ಮನೆ ಸುದ್ದಿ ಜಾಲ ಮೈಸೂರು ಮೃಗಾಲಯದಲ್ಲಿ ತಿ.ನರಸೀಪುರದಲ್ಲಿ ಸೆರೆ ಸಿಕ್ಕ ಚಿರತೆ: ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ

ಮೈಸೂರು ಮೃಗಾಲಯದಲ್ಲಿ ತಿ.ನರಸೀಪುರದಲ್ಲಿ ಸೆರೆ ಸಿಕ್ಕ ಚಿರತೆ: ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ

0

ಮೈಸೂರು(Mysuru): ತಿ.ನರಸೀಪುರ ತಾಲ್ಲೂಕಿನ ಸೋಸಲೆ ಹೋಬಳಿಯ ಹೊರಳಹಳ್ಳಿ ಗ್ರಾಮ ಮತ್ತು ನೆರಗ್ಯಾತನಹಳ್ಳಿ ನಡುವಿನ ತೋಟದ ಸಮೀಪ ಅರಣ್ಯ ಇಲಾಖೆಯಿಂದ ಇಟ್ಟಿದ್ದ ಬೋನಿಗೆ (ತುಮಕೂರು ಕೇಜ್‌) ಬಿದ್ದದ್ದ ಚಿರತೆಯನ್ನು ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಇಂದು ಕರೆತರಲಾಯಿತು.

ಬುಧವಾರ ರಾತ್ರಿ ಚಿರತೆ ಸೆರೆ ಸಿಕ್ಕಿದ್ದು, ಚಿರತೆಯನ್ನು ಕೊಲ್ಲುವಂತೆ ಒತ್ತಾಯಿಸಿದ ಗ್ರಾಮಸ್ಥರ ಮನವೊಲಿಸಿ  ಕಾರ್ಯಪಡೆ ಅಧಿಕಾರಿಗಳು ಮತ್ತೊಂದು ಬೋನಿಗೆ ಚಿರತೆಯನ್ನು ಸ್ಥಳಾಂತರಿಸಿ ವಾಹನದಲ್ಲಿ ಮೈಸೂರಿಗೆ  ತರಲಾಗಿದೆ.

ಸೆರೆಯಾಗಿರುವ ಚಿರತೆಯು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ.

ಮೃಗಾಲಯಕ್ಕೆ ತಂದ ಚಿರತೆಗೆ ಅರಣ್ಯ ಇಲಾಖೆ ಸಾಕಷ್ಟು ಭದ್ರತೆಯಯನ್ನು ಒದಗಿಸಿದೆ. ಅದನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

ಡಿಸಿಎಫ್ ಬಸವರಾಜು, ಮಹೇಶ್ ಕುಮಾರ್, ಎಸಿಎಫ್ ಲಕ್ಷೀಕಾಂತ್, ಡಿವೈಎಸ್ಪಿ ಗೋವಿಂದರಾಜು, ಸಿಪಿಐ ಆನಂದ್, ಲೋಲಾಕ್ಷಿ, ಪಿಎಸ್ಐಗಳಾದ ತಿರುಮಲ್ಲೇಶ್, ಪಚ್ಚೇಗೌಡ, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಇದ್ದರು.