ಮೈಸೂರು : ಬೈಕ್ನಲ್ಲಿ ತೆರಳುತ್ತಿದ್ದ, ದಂಪತಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕಿನ ಚುಂಚನಹಳ್ಳಿ ಬಳಿ ನಡೆದಿದೆ. ಚಿರತೆ ದಾಳಿಯಿಂದ ಬೈಕ್ನಲ್ಲಿದ್ದ ಮಗು ಹಾಗೂ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡವರನ್ನು ಚುಂಚನಹಳ್ಳಿ ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಹಾಗೂ ಮಗು ಗಂಭೀರ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯರು ದಾಳಿ ನಡೆಸಿದ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.















