Saval TV on YouTube
ಮೈಸೂರು(Mysuru): ತನ್ವೀರ್ ಸೇಠ್ ಮೊದಲು ಎನ್. ಆರ್ ಕ್ಷೇತ್ರದ ಜನರ ಭವಿಷ್ಯ ನಿರ್ಮಿಸಲು ಮುಂದಾಗಲಿ. ಟಿಪ್ಪು ಪ್ರತಿಮೆ ನಿರ್ಮಾಣದಿಂದ ಜನರ ಭವಿಷ್ಯ ನಿರ್ಮಿಸಲು ಆಗಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ತಿರುಗೇಟು ನೀಡಿದ್ದಾರೆ.
100 ಅಡಿ ಎತ್ತರದಲ್ಲಿ ಟಿಪ್ಪು ಸುಲ್ತಾನ್ ಪ್ರತಿಮೆ ನಿರ್ಮಾಣ ಖಚಿತ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಶಾಸಕ ಎಸ್.ಎ ರಾಮದಾಸ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ರಾಜಕೀಯ ಲಾಭಕ್ಕಾಗಿ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ. ಟಿಪ್ಪು ಪ್ರತಿಮೆ ನಿರ್ಮಾಣದಿಂದ ಯಾವುದೇ ರಾಜಕೀಯ ಲಾಭವಾಗುವುದಿಲ್ಲ . ಇಸ್ಲಾಂ ಧರ್ಮದಲ್ಲಿ ಮೂರ್ತಿಪೂಜೆಗೆ ಅವಕಾಶವಿಲ್ಲ ಎಂದರು.