ಮನೆ ಸುದ್ದಿ ಜಾಲ ಹೆಚ್‌.ವಿಶ್ವನಾಥ್‌ ಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ಪತ್ರ ಚಳವಳಿ

ಹೆಚ್‌.ವಿಶ್ವನಾಥ್‌ ಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ಪತ್ರ ಚಳವಳಿ

0

ಮೈಸೂರು (Mysuru)- ಹಳ್ಳಿಹಕ್ಕಿ ಹೆಚ್.ವಿಶ್ವನಾಥ್‌ (H.Vishwanath) ಅವರಿಗೆ ಮಂತ್ರಿಗಿರಿ ನೀಡುವಂತೆ ಒತ್ತಾಯಿಸಿ ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ಪತ್ರ ಚಳವಳಿ ನಡೆಸಿದೆ.

ನಗರಪಾಲಿಕೆಯ ಮುಂಭಾಗ ಅಂಚೆ ಚಳವಳಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್  ಕುಮಾರ್ ಕಟೀಲ್ ಗೆ ಪತ್ರವನ್ನು ಪೋಸ್ಟ್‌ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಹೆಚ್.ವಿಶ್ವನಾಥ್ ಪ್ರಮುಖ ಕಾರಣ. ಅವರು ಮಂತ್ರಿಯಾಗಿದ್ದಾಗ ರಾಜ್ಯಕ್ಕೆ ಹಲವು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಕಳೆದ 45 ವರ್ಷಗಳ ಸಕ್ರಿಯ ರಾಜಕಾರಣದಲ್ಲಿರುವ ವಿಶ್ವನಾಥ್‌ ಅವರಿಗೆ ಹಿರಿತನದ ಆಧಾರದ ಮೇಲೆ ಈ ಬಾರಿಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಜೊತೆಗೆ ಮೈಸೂರು ಜಿಲ್ಲೆಯ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದಾರೆ.