ಮನೆ ಅಂತಾರಾಷ್ಟ್ರೀಯ ದಕ್ಷಿಣ ಫಿಲಿಪೈನ್ಸ್‌ ನಲ್ಲಿ ಭೂಕುಸಿತ: ಮೃತರ ಸಂಖ್ಯೆ 54ಕ್ಕೆ ಏರಿಕೆ

ದಕ್ಷಿಣ ಫಿಲಿಪೈನ್ಸ್‌ ನಲ್ಲಿ ಭೂಕುಸಿತ: ಮೃತರ ಸಂಖ್ಯೆ 54ಕ್ಕೆ ಏರಿಕೆ

0

ದಕ್ಷಿಣ ಫಿಲಿಪೈನ್ಸ್‌:  ದಕ್ಷಿಣ ಫಿಲಿಪೈನ್ಸ್‌ ನಲ್ಲಿ ಭೂಕುಸಿತ ದಿಂದ ಮೃತರ ಸಂಖ್ಯೆ 54 ಕ್ಕೆ ಏರಿದೆ. ಕಾಣೆಯಾದ 63 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸರ್ಕಾರ ತಿಳಿಸಿದೆ.

ಫೆಬ್ರವರಿ 6 ರ ಸಂಜೆ ದಾವೊ ಡಿ ಓರೊ ಪ್ರಾಂತ್ಯದ ಪರ್ವತ ನಗರವಾದ ಮಾಕೊದಲ್ಲಿ ಭೂಕುಸಿತ ಸಂಭವಿಸಿದೆ. ಅನೇಕ ಮನೆಗಳು, ವಾಹನಗಳು ಮತ್ತು ಹತ್ತಾರು ಮಂದಿ ಸಮಾಧಿಯಾಗಿದ್ದಾರೆ. ಕನಿಷ್ಠ 32 ಜನರು ಗಾಯಗೊಂಡಿದ್ದಾರೆ ಎಂದು ಮ್ಯಾಕೋ ಟೌನ್ ವಿಪತ್ತು ತಡೆ ಕಚೇರಿ ತಿಳಿಸಿದೆ.

ಮೈಕೊ ಪುರಸಭೆಯ ನಾಲ್ಕು ಗ್ರಾಮಗಳಲ್ಲಿ 1,347 ಕುಟುಂಬಗಳು ಅಥವಾ 5,431 ಜನರು ಭೂಕುಸಿತದಿಂದ ಪ್ರಭಾವಿತರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಸಮಯದಲ್ಲಿ ಫಿಲಿಪೈನ್ಸ್​ನಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ, ಅದು 10 ಕಿ.ಮೀ ಆಳದಲ್ಲಿತ್ತು. ಭೂಕಂಪದ ಕೇಂದ್ರ ಬಿಂದು ಭೂಕುಸಿತದ ಸ್ಥಳದಿಂದ ಉತ್ತರಕ್ಕೆ 150 ಕಿ.ಮೀ ದೂರದಲ್ಲಿದೆ. ಸುಮಾರು 50 ಗಂಟೆಗಳ ಕಾಲ ಅವಶೇಷಗಳಡಿ ಹೂತುಹೋಗಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಣಾ ಪಡೆ ಜೀವಂತವಾಗಿ ಹೊರತೆಗೆದಿದೆ. ಆರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಹಿಂದಿನ ಲೇಖನಗೃಹಿಣಿ ಆತ್ಮಹತ್ಯೆ: ಪತಿ ಪೊಲೀಸರ ವಶಕ್ಕೆ
ಮುಂದಿನ ಲೇಖನ3ನೇ ಬಾರಿ ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ಯಾರಿಂದಲೂ ತಪ್ಪಿಸಲಾಗದು: ಹೆಚ್ ​​ಡಿ ಕುಮಾರಸ್ವಾಮಿ