ಮನೆ ಸುದ್ದಿ ಜಾಲ ದಿವಂಗತ ಆರ್.ಧ್ರುವನಾರಾಯಣ್ ಪತ್ನಿ ವೀಣಾ ನಿಧನ

ದಿವಂಗತ ಆರ್.ಧ್ರುವನಾರಾಯಣ್ ಪತ್ನಿ ವೀಣಾ ನಿಧನ

0

ಮೈಸೂರು: ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್​​.ಧ್ರುವನಾರಾಯಣ ನಿಧನರಾಗಿ ತಿಂಗಳೊಳಗೆ ಪತ್ನಿ ವೀಣಾ ಧ್ರುವನಾರಾಯಣ್ ಸಾವನ್ನಪ್ಪಿದ್ದಾರೆ.

Join Our Whatsapp Group

ಅನಾರೋಗ್ಯದಿಂದ ಬಳಲುತ್ತಿದ್ದ ವೀಣಾ ಧ್ರುವನಾರಾಯಣ್ ಅವರು ಇಂದು (ಏಪ್ರಿಲ್ 07) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

ತಂದೆ ಆರ್​.ಧ್ರುವನಾರಾಯಣ ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ದರ್ಶನ್ ಮತ್ತು ಧೀರನ್ ಅವರಿಗೆ ಈಗ ತಾಯಿ ನಿಧನ ಬರಸಿಡಿಲಿನಂತೆ ಬಡಿದಿದೆ. ತಂದೆಯ ಸಾವಿನ ಬಳಿಕ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರು ಈಗ ತಾಯಿ ವೀಣಾರನ್ನು ಕಳೆದುಕೊಂಡಿದ್ದಾರೆ.