‘ಪಾರ್ಶ್ವ’ ಪಕ್ಕ; ಏಕಪಾದ =ಒಂದು ಕಾಲು..ಈ ಭಂಗಿಯಲ್ಲಿ ಒಂದು ಕಾಲನ್ನು ಒಂದು ಪಕ್ಕಕ್ಕೆ ನೆಲದ ಮೇಲಿಳಿಸಿ ಅದನ್ನು ತಲೆಗೆ ಸಮರೇಖೆಯಾಗುವಂತೆ ಇಡಬೇಕು. ಇನ್ನೊಂದು ಕಾಲನ್ನು ನೆಲಕ್ಕೆ ಲಂಬವಾಗಿರುವಂತೆ ನೆಟ್ಟಗೆ ಎತ್ತಿ ನಿಲ್ಲಿಸಬೇಕಾಗಿದೆ.
1. ಮೊದಲು, ಆ ಹಿಂದೆ ವಿವರಿಸಿದೆ 208 ಮತ್ತು 209ನೇ ಚಿತ್ರಗಳಲ್ಲಿ ತೋರಿಸಿರುವಂತೆ ‘ಏಕಪದ ಶೀ ರ್ಷಾಸನ’ದ ಭಂಗಿಯನ್ನು ಅಭ್ಯಸಿಸಿದ ಮೇಲೆ ಈ ಆಸನದ ಭಂಗಿಯಲ್ಲಿ ತೊಡಗಬೇಕು.
2. ಬಳಿಕ,ಉಸಿರನ್ನು ಹೊರ ಬಿಟ್ಟು ಬಲಗಾಲನ್ನು ಬಲಪಕ್ಕಕ್ಕೆ ಇಳಿಸಿ ಅದನ್ನು ನೆಲದ ಮೇಲೆ ತಲೆಯಿರುವ ಸ್ಥಳಕ್ಕೆ ಸಮಸರಳ ರೇಖೆಯಲ್ಲಿರುವಂತೆ ಮಾಡಬೇಕು. ಆಮೇಲೆ ‘ಶೀ ರ್ಷಾಸನ’ದಲ್ಲಿರುವ ಎಡಗಾಲನ್ನು ಮೇಲೆತ್ತಿ ನೆಟ್ಟಾಗೆ ನಿಲ್ಲಿಸಬೇಕು.
3. ಏಕಪಾದ ಶ್ರೀ ರ್ಷಾಸನಕ್ಕಿಂತಲೂ ಈ ಆಸನದ ಭಂಗಿಯಲ್ಲಿ ತಲೆಯ ಮೇಲೆ ನಿಲ್ಲುವುದು ಕಷ್ಟಾಂತರ ಈ ಬಂಗಿಯಲ್ಲಿ ತಲೆಯ ಮೇಲೆ ಸಮತೋಲನ ಸ್ಥಿತಿಯಲ್ಲಿ ನಿಲ್ಲಲು ಎರಡೂ ತೊಡೆಗಳ ಹಿಂಬದಿಯ ಮಾಂಸಖಂಡಗಳನ್ನು ಹಿಗ್ಗಿಸಿ ಮಂಡಿಗಳನ್ನೂ ಮತ್ತೆ ಕೆಳಕ್ಕಿಳಿಸಿದ ಕಾಲಿನ ಕಡೆ, ಕಿಬ್ಬೊಟೆಯ ಕೆಳಗೆ ಟೊಃಕದ ಪಾರ್ಶ್ವ ಭಾಗದ ತೊಡೆಸಂದಿಗೆ ಸಂಬಂಧಿಸಿದ ಮಾಂಸಖಂಡಗಳನ್ನು ಬಿಗಿ ಗೊಳಿಸಬೇಕು.
4. ಈ ಭಂಗಿಯಲ್ಲಿ ಆಳವಾಗಿ ಉಸಿರಾಟವನ್ನು ನಡೆಸುತ್ತ, ಸುಮಾರು 20 30 ಸೆಕೆಂಡುಗಳಕಾಲ ನೆಲೆಸಬೇಕು. ಆ ಬಳಿಕ ಜಾನುರಜ್ಜುಗಳನ್ನೂ ಮತ್ತು ತೊಡೆಗಳನ್ನು ಹಿಗ್ಗಿಸಿದಮೇಲೆ ಉಸಿರನ್ನು ಹೊರಕ್ಕೆಬಿಡುತ್ತ, ಬಲಗಾಲನ್ನು ಸರಿಸಿ ‘ಶೀರ್ಷಾ ಸನ’ಕ್ಕೆ ತಂದು ನಿಲ್ಲಿಸಬೇಕು.
5. ಈ ಶೀರ್ಷಾಶಾಸನದ ಭಂಗಿಯಲ್ಲಿ ಸ್ವಲ್ಪ ಕಾಲವಿದ್ದು, ಎಡಗಾಲನ್ನು ಪಕ್ಕಕ್ಕೆ ನೆಲದ ಮೇಲೆಳಿಸಿ,ಅದನ್ನು ತಲೆಗೆ ಸಮರೇಖೆಯಲ್ಲಿರಿಸಬೇಕು.ಈ ಭಂಗಿಯಲ್ಲಿ ನೆಲೆಸುವ ಕಾಲವು ಹಿಂದೆನಷ್ಟೇ ಇರಬೇಕು.ಆ ಬಳಿಕ ಉಸಿರನ್ನು ಹೊರದೂಡಿ. ಮತ್ತೆ ಶೀರ್ಷಾಶಾಸನಕ್ಕೆ ಹಿಂದಿರುಗಬೇಕು.
6. ಕಾಲುಗಳನ್ನು ನೆಲೆಕ್ಕಿಳಿವಾಗ, ಇಲ್ಲವೇ ಮೇಲೆತ್ತುವಾಗ ಮಂಡಿಗಳನ್ನು ಸರ್ವಥಾ ಬಗ್ಗಿಸಬಾರದು. ಸಮತೋಲನ ಸ್ಥಿತಿಯನ್ನು ಕಳೆದುಕೊಳ್ಳಬೇಕಾಗುವುದು.
ಪರಿಣಾಮಗಳು
ಈ ಆಸನವು ಕತ್ತು, ಕಿಬ್ಬೊಟ್ಟಿಯೊಳಗಿನ ಮಾಂಸ ಭಿತ್ತಿದಿಗಳು ಮತ್ತು ತೊಡೆಗಳನ್ನು ಬಲಗೊಳಿಸುವುದಲ್ಲದೆ, ಕರಳುಗಳಿಗೂ ಮತ್ತು ಬೆನ್ನೆಲುಬಿಗೂ ಹುರುಪುಕೊಟ್ಟು ಶಕ್ತಿಯನ್ನಃ ಮೂಡಿಸುತ್ತದೆ.