ಮನೆ ರಾಜಕೀಯ ಕಾಂಗ್ರೆಸ್ ತನ್ನ ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಗೆ ನೀಡಲಿ: ಹೆಚ್.ಡಿ.ಕುಮಾರಸ್ವಾಮಿ

ಕಾಂಗ್ರೆಸ್ ತನ್ನ ಎರಡನೇ ಪ್ರಾಶಸ್ತ್ಯದ ಮತವನ್ನು ಜೆಡಿಎಸ್ ಗೆ ನೀಡಲಿ: ಹೆಚ್.ಡಿ.ಕುಮಾರಸ್ವಾಮಿ

0

ಮೈಸೂರು(Mysuru): ಕಾಂಗ್ರೆಸ್ ಗಿಂತ ಜೆಡಿಎಸ್ ಅಭ್ಯರ್ಥಿಗೆ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೊಸ ಆಫರ್ ಮುಂದಿಟ್ಟಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿವೃತ್ತಿಗೊಳಿಸುವ ಪ್ರಶ್ನೆಯೇ ಇಲ್ಲ. ನಮ್ಮ ಬಳಿ 32 ಮತಗಳಿವೆ, ಕಾಂಗ್ರೆಸ್ ಬಳಿ ನಮಗಿಂತ ಕಡಿಮೆ ಮತಗಳಿವೆ. ಬೇಕಿದ್ದರೇ ನಮ್ಮ ಪಕ್ಷದ 2ನೇ ಪ್ರಾಶಸ್ತ್ಯದ ಮತಗಳನ್ನು ಕಾಂಗ್ರೆಸ್ ಅಭ್ಯರ್ಥಿಗೆ ನೀಡುತ್ತೇವೆ ಎಂದಿದ್ದಾರೆ.

ಕಾಂಗ್ರಸ್ ನವರಿಗೆ ನಿಜಕ್ಕೂ ಬಿಜೆಪಿ ಸೋಲಬೇಕು ಅನ್ನುವುದಿದ್ದರೆ ಚುನಾವಣಾ ಪೂರ್ವದಲ್ಲೇ ಚರ್ಚೆ  ಮಾಡುತ್ತಿದ್ದರು.  ನಮ್ಮ ಜೊತೆ ಚರ್ಚೆ ಮಾಡದಿದ್ರೂ ನಮ್ಮಪಕ್ಷದ ಕೆಲವರ ಜೊತೆ ಚರ್ಚೆ ಮಾಡಬಹುದಿತ್ತು. ಆದರೆ ಯಾವ ಕಾಂಗ್ರೆಸ್ ನಾಯಕರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ನಮ್ಮಲ್ಲಿ 32 ಮತಗಳಿಗೆ ಹಾಗಾಗಿ ಅಭ್ಯರ್ಥಿ ಹಾಕಿದ್ದೇವೆ. ಹೆಚ್.ಡಿ.ದೇವೇಗೌಡರು ಸೋನಿಯಾಗಾಂಧಿ ಜೊತೆ ಮಾತನಾಡಿದ್ದಾರೆ. ಕುಪೇಂದ್ರ ರೆಡ್ಡಿ ಹಿಂದೆ ಸೋನಿಯಾ ಗಾಂಧಿಯವರ ಜೊತೆ ಸಹಕಾರ ಕೊಟ್ಟು ಕೆಲಸ ಮಾಡಿದ್ದಾರೆ. ಹಾಗಾಗಿ ದೇವೇಗೌಡ್ರು ಮನವಿ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ರಾಜ್ಯಸಭಾ ಚುನಾವಣೆಗೆ 2ನೇ ಅಭ್ಯರ್ಥಿ ನಿಲ್ಲಿಸದಿದ್ದರೆ ಬಿಜೆಪಿಯಿಂದ 3ನೇ ಅಭ್ಯರ್ಥಿ  ಹಾಕುತ್ತಿರಲಿಲ್ಲ. ದೇವೇಗೌಡರು ಹಿರಿಯರು, ನಿಮ್ಮಂತವರು ರಾಜ್ಯಸಭೆಗೆ ಬೇಕು ಅಂತಾ ಬಿಜೆಪಿ ಅವರೇ ಒತ್ತಾಯ ಮಾಡಿದ್ರು. ಬಿಜೆಪಿ ಅವರು ಅಭ್ಯರ್ಥಿ ಹಾಕಿಲ್ಲ ಅಂತಾ ಕಾಂಗ್ರೆಸ್  ನವರು ಅಭ್ಯರ್ಥಿ ಹಾಕಿಲ್ಲ. ಸುರ್ಜೆವಾಲ ಅವರು ಎರಡನೇ ಪ್ರಾಶಸ್ತ್ಯದ ಮತ ಕೊಡಿ ಅಂತಾ ಪೊನ್ ಕರೆ ಮಾಡಿ ಕೇಳಿದ್ದಾರೆ ಎಂದು ವಿವರಿಸಿದರು.

ದೇವೇಗೌಡರ ರಾಜ್ಯಸಭೆ ಪ್ರವೇಶಕ್ಕೆ  ಕಾಂಗ್ರೆಸ್ ಪಾತ್ರ ಇಲ್ಲ. ಸಿದ್ದರಾಮಯ್ಯ ಅವರಿಗೆ ಅಲ್ಪಸಂಖ್ಯಾತರ ಬಗ್ಗೆ ಅಷ್ಟೊಂದು ಗೌರವ ಇದ್ದಿದ್ದರೇ‌ ಅಲ್ಪ ಸಂಖ್ಯಾತರನ್ನೇ ಮೊದಲ ಅಭ್ಯರ್ಥಿ ಮಾಡಬೇಕಿತ್ತು. ಮೂರನೇ ಬಾರಿಗೆ ಹಾಕಿರೋ ಮೊದಲನೇ ಅಭ್ಯರ್ಥಿಯ ಕೊಡುಗೆ ಏನು…? ಓಟ್ ಬರೋಲ್ಲ ಅಂತಾ ಮನ್ಸೂರ್ ಅವರನ್ನ ಎರಡನೇ ಅಭ್ಯರ್ಥಿ ಮಾಡಿದ್ದೀರಿ. ಫಾರುಕ್ ಅವ್ರನ್ನ ನಾವು ನಿಲ್ಲಿಸಿದ್ದಾಗ. ನಮ್ಮವರನ್ನ ಏಳು ಮಂದಿಯನ್ನ ಹೈಜಾಕ್ ಮಾಡಿ 7 ಮತ ಹಾಕಿಸಿಕೊಂಡಿದ್ರಿ. ಇದು ಆತ್ಮಸಾಕ್ಷಿಯ ಮತಗಳೇ ಎಂದು ಹೆಚ್.ಡಿಕೆ ಪ್ರಶ್ನಿಸಿದರು.