ಮನೆ ಸುದ್ದಿ ಜಾಲ ಸೋಲಾರ್ ತಂತಿಗೆ ಸಿಲುಕಿದ ಚಿರತೆ: ರಕ್ಷಣೆ

ಸೋಲಾರ್ ತಂತಿಗೆ ಸಿಲುಕಿದ ಚಿರತೆ: ರಕ್ಷಣೆ

0

ಮೈಸೂರು: ತೋಟದಲ್ಲಿ ರಕ್ಷಣೆಗೆ ಅಳವಡಿಸಿದ ಸೋಲಾರ್ ತಂತಿಗೆ ಚಿರತೆಯ ಬಲಗಾಲು ಸಿಲುಕಿದ ಪರಿಣಾಮ ಚಿರತೆ ಪರದಾಡಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮುಳ್ಳೂರು ಗ್ರಾಮದ ಬಾಳೆ ತೋಟದಲ್ಲಿ ಘಟನೆ.

ಸರಗೂರು ತಾಲೂಕಿನ ಮುಳ್ಳೂರು ಮತ್ತು ನಂಜನಗೂಡು ತಾಲ್ಲೂಕಿನ ಜಾಲಹಳ್ಳಿ ಗ್ರಾಮದ ಸಮೀಪದ ಬಾಳೆತೋಟದಲ್ಲಿ ಘಟನೆ ನಡೆದಿದ್ದು, ಸೋಲಾರ್ ತಂತಿಯಿಂದ ಬಿಡಿಸಿಕೊಳ್ಳಲು 4 ವರ್ಷದ ಗಂಡು ಚಿರತೆ ಚೀರಾಟ ನಡೆಸಿದೆ.

ದನ್ನು ಗಮನಿಸಿದ ಮುಳ್ಳೂರು ಗ್ರಾಮಸ್ಥರು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ನುಗು ಅರಣ್ಯ ಇಲಾಖೆಯ ಆರ್ ಎಫ್ ಒ ಹಾಗೂ ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ಗಮನಕ್ಕೆ ತಂದಿದ್ದಾರೆ.  ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಚಿರತೆಗೆ ಅರವಳಿಕೆ ಮದ್ದನ್ನು ನೀಡಿ ಚಿರತೆಯನ್ನು ರಕ್ಷಿಸಿದ್ದು, ಚಿರತೆಗೆ ಚಿಕಿತ್ಸೆ ನೀಡಿದ  ಬಳಿಕ ಅರಣ್ಯದೊಳಗೆ ಬಿಡುಗಡೆ ಮಾಡಿದ್ದಾರೆ.

ಹಿಂದಿನ ಲೇಖನಕೊರೊನಾ: ದೇಶದಲ್ಲಿ 3,06 ಲಕ್ಷ ಹೊಸ ಪ್ರಕರಣ ದಾಖಲು
ಮುಂದಿನ ಲೇಖನಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಸಿಎಂ ಸೇರಿದಂತೆ ಹಲವು ಗಣ್ಯರಿಂದ ಶುಭಾಶಯ