ಮನೆ ರಾಜ್ಯ ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ: ಬಿ.ರಮಾನಾಥ ರೈ

ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ: ಬಿ.ರಮಾನಾಥ ರೈ

0

ಮಂಗಳೂರು (ದಕ್ಷಿಣ ಕನ್ನಡ): ಚುನಾವಣಾ ಬಾಂಡ್ ಅಕ್ರಮಗಳ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಐ.ಟಿ, ಇ.ಡಿ.ಗಳನ್ನು ದುರ್ಬಳಕೆ ಮಾಡಲಾಗಿದೆ. ಪಾಕಿಸ್ತಾನ ಮೂಲದ ಕಂಪೆನಿಗಳಿಂದಲೂ ಬಿಜೆಪಿ ಚುನಾವಣಾ ಬಾಂಡ್ ಸಂಗ್ರಹಿಸಿದೆ. ಇದುವರೆಗಿನ ಮಾಹಿತಿ ಪ್ರಕಾರ ಚುನಾವಣಾ ಬಾಂಡ್ ಗಳಲ್ಲಿ ಶೇ.50 ಬಿಜೆಪಿ ಪಡೆದಿದೆ. ಕಾಂಗ್ರೆಸ್ ಪಾಲು ಕೇವಲ 11 ಶೇ. ಮಾತ್ರ. ಬಿಜೆಪಿ ನೇತ್ರತ್ವದ ಕೇಂದ್ರ ಸರಕಾರದ ನೋಟ್ ಬ್ಯಾನ್ ಪ್ರಕರಣ ಇತರ ದೇಶದಲ್ಲಿ ನಡೆದಿದ್ದರೆ ಯಾವತ್ತೋ ಬಿಜೆಪಿ ಸರಕಾರ ಪತನವಾಗುತ್ತಿತ್ತು. ಬ್ಯಾಂಕ್ ವಿಲೀನ ಪ್ರಕ್ರಿಯೆ ಕೂಡಾ ಒಂದು ಹಗರಣ ಎಂದು ಆರೋಪಿಸಿದರು.

ಹಿಂದಿನ ಲೇಖನಥ್ರಿಲ್ಲರ್ ಕಥಾಹಂದರ ಹೊಂದಿರುವ “ರಾಕ್ಷಸ ತಂತ್ರ’ ಸಿನಿಮಾ
ಮುಂದಿನ ಲೇಖನಮಹಿಳೆಯರ ಸ್ವಾವಲಂಬನೆಗೆ ನಾರಿ ನ್ಯಾಯ: ಕಾಂಗ್ರೆಸ್ ಐದು ಗ್ಯಾರಂಟಿ ವಿವರಿಸಿದ ಡಾ.ಪುಷ್ಪಾ ಅಮರನಾಥ್