‘ಹಲಾಸನ’ದ ಈ ಭಂಗಿಯಲ್ಲಿ ಕಾಲುಗಳೆರಡೂ ತಲೆಯ ಹಿಂಬದಿಯಲ್ಲಿ ನೆಲೆಸಿದರೆ, ಈ ಭಂಗಿಯಲ್ಲಿ ಅವನು ತಲೆಯ ಒಂದು ಪಕ್ಕಕ್ಕೂ ಮತ್ತು ಅದರ ಮಟ್ಟಕ್ಕೂ ಬರುವಂತೆ ಇಡಬೇಕು. ಇದು ಒಂದು ಪಕ್ಕಕ್ಕೆ ನೇಗಿಲಾ ಕಾರದ ಭಂಗಿಯಾದುದರಿಂದ ‘ಪಾರ್ಶ್ವಹಲಾಸನ’ ಎಂಬ ಹೆಸರು. ಇದಕ್ಕೆ ಒಪ್ಪುತ್ತದೆ.
ಅಭ್ಯಾಸ ಕ್ರಮ
1. ಮೊದಲು, ‘ಸುಪ್ತ ಕೋನಾಸನ’ವನ್ನು ಅಭ್ಯಸಿಸಿ, ಆ ಬಳಿಕ ‘ಹಲಾಸನ’ದ ಭಂಗಿಗೆ ಹಿಂದುಳಿದಬೇಕು.
2. ಆಮೇಲೆ ಅಂಗೈಗಳನ್ನು ಪಕ್ಕೆ ಲಬುಗಳ ಹಿಂಬದಿಗೆ ಸೇರಿಸಬೇಕು.
3. ಆನಂತರ ಕಾಲುಗಳೆರಡನ್ನು ಎಡಪಕ್ಕಕ್ಕೆ ಸಾಧ್ಯವಾದಷ್ಟು ಚಾಕಿರಬೇಕು.
4. ತರುವಾಯು, ಮಂಡಿಗಳೆರಡನ್ನೂ ಬಿಗಿಗೊಳಿಸಿ, ಅಂಗೈಗಳ ನೆರವನ್ನು ಪಡೆದು, ಮುಂಡವನ್ನು ಮೇಲೆತ್ತಿ, ಕಾಲುಗಳನ್ನು ಹಿಗ್ಗಿಸಿಡಬೇಕು.
5. ಈ ಭಂಗಿಯಲ್ಲಿ, ಸುಮಾರು ಅರ್ಧ ನಿಮಿಷದ ಕಾಲ ಸಾಮಾನ್ಯ ಉಸಿರಾಟದಿಂದ ನೆರಸಬೇಕು.
6. ಆ ಬಳಿಕ, ಉಸಿರನ್ನು ಹೊರ ಹೋಗಿಸಿ ಕಾಲುಗಳನ್ನು ಬಲಪಕ್ಕಕ್ಕೆ ಸರಿಸುತ್ತ, ಅವುಗಳನ್ನು ತಲೆಮಟ್ಟದ ರೇಖೆಗೆ ಸರಿಯಾಗುವಂತೆ ನೆಲದ ಮೇಲಿಟ್ಟು ಈ ಭಂಗಿಯಲ್ಲಿ ಸುಮಾರು ಅರ್ಧ ನಿಮಿಷ ಕಾಲ ನೆಲೆಸಬೇಕು. ಆಗ ಕಾಲುಗಳನ್ನು ಸರಿಸುವಾಗ ಎದೆ ಮತ್ತು ಮುಂಡ ಇರುವ ಸ್ಥಾನಗಳನ್ನು ಬದಲಾಯಿಸಬಹುದು. ಮುಂಡ ಮತ್ತು ಎದೆ ಇವು ಸರ್ವಾಂಗಸನ ಇಲ್ಲವೇ ‘ಹಲಾಸನ’ಗಳಲ್ಲಿರುವಂತೆಯೇ ಇರಬೇಕು.
ಪರಿಣಾಮಗಳು
ಈ ಆಸನದ ಭಂಗಿಯಲ್ಲಿ, ಬೆನ್ನೆಲುಬು ನೀವು ಪಕ್ಕಗಳಿಗೆ ತಿರುಗಿಸಬೇಕಾಗಿರುವುದರಿಂದ ಅದರ ಪರಿಣಾಮವಾಗಿ ಬೆನ್ನೆಲುಬು ಹೆಚ್ಚು ಸ್ಥಿತಿಸ್ಥಾಪಕತ್ವದ ಗುಣವನ್ನು ಗಳಿಸಿರುವುದಲ್ಲದೆ,ದೊಡ್ಡ ಕರುಳಿನ ಕೆಲ ಭಾಗವು ಈ ಭಂಗಿಯ ಬುಡ ಮೇಲುಸ್ಥಿತಿಗೆ ಬರುವುದರಿಂದ ಅದಕ್ಕೆ ಒಳ್ಳೆಯ ವ್ಯಾಯಾಮ ದೊರೆತು, ಅದರಿಂದ ಮಲವಿಸರ್ಜನೆಯ ಕಾರ್ಯ ಕ್ರಮವಾಗಿ ನಡೆಯಲಿ ನಡೆಯಲು ಅನುಕೂಲಕೂಲಿಸುತ್ತದೆ. ಬಹುಕಾಲದಿಂದ ಮಲಬದ್ಧತೆಯಿಂದ ನರಳುವವರು ಈ ಆಸನದಿಂದ ಸತ್ಛಲವನ್ನು ಗಳಿಸುವವರು.ಅನೇಕ ರೋಗಿಗಳಿಗೆ ಮಲಬದ್ಧತೆಯೇ ಮೂಲವಾದುದರಿಂದ ಅದನ್ನು ಈ ಆಸನಾಭ್ಯಾಸದಿಂದ ತಲೆ ತೂಗಿಸಬೇಕಾದುದು ಅತ್ಯಾವಶ್ಯಕ. ಹೊರಗಿನ ಕಸ ಕಡ್ಡಿಗಳ ಶೇಖರಣೆಯೇ ನಮಗೆ ಅಸಹ್ಯವೆನಿಸುವಾಗ, ನಮ್ಮ ದೇಹದಲ್ಲಿಯೇ ವಿಷಜೀವಾಣುಗಳನ್ನು ಉತ್ಪಾದಿಸುವ ಮಲದ ಶೇಖರಣೆ ಯಾದರೆ ಮನಸ್ಸಿಗೂ ಮತ್ತು ದೇಹಕ್ಕೂ ಇದರಿಂದ ಎಷ್ಟು ತೊಂದರೆಯಾಗುತ್ತದೆ. ಎಂಬುದನ್ನು ಗಮನಿಸಿದರೆ, ಅದರ ಮೂಲೋಚ್ಛಾಟನೆಗೆ ಸಾಧನವಾದ ಈ ಅಸನಭ್ಯಾಸವನ್ನು ಪ್ರತಿ ವ್ಯಕ್ತಿಯು ಕೈಗೊಳ್ಳಬೇಕೆಂಬುದನ್ನು ಒತ್ತಿ ಹೇಳಬೇಕಾಗಿಲ್ಲ.ದೇಹದ ಒಳಕೆಗೆ ಸಲ್ಲದ ಮುತ್ತು ದೇಹಾ ರೋಗ್ಯವನ್ನು ಕಳ್ಳರಂತೆ ಅಪರಿಸುವ ನಿಷ್ಪ್ರಯೋಜನ ವಸ್ತುಗಳನ್ನು ಹೊರದೂಡದಿದ್ದಲ್ಲಿ, ದೇಹಾ ರೋಗ್ಯವು ಕೆಟ್ಟು ಅನೇಕ ವಿಧ ರೋಗಗಳಿಗೀಡಾಗಿ ಜೀವನದ ಸೌಖ್ಯವೇ ಇಲ್ಲದಂತಾಗುವುದು ಮಾತ್ರವಲ್ಲದೆ, ಈ ಮಲಬದ್ಧತೆಯ ಪರಿಣಾಮವಾಗಿ ಬುದ್ಧಿಶಕ್ತಿ ಕುಸಿದು, ವೈಭಾರ ತಲೆದೂರಿ ಸಿಡುಕುತನ ಮೊದಲಾದ ಬುದ್ಧಿಯ ದುಷ್ಪ್ರವೃತ್ತಿಗಳಿಗೆ ಕಾರಣವಾಗುತ್ತದೆ. ಆ ಆಸನಾಭ್ಯಾಸದಿಂದ ದೇಹಕ್ಕೆ ಲವಲವಿಕೆ,ಬುದ್ಧಿಗೆ ಹುರುಪು ಮನಸ್ಸಿಗೆ ಇಂಪು, ಆ ಮೂಲಕ ಜೀವನದಲ್ಲಿ ಸುಖ ಲಭಿಸುವ ಕಾರಣದಿಂದ ಮೇಲಿನ ಫಲಗಳನ್ನು ಬಯಸುವವರು ಈ ಆಸನಾ ಭ್ಯಾಸವನ್ನು ಆಚರಿಸಲೇಬೇಕು.