ನಿಂಬೆ ಎಲ್ಲರಿಗೂ ಪರಿಚಿತವಾದ ಒಂದು ಸಾಮಾನ್ಯ ಚಮತ್ಕಾರೀ ಗುಣಹೊಂದಿರುವ ಫಲವಾಗಿದೆ. ವೈದ್ಯ ಪದ್ಧತಿಯಲ್ಲಿ ಇದೊಂದು ಅಮೂಲ್ಯ ರತ್ನ. ಇದರ ರಸ ಸೇವನೆಯಿಂದ ಸಂಪೂರ್ಣ ಶರೀರದಲ್ಲಿ ಒಂದು ಹೊಸತನ ನವೀನತೆ ಬರುತ್ತದೆ.ನಿಂಬೆಯು ಹುಳಿಯ ರಸದ ಹಣ್ಣಿನಾಕಾರದ ಫಲವಾಗಿದೆ.
ಇದನ್ನು ಆಹಾರ ಪದಾರ್ಥಗಳಲ್ಲಿಯೂ ಮತ್ತು ಚಿಕಿತ್ಸಾಲಯಗಳಲ್ಲಿಯೂ ಉಪಯೋಗಿಸುತ್ತಾರೆ. ಇದನ್ನು ಯಾವಾಗ ಬೇಕಾದರೂ ಬೇಕಾದಷ್ಟು ಉಪಯೋಗಿಸಿದರೂ ಇದರಿಂದ ಹಾನಿ ಬಹಳ ಕಡಿಮೆ. ನಿಂಬೆಹಣ್ಣಿನ ಅನೇಕ ಪ್ರಕಾರಗಳಿವೆ. ಸುಮಾರು 60 ಪ್ರಕಾರಗಳಿವೆ ಎಂದು ಹೇಳಲಾಗುತ್ತದೆ. ಇದರ ವಿಶೇಷ ಎಂದರೆ ಆಮ್ಲತೆ (ಎಸಿಡ್) ಇದಾಗ್ಯೂರಕ್ತವನ್ನು ಕ್ಷಾರೀಯವಾಗಿಸುತ್ತದೆ. ಆಹಾರದ ಪೊಟ್ಯಾಶಿಯಂ, ಸೋಡಿಯಂ ಮತ್ತಿತರ ಯೋಗಗಳೊಂದಿಗೆ ಬೆರೆತು ಇದು ಕ್ರಿಯಾಶೀಲವಾಗುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಅತ್ಯುತ್ತಮ.
ನಿಂಬೆಯ ರಸ ಮತ್ತು ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಚರ್ಮ ಕಾಂತಿಯುತವಾಗಿ ಸೌಂದರ್ಯ ವೃದ್ಧಿಸುತ್ತದೆ. ಹಲ್ಲಿನಿಂದ ರಕ್ತ ಬರುತ್ತಿದ್ದರೆ, ಒಂದು ಗ್ಲಾಸ್ ನೀರಿನಲ್ಲಿ ನಿಂಬೆಯ ರಸ ಬೆರೆಸಿ ದಿನಕ್ಕೆ ಮೂರು ಸಲ ಬಾಯಿ ಮುಕ್ಕಳಿಸಿದರೆ ಗುಣವಾಗುತ್ತದೆ. ನಿಂಬೆಯು ʼಸಿʼ ಜೀವಸತ್ವ ಒಂದು ಖಜಾನೆ ಇದ್ದಂತೆ, ಬಿ, ಜೀವಸತ್ವವೂ ಇದರಲ್ಲಿ ಸಂಕ್ಷಿಪ್ತ ಪ್ರಮಾಣದಲ್ಲಿ ಇರುತ್ತದೆ. ಸ್ಕರ್ವಿ ರೋಗಕ್ಕೆ ಇದೊಂದು ರಾಮಬಾಣ ಔಷಧಿ ಎಂದು ಹೇಳಲಾಗುತ್ತದೆ. ನಿಂಬೆ ರಸ ಸೇವಿಸುವುದರಿಂದ ಉದರ ಕ್ರಿಮಿ ನಾಶವಾಗುತ್ತದೆ. ಬಾಯಾರಿಕೆ ನೀಗುತ್ತದೆ. ಮಲ-ಮೂತ್ರ ಸ್ವಚ್ಛವಾಗುತ್ತದೆ.
ಔಷಧೀಯ ಗುಣಗಳು :-
* ಮಲಬದ್ಧತೆ – ಊಟಕ್ಕಿಂತ ಮುಂಚೆ ಮತ್ತು ನಂತರ ನೀರಿನಲ್ಲಿ ನಿಂಬೆರಸ ಬೆರೆಸಿ, ಕುಡಿಯಲು ಮಲಬದ್ಧತೆ ಸುಗಮವಾಗುತ್ತದೆ.
* ಸಾಂಕ್ರಾಮಿಕ ಕೀಟಾಣು – ಇದರ ರಸದಿಂದ ಭೇದಿ, ಟೈಫಾಯಿಡ್, ಪ್ಲೇಗ್ ಇತ್ಯಾದಿ ರೋಗಗಳು ನಾಶ ಹೊಂದುತ್ತದೆ.
* ಶೀತ ನೆಗಡಿ – ಕುದಿಸಿದ ನೀರಲ್ಲಿ ನಿಂಬೆಯರಸ ಮತ್ತು ಜೇನು ಬೆರೆಸಿ ರಾತ್ರಿ ಮಲಗುವಾಗ ಸೇವಿಸಿದರೆ ಶೀತ, ನೆಗಡಿಯ ತೊಂದರೆ ನೀಗುತ್ತದೆ.
* ಮಲೇರಿಯಾ – ನಿಂಬೆಯ ರಸದಲ್ಲಿ ಕರಿಮೆಣಸಿನ ಚೂರ್ಣ, ಸ್ವಲ್ಪ ಉಪ್ಪು ಬೆರೆಸಿ ಸ್ವಲ್ಪ ಬಿಸಿ ಮಾಡಿ ಸೇವಿಸಬೇಕು.
* ವಾಂತಿ ಭೇದಿ – ನಿಂಬೆ ರಸದಲ್ಲಿ ಸಕ್ಕರೆ ಬೆರೆಸಿ ಮೇಲಿಂದಮೇಲೆ ಕುಡಿಯಲು ನಿಯಂತ್ರಣಕ್ಕೆ ಬರುತ್ತದೆ.
* ಕೂದಲು ಬೆಳೆಯಲು – ನಿಂಬೆಯ ರಸ ತಲೆಗೆ ಹಚ್ಚುತ್ತಿದ್ದರೆ, ತಲೆಯ ಹೊಟ್ಟು ದೂರವಾಗಿ ಕೂದಲು ಬೆಳೆಯುತ್ತದೆ.
* ಯಕೃತ ದೋಷ – ಯಕೃತ ದೋಷಕ್ಕೆ ಬಿಸಿ ನೀರಿನಲ್ಲಿ ನಿಂಬೆಯ ರಸ ಬೆರಸಿ ಕುಡಿಯಬೇಕು.
* ರಕ್ತಮೂಲ ವ್ಯಾಧಿ – ನಿಂಬೆ ಹಣ್ಣು ಎರಡು ಹೋಳಾಗಿ ಮಾಡಿ ೬ ಗ್ರಾಂ ತಿನ್ನುವ ಕಾಚು ಪುಡಿ ಮಾಡಿ ಹೋಳುಗಳಿವೆ ಸವರಿ ರಾತ್ರಿ ಮೇಲಿಡಬೇಕು, ಮುಂಜಾನೆ ಎದ್ದು ಎರಡೂ ಗೋಳು ಚೀಪಿ ಹೀರಬೇಕು. ಹೀಗೆ ೫-೬ ದಿನಗಳವರೆಗೆ ಮಾಡಿದರೆ ರಕ್ತಮೂಲ ವ್ಯಾಧಿಯು ನಿವಾರಣೆಯಾಗುತ್ತದೆ.
* ವಾಂತಿ – ಅರ್ಧ ನಿಂಬೆಯ ರಸ ೩೦ ಮಿ.ಲಿ. ನೀರು ಒಂದು ಗ್ರಾಂ ಜೀರಿಗೆ, ಒಂದು ಗ್ರಾಂ ಏಲಕ್ಕಿ, ಪುಡಿಮಾಡಿ ೨ ತಾಸಿಗೊಮ್ಮೆ ಕುಡಿದರೆ ವಾಂತಿ ಕಡಿಮೆಯಾಗುತ್ತದೆ.
* ರಕ್ತ-ನೀವು ಭೇದಿ – ಸ್ವಚ್ಛ ತಾಜಾ ನೀರಿನಲ್ಲಿ ನಿಂಬೆಯ ರಸ ಹಿಂಡಿ ದಿನಕ್ಕೆ ಮೂರು ಸಲ ಕಡಿಮೆಯಾಗುತ್ತದೆ.
ಹಾನಿಕಾರಕ ಅಂಶ :-
ನಿಂಬೆಯ ಅತಿಯಾದ ಸೇವನೆಯಿಂದ ತಲೆ ಹಾಗೂ ಪೌರುಷಕ್ಕೆ ಅಹಿತಕರವಾಗಿದೆ. ಶೀತ ಪ್ರಕೃತಿಯವರಿಗೆ ಹಾನಿಯ ಸಂಭವವಿದೆ, ಕಾರಣ ಈ ಅಂಶವನ್ನು ಗಮನಿಸಬೇಕಾಹಿ ವಿನಂತಿ.