ಮನೆ ಅಪರಾಧ ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ: ಇಬ್ಬರು ಅಧಿಕಾರಿಗಳು ಸಿಐಡಿ ಪೊಲೀಸರ ವಶಕ್ಕೆ

ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ: ಇಬ್ಬರು ಅಧಿಕಾರಿಗಳು ಸಿಐಡಿ ಪೊಲೀಸರ ವಶಕ್ಕೆ

0

ಮೈಸೂರು: ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೆ.ಆರ್‌.ಪೇಟೆಯ ಕೃಷಿ ಅಧಿಕಾರಿಗಳಾದ ಶಿವಪ್ರಸಾದ್​, ಗುರುದತ್ ಎನ್ನುವರನ್ನು ತನಿಖಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರಿಗೆ ಸಚಿವ ಚಲುವರಾಯಸ್ವಾಮಿ ವಿರುದ್ಧ ಲಂಚ ಅರೋಪ ಪತ್ರವನ್ನು ಬರೆದಿರುವುದು ಇವರೇ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.

ಮುಖ್ಯಮಂತ್ರಿ ಕಚೇರಿ ಮತ್ತು ಸಚಿವರ ಒತ್ತಡದ ಮೇರೆಗೆ ತನಿಖೆ ಮುಂದುವರಿದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತ ಅಧಿಕಾರಿಗಳಿಂದ ಅವರು ತಮ್ಮ ಸ್ವಂತ ಇಚ್ಛೆಯ ಪತ್ರ ಬರೆದಿದ್ದಾರೆಯೇ ಅಥವಾ ಅವರ ಮೇಲಾಧಿಕಾರಿಗಳಿಂದ ಪ್ರಭಾವಿತರಾಗಿದ್ದಾರೆಯೇ ಎಂದು ಕಂಡುಹಿಡಿಯಲು ಸಿಐಡಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಪತ್ರ ಬರೆಯಲು ಹೇಳಿದ್ಯಾರು? ಲಂಚ ಕೇಳಿದ್ದಕ್ಕೆ ರಾಜ್ಯಪಾಲರಿಗೆ ಪತ್ರ ಬರೆಯಲಾಯಿತೇ? ಈ ಪತ್ರ ಬರೆದಿರುವ ಹಿಂದಿನ ಉದ್ದೇಶವೇನು? ಹೀಗೆ ಹಲವು ಆಯಾಮಗಳಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.

ಹಿಂದಿನ ಲೇಖನಚಂದ್ರಯಾನ-3: ವಿಕ್ರಮ್ ಲ್ಯಾಂಡರ್ ತೆಗೆದ ಚಂದ್ರನ ಚಿತ್ರಗಳನ್ನು ಹಂಚಿಕೊಂಡ ಇಸ್ರೋ
ಮುಂದಿನ ಲೇಖನಪೊಲೀಸ್, RAW ಅಧಿಕಾರಿ ಎಂದು ಹೇಳಿಕೊಂಡು ವಂಚನೆ: ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಯ ಬಂಧನ