ಮನೆ ಆಟೋ ಮೊಬೈಲ್ ಆಕರ್ಷಕ ಫೀಚರ್ಸ್ ಹೊಂದಿರುವ ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ಬಿಡುಗಡೆ

ಆಕರ್ಷಕ ಫೀಚರ್ಸ್ ಹೊಂದಿರುವ ಹೀರೋ ಎಕ್ಸ್‌ಟ್ರಿಮ್ 160R 4V ಬೈಕ್ ಬಿಡುಗಡೆ

0

ಭಾರತದ ಅಗ್ರ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್(Hero Motocorp) ತನ್ನ ಬಹುನೀರಿಕ್ಷಿತ ಎಕ್ಸ್‌ ಟ್ರಿಮ್ 160R 4V ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1.27 ಲಕ್ಷ ಬೆಲೆ ಹೊಂದಿದೆ.

Join Our Whatsapp Group

ಹೊಸ ಬೈಕ್ ಮಾದರಿಯು ವಿವಿಧ ಫೀಚರ್ಸ್ ಗಳಿಗೆ ಅನುಗುಣವಾಗಿ ಸ್ಟ್ಯಾಂಡರ್ಡ್, ಕನೆಕ್ಟೆಡ್ ಮತ್ತು ಪ್ರೊ ಎನ್ನುವ ಮೂರೂ ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಸ್ಟ್ಯಾಂಡರ್ಡ್ ಮಾದರಿಯು ರೂ. 1.27 ಲಕ್ಷ ಬೆಲೆ ಹೊಂದಿದ್ದರೆ ಕನೆಕ್ಟೆಡ್ ಮಾದರಿಯು ರೂ. 1,32,800 ಬೆಲೆ ಪಡೆದುಕೊಂಡಿದೆ. ಹಾಗೆಯೇ ಟಾಪ್ ಎಂಡ್ ಮಾದರಿಯಾದ ಪ್ರೊ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 1,36,500 ಬೆಲೆ ಹೊಂದಿದ್ದು, ಇದು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದೆ.

ಪವರ್ ಫುಲ್ ಎಂಜಿನ್ ಜೋಡಣೆ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಎಕ್ಸ್‌ಟ್ರಿಮ್ 160R 4V ಬೈಕ್ ಮಾದರಿಯಲ್ಲಿ 163 ಸಿಸಿ ಎಂಜಿನ್ ಅನ್ನು ಈ ಹಿಂದಿನ ಟು-ವಾಲ್ವ್ ನಿಂದ ಫೋರ್-ವಾಲ್ಟ್ ಗೆ ಉನ್ನತೀಕರಿಸಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 16.6 ಹಾರ್ಸ್ ಪವರ್ ಮತ್ತು 14.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಇದು ಈ ಹಿಂದಿನ ಮಾದರಿಗಿಂತ ಹೆಚ್ಚುವರಿಯಾಗಿ 1.6 ಹಾರ್ಸ್ ಪವರ್ ಮತ್ತು 0.6 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಆಯಿಲ್ ಕೂಲ್ಡ್ ವೈಶಿಷ್ಟ್ಯತೆ ಹೊಂದಿದೆ.

ಇದರೊಂದಿಗೆ ಹೊಸ ಬೈಕ್ ಮಾದರಿಯಲ್ಲಿ ಹೀರೋ ಕಂಪನಿಯು ಟೆಲಿಸ್ಕೋಪಿಕ್ ಫೋರ್ಕ್‌ ಬದಲಾಗಿ ಅಪ್ ಸೈಡ್ ಫೋರ್ಕ್‌ ಗಳನ್ನು ಸೇರಿಸಿದ್ದು, ಇದು ಗೋಲ್ಡ್ ಪೇಟಿಂಗ್ ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ ಶೋವಾ ಮೊನೊಶಾರ್ಕ್ ಸಸ್ಷೆಂಷನ್ ನೀಡಲಾಗಿದ್ದು, ಮ್ಯಾಟ್ ಸ್ಲೇಟ್ ಬ್ಲಾಕ್, ನಿಯಾನ್ ನೈಟ್ ಸ್ಟಾರ್ ಮತ್ತು ಬ್ಲೇಜಿಂಗ್ ಸ್ಪೋರ್ಟ್ಸ್ ರೆಡ್ ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಬೈಕಿನಲ್ಲಿ ಈ ಬಾರಿ ಸ್ಪೋರ್ಟಿ ವಿನ್ಯಾಸವನ್ನು ನೀಡಲಾಗಿದ್ದು, ಜೊತೆಗೆ ತೀಕ್ಷ್ಣ ನೋಟ ಹೊಂದಿರುವ ಎಲ್ ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್, ವಿಭಜಿತ ಆಸನಗಳು, ಹೊಸ ಡಿಜಿಟಲ್ ಇನ್ ಸ್ಟ್ರಮೆಂಟ್ ಕ್ಲಸ್ಟರ್, 25ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕನೆಕ್ಟ್ 2.0 ಜೋಡಣೆ ಮಾಡಲಾಗಿದೆ.

ಇನ್ನು ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್, ಮುಂಭಾಗದ ಚಕ್ರದಲ್ಲಿ 276 ಎಂಎಂ ಪೆಟಲ್ ಡಿಸ್ಕ್, ಹಿಂಬದಿಯಲ್ಲಿ 220 ಎಂಎಂ ಪೆಟಲ್ ಡಿಸ್ಕ್ ಅಥವಾ 130 ಎಂಎಂ ಡ್ರಮ್ ಬ್ರೇಕ್‌ ಆಯ್ಕೆಯನ್ನು ನೀಡಿದ್ದು, ಇದು 160 ಸಿಸಿ ವಿಭಾಗದಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾದ ಬಜಾಜ್ ಪಲ್ಸರ್ ಎನ್160, ಟಿವಿಎಸ್ ಅಪಾಚೆ ಆರ್ ಟಿಆರ್ 160 4ವಿ ಮತ್ತು ಬಜಾಜ್ ಪಲ್ಸರ್ ಎನ್ಎಸ್160 ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.