ಮೈಸೂರು: ಮೈಸೂರಿನ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಾಲ್ವರು ಕಿಡಿಗೇಡಿಗಳ ವಿರುದ್ಧ ದೇವರಾಜ ಠಾಣಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ನಗರ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಸಿಟಿ ಬಸ್ ನಿಲ್ದಾಣದ ಹತ್ತಿರ ವ್ಯಕ್ತಿಯೊಬ್ಬ ತೆಂಗಿನ ಗರಿಯನ್ನು ಹಾವಿನ ಹಾಗೆ ಕಾಣುವ ರೀತಿಯಲ್ಲಿ ಮಾಡಿಕೊಂಡು ಫುಟ್‌ಪಾತ್‌ನಲ್ಲಿ ಓಡಾಡುವ ಜನರಿಗೆ ಭಯ ಉಂಟು ಮಾಡಿ, ಸಾರ್ವಜನಿಕರ ಓಡಾಟಕ್ಕೆ ಅಡಚಣೆಯನ್ನು ಉಂಟು ಮಾಡುತ್ತಿದ್ದ ವೀಡಿಯೋ ಮತ್ತು ಮತ್ತೊಬ್ಬ ಅದೇ ರಸ್ತೆಯಲ್ಲಿ ನಕಲಿ ಬಾಂಬ್ ಪಟಾಕಿಯನ್ನು ಫುಟ್ ಪಾತ್‌ನಲ್ಲಿ ಇಟ್ಟು ಅದನ್ನು ಹಚ್ಚುವ ಹಾಗೆ ಮಾಡಿ ಸಾರ್ವಜನಿಕರಿಗೆ ಭಯವನ್ನುಂಟು ಸಾರ್ವಜನಿಕರ ಓಡಾಟಕ್ಕೆ ಅಡಚಣೆಯನ್ನು ಉಂಟು ಮಾಡುತ್ತಿದ್ದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಹರಿದಾಡಿತ್ತು. ಈ ವೀಡಿಯೋ ವೀಕ್ಷಿಸಿದ ಸಾರ್ವಜನಿಕರು ಕಿಡಿಗೇಡಿಗಳ ಈ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಸಂಬಂಧ 04 ಆರೋಪಿಗಳ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.