ಮನೆ ಮನರಂಜನೆ ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ ‘ಲತಾ ದೀನನಾಥ ಮಂಗೇಶ್ಕರ್’ ಪ್ರಶಸ್ತಿ

ನರೇಂದ್ರ ಮೋದಿ ಅವರಿಗೆ ಪ್ರಥಮ ವರ್ಷದ ‘ಲತಾ ದೀನನಾಥ ಮಂಗೇಶ್ಕರ್’ ಪ್ರಶಸ್ತಿ

0

ಬಾಲಿವುಡ್‌ನ (Bollywood) ಖ್ಯಾತ ಗಾಯಕಿ (Singer), ಗಾನ ಕೋಗಿಲೆ ಲತಾ ಮಂಗೇಶ್ಕರ್ (Lata Mangeshkar) ಹೆಸರಲ್ಲಿ ಪ್ರಶಸ್ತಿ (Award) ನೀಡಲು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ (Trust) ನಿರ್ಧರಿಸಿದೆ.

ಪ್ರಥಮ ವರ್ಷದ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್ 24ರಂದು ಮುಂಬೈನ (Mumbai) ಷಣ್ಮುಖಾನಂದ ಸಭಾಂಗಣದಲ್ಲಿ ನಡೆಯಲಿದ್ದು, ಪ್ರಥಮ ವರ್ಷದ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಸ್ಟರ್ ದೀನನಾಥ್ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಾರಿ ಲತಾ ಮಂಗೇಶ್ಕರ್ ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿಗಳು ಸಂಗೀತ, ನಾಟಕ, ಕಲೆ, ವೈದ್ಯಕೀಯ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದ ದಂತಕಥೆಗಳನ್ನು ಗೌರವಿಸುವ ಗುರಿಯನ್ನು ಹೊಂದಿವೆ.

ಭಾರತವನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ಇರಿಸಿರುವ ಪ್ರಧಾನಿ ಮೋದಿ ಅವರು ಅಂತರಾಷ್ಟ್ರೀಯ ರಾಜನೀತಿಜ್ಞ ಎಂದು ಸಂಸ್ಥೆ ಹೇಳಿದೆ. ನರೇಂದ್ರ ಮೋದಿ ಅವರನ್ನು ಸ್ಫೂರ್ತಿ ಎಂದು ಕರೆದ ಸಂಸ್ಥೆ, ಭಾರತವು ತನ್ನ ಭವ್ಯ ಇತಿಹಾಸದಲ್ಲಿ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಹೇಳಿದೆ.

ಹಿರಿಯ ನಟರಾದ ಆಶಾ ಪರೇಖ್ ಮತ್ತು ಜಾಕಿ ಶ್ರಾಫ್ ಅವರು ಸಿನಿಮಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮಾಸ್ಟರ್ ದೀನನಾಥ್ ಪುರಸ್ಕಾರ (ವಿಶೇಷ ಗೌರವ) ಸ್ವೀಕರಿಸುತ್ತಾರೆ. ರಾಹುಲ್ ದೇಶಪಾಂಡೆ ಅವರು ಭಾರತೀಯ ಸಂಗೀತಕ್ಕಾಗಿ ಮಾಸ್ಟರ್ ದೀನನಾಥ್ ಪುರಸ್ಕಾರವನ್ನು ಸ್ವೀಕರಿಸಿದರೆ, ಅತ್ಯುತ್ತಮ ನಾಟಕ ಪ್ರಶಸ್ತಿಯನ್ನು ಸಂಜಯ್ ಛಾಯಾ ನಾಟಕಕ್ಕೆ ನೀಡಲಾಗುತ್ತದೆ.

ಮಾಸ್ಟರ್ ದೀನನಾಥ್ ಪುರಸ್ಕಾರ (ಆನಂದಮಯೀ ಪುರಸ್ಕಾರ್) ಅನ್ನು ನೂತನ್ ಮುಂಬೈ ಟಿಫಿನ್ ಬಾಕ್ಸ್ ಪೂರೈಕೆದಾರರ ಚಾರಿಟಿ ಟ್ರಸ್ಟ್‌ಗೆ ಅದರ ಸಮಾಜ ಸೇವಾ ಕ್ಷೇತ್ರದಲ್ಲಿನ ಸಮರ್ಪಿತ ಸೇವೆಗಳಿಗಾಗಿ ನೀಡಲಾಗುವುದು.