ಮನೆ ದಾಂಪತ್ಯ ಸುಧಾರಣೆ ಸಂಬಂಧದಲ್ಲಿ ಭಾವುಕತೆ ಇರಲಿ, ಭಾವನೆಗಳ ನಿಂದನೆ ಇದ್ದರೆ ಆ ಸಂಬಂಧಗಳಿಂದ ಹೊರಬನ್ನಿ

ಸಂಬಂಧದಲ್ಲಿ ಭಾವುಕತೆ ಇರಲಿ, ಭಾವನೆಗಳ ನಿಂದನೆ ಇದ್ದರೆ ಆ ಸಂಬಂಧಗಳಿಂದ ಹೊರಬನ್ನಿ

0

ಯಾವುದೇ ಸಂಬಂಧವಿರಲಿ ಅದಕ್ಕೆ ಅದರದ್ದೇ ಆದ ಗೌರವವಿದೆ. ಸಂಬಂಧದಲ್ಲಿ ಭಾವುಕತೆ ಇದ್ದಾಗ, ಒಬ್ಬರ ಕಷ್ಟವನ್ನು ಅರ್ಥಮಾಡಿಕೊಂಡಾಗ ಜೀವನ ನಡೆಸುವುದು ಸುಲಭ. ಆದರೆ ಭಾವನೆಗಳ ನಿಂದನೆಯಾದಲ್ಲಿ ಪದೇ ಪದೇ ನಿಮ್ಮ ಭಾವನೆಗಳಿಗೆ ಘಾಸಿ ಉಂಟಾಗುತ್ತಿದ್ದರೆ ನೀವು ಆ ಸಂಬಂಧದಿಂದ ಹೊರ ಬರುವುದೇ ಉತ್ತಮ.

Join Our Whatsapp Group

ಸಂಬಂಧದಲ್ಲಿ ಗ್ಯಾಸ್ ​ಲೈಟಿಂಗ್ ಎನ್ನುವುದು ಮಾನಸಿಕ ನಿಂದನೆಯ ಒಂದು ರೂಪವನ್ನು ಸೂಚಿಸುತ್ತದೆ. ಗ್ಯಾಸ್‌ ಲೈಟಿಂಗ್” ಎಂಬ ಪದವು “ಗ್ಯಾಸ್ ಲೈಟ್” ಎಂಬ ನಾಟಕ ಮತ್ತು ಚಲನಚಿತ್ರದಿಂದ ಬಂದಿದೆ, ಅಲ್ಲಿ ಪತಿ ತನ್ನ ಹೆಂಡತಿಯನ್ನು ಮೋಸಗೊಳಿಸಲು ವಿಭಿನ್ನ ವಿಧಾನಗಳನ್ನು ಬಳಸುತ್ತಾನೆ.

ಈ ಹಿಂದೆ ಹೇಳಿದ್ದನ್ನು ಹೇಳಿಯೇ ಇಲ್ಲ ಎಂದು ನಿರೂಪಿಸುವುದು ತಪ್ಪು ಮಾಡಿದವರು ಇನ್ನೊಬ್ಬ ವ್ಯಕ್ತಿ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ, ಆ ರೀತಿ ನಾನು ಹೇಳಿಯೇ ಇಲ್ಲ, ಅಥವಾ ನೀನು ತಿಳಿದುಕೊಂಡಿರುವುದೇ ತಪ್ಪು ಎಂದು ಬಿಂಬಿಸಲು ಮುಂದಾಗುತ್ತಾರೆ.

ಮತ್ತೊಬ್ಬರನ್ನು ದೂಷಿಸುವುದು ನಿನ್ನಿಂದಾಗಿಯೇ ನಮ್ಮ ಸಂಬಂಧ ಹಾಳಾಗಿದೆ, ನೀನು ನಡೆಸುಕೊಂಡ ರೀತಿಯೇ ಸರಿಯಾಗಿಲ್ಲ ಎಂದು ಹೇಳುತ್ತಾ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಸು ಮಾಡುವುದೇ ಇಲ್ಲ.

ಭಾವನೆಗಳಿಗೆ ಪ್ರಾಮುಖ್ಯತೆ ಕೊಡದೇ ಇರುವುದು ಭಾವನೆಗಳಿಗೆ ಪ್ರಾಮುಖ್ಯತೆ ಕೊಡದೇ ಇರುವುದು, ಕಾಳಜಿ ತೋರದೆ ಇರುವುದು, ಎಲ್ಲಾ ಮಾತನ್ನು ಇಷ್ಟೆ ಎಂದು ಭಾವಿಸುವುದು, ಬೇರೆಯವರ ಭಾವನೆಗಳು ನಿಷ್ಪ್ರಯೋಜಕ ಎಂದು ಭಾವಿಸುತ್ತಿದ್ದರೆ ನೀವು ಅವರೊಂದಿಗೆ ಇದ್ದು ಯಾವುದೇ ಪ್ರಯೋಜನವಿಲ್ಲ.

ಅಸಭ್ಯ ಭಾಷೆ ಬಳಕೆ ಪದೇ ಪದೇ ನಿಮ್ಮ ಭಾವನೆಗಳಿಗೆ ನೋವುಂಟು ಮಾಡುವುದು, ಅಸಭ್ಯವಾದ ಭಾಷೆಯನ್ನು ಬಳಸುವುದು, ಯಾವುದೇ ಕಲ್ಪನೆಯ ಅಪಹಾಸ್ಯ ಮಾಡುವುದರಿಂದ ಆತ್ಮವಿಶ್ವಾಸ ಕುಸಿಯುತ್ತದೆ.

ಸತ್ಯವನ್ನು ತಿರುಚುವುದು ನಿಮ್ಮ ಭಾವನೆಗಳಿಗೆ ಬೆಲೆ ಕೊಡದೇ ಇರುವವರು ಸತ್ಯವನ್ನು ತಿರುಚುವ ಕೆಲಸ ಮಾಡುತ್ತಾರೆ, ಗೊಂದಲವನ್ನು ಸೃಷ್ಟಿಸುತ್ತಾರೆ, ನಿಮ್ಮನ್ನು ಒಂಟಿಯಾಗಿರಲು ಬಿಡುವುದು, ತಮ್ಮ ಸಂಬಂಧವನ್ನು ಮತ್ತಷ್ಟು ದುರ್ಬಲವಾಗಲು ಬಿಟ್ಟುಬಿಡುತ್ತಾರೆ. ಪದೇ ಪದೇ ಅನುಚಿತವಾಗಿ ವರ್ತಿಸಿ ಮತ್ತೆ ನಿಮಗೆ ಹತ್ತಿರವಾಗಲು ಬಯಸಿದವರಿಂದ ದೂರ ಇರುವುದೇ ಒಳಿತು.