ಮೈಸೂರು: ನಾವು ಮಹಿಷ ದಸರಾ ಆಚರಣೆ ಮಾಡೇ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್, ಮಹಿಷ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸುವ ಎರಡು ಕಡೆಯವರ ಮನವಿಯನ್ನು ತಿರಸ್ಕರಿಸಿದ್ದಾರೆ.
ಪೊಲೀಸರು ನಮ್ಮನ್ನು ಕರೆದು ಮಾತನಾಡಬೇಕಿತ್ತು. ಇದೀಗ ಏಕಾಏಕಿ ಅನುಮತಿ ನಿರಾಕರಿಸಿದ್ದೇವೆ ಎಂದು ಹೇಳಿದ್ದಾರೆ. ನಮಗೆ 10 ಜನರಿಗಾದರು ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ ಕೊಡಬೇಕು. ನಾವು ಹಿಂದೆ ಮಹಿಷಾ ದಸರಾ ಮಾಡಿದಾಗ ಎಂದಾದರು ಗಲಾಟೆಯಾಗಿತ್ತಾ? ಲಕ್ಷಾಂತರ ಜನ ಸೇರಿಸಿ ರಾಜಕೀಯ ಸಮಾವೇಶ ಮಾಡಿದಾಗ ಅದಕ್ಕೆ ಪೊಲೀಸ್ ಬಂದೋ ಬಸ್ತ್ ಕೊಡುತ್ತೀರಿ. ಈಗಲೂ ಅದೇ ರೀತಿ ನಮಗೂ ರಕ್ಷಣೆ ಕೊಡಿ. ಸರ್ಕಾರ ಮಹಿಷಾ ದಸರಾ ಮಾಡಬಾರದು ಎಂದು ಹೇಳಿಲ್ಲ ಎಂದು ಹೇಳಿದರು.
ಸಂಸದ ಪ್ರತಾಪ್ ಸಿಂಹ ಸಂಘರ್ಷ ಮಾಡುತ್ತೇವೆ ಅಂದಿದ್ದಾರೆ, ಅವರನ್ನು ಬಂಧಿಸಬೇಕು. ನಾನು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ. ನಾನು ಇನ್ನೊಬ್ಬರಿಗೆ ಧಕ್ಕೆ ಮಾಡಿ ಆಚರಣೆ ಮಾಡುತ್ತಿಲ್ಲ. ಅವರ ರೀತಿ ಹೇಳಿಕೆ ಕೊಟ್ಟರೆ ಬಂಧಿಸಲಿ. ಮಹಿಷಾ ದಸರಾ ಆಚರಣೆ ಸಮಿತಿ ಈಗಾಗಲೇ ತೀರ್ಮಾನ ಮಾಡಿದೆ. ಅದರಂತೆ ನಾವು ಮಹಿಷಾ ದಸರಾ ಆಚರಣೆ ಮಾಡುತ್ತೇವೆ. ಅದನ್ನು ಎಲ್ಲಿ ಹೇಗೆ ಎಂಬುದನ್ನು ತಿಳಿಸುತ್ತೇವೆ ಎಂದು ಮಹಿಷಾ ದಸರಾ ಆಚರಣ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿದ್ದಾರೆ.