Saval TV on YouTube
ಕ್ವಾಲಾಲಂಪುರ: ಮಲೇಷ್ಯಾದ ಕ್ಯಾಂಪ್ ಪ್ರದೇಶದಲ್ಲಿ ಉಂಟಾದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 50 ಮಂದಿ ನಾಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ರಾಜಧಾನಿ ಕ್ವಾಲಾಲಂಪುರ್’ನ ಹೊರವಲಯದಲ್ಲಿರುವ ಸೆಲಂಗೋರ್’ನಲ್ಲಿ ಬೆಳಗಿನ ಜಾವ 3 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತಂಡ ಸ್ಥಳಕ್ಕೆ ದೌಡಾಯಿಸಿವೆ.
ಕ್ಯಾಂಪಿಂಗ್ ಸೌಲಭ್ಯಗಳನ್ನು ಒದಗಿಸುವ ಫಾರ್ಮ್’ಹೌಸ್ ಬಳಿಯ ರಸ್ತೆಯ ಬದಿಯಲ್ಲಿ ಕುಸಿತ ಸಂಭವಿಸಿದೆ ಎಂದು ರಾಜ್ಯ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ಭೂಕುಸಿತದಲ್ಲಿ ಒಟ್ಟು 79 ಮಂದಿ ಸಿಲುಕಿದ್ದರು. ಆ ಪೈಕಿ 23 ಮಂದಿ ಸುರಕ್ಷಿತವಾಗಿದ್ಧಾರೆ. ಇಬ್ಬರು ಮೃತಪಟ್ಟಿದ್ದು, 51 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಕ್ಯಾಂಪ್ ಪ್ರದೇಶದಿಂದ 30 ಮೀಟರ್(100 ಅಡಿ) ಎತ್ತರದಿಂದ ಭೂಕುಸಿತ ಸಂಭವಿಸಿದ್ದು. ಒಂದು ಎಕರೆಯಷ್ಟು ಪ್ರದೇಶವನ್ನು ಆವರಿಸಿದೆ ಎಂದು ರಕ್ಷಣಾ ಇಲಾಖೆಯ ನಿರ್ದೇಶಕ ನೊರಾಜಮ್ ಖಾಮಿಸ್ ತಿಳಿಸಿದ್ದಾರೆ.














