ 09:07 ಕ್ಕೆ ವಿಮಾನ ಸುರಕ್ಷಿತವಾಗಿ ಇಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ತುರ್ತು ಲ್ಯಾಂಡಿಂಗ್‌ಗಾಗಿ ಎಲ್ಲಾ ತುರ್ತು ಸೇವೆಗಳನ್ನು ಮುಂಚಿತವಾಗಿ ವ್ಯವಸ್ಥೆ ಮಾಡಲಾಗಿತ್ತು. ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ಸಮಸ್ಯೆಯಾಗಿಲ್ಲ. ಲ್ಯಾಂಡಿಂಗ್ ನಂತರ ತಪಾಸಣೆಯಲ್ಲಿ ಬಲಭಾಗದ ಎರಡೂ ಟೈರ್‌ಗಳು ಸಿಡಿದಿರುವುದು ದೃಢಪಟ್ಟಿದೆ. ಬಳಿಕ ವಿಮಾನವನ್ನು ರನ್‌ವೇಯಿಂದ ತೆರವುಗೊಳಿಸಿ, ಬೇರೆ ವಿಮಾನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.